Samayanews.

Samayanews.

2024-11-14 10:39:49

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ರಾಜ್ಯಸಭಾ ಸದಸ್ಯರಾಗಿ ಅವಧಿ ಮುಗಿದ ನಂತರ ಸಂಸತ್ ಬಗ್ಗೆ ಪುಸ್ತಕ ಬರೆಯುತ್ತೇನೆ: ಸುಧಾ ಮೂರ್ತಿ

ಬೆಂಗಳೂರು :1980 ರ ದಶಕದಲ್ಲಿ ನಾನು ಸಂಸತ್ತಿನ ಬಗ್ಗೆ ಶ್ಯಾಮ ಪ್ರಸಾದ್ ಮುಖರ್ಜಿ (Shyam Prasad Mukherji) ಅವರ ಪುಸ್ತಕವನ್ನು ಓದಿದ್ದೆ. ಭಾರತ ಮತ್ತು ಸಂಸತ್ತಿನ ವಿಚಾರದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಅದರ ಬಗ್ಗೆ ಬರೆಯುತ್ತೇನೆ. ನಾನು ಯಾವುದರಾ ಬಗ್ಗೆಯೂ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಸಂಸದೆ ಮತ್ತು ಲೇಖಕಿಯಾಗಿರುವ ಸುಧಾ ಮೂರ್ತಿ (Sudha Murthy) ಅವರು  ಹೇಳಿದ್ದಾರೆ.

“ಆದಾಗ್ಯೂ, ನಾನು ಪುಸ್ತಕವನ್ನು ಬರೆಯಲು ಪ್ರಯತ್ನಿಸುವ ಮೊದಲು ನಾನು ರಾಜ್ಯಸಭಾ ಸದಸ್ಯನಾಗಿ ನನ್ನ ಅವಧಿಯನ್ನು ಪೂರ್ಣಗೊಳಿಸಬೇಕು” ಎಂದು ಸುಧಾ ಮೂರ್ತಿಯವರು ಭಾನುವಾರ ಖಾಸಗಿ ಸಂದರ್ಶದಲ್ಲಿ ಹೇಳಿದ್ದಾರೆ.

ಸುಧಾ ಮೂರ್ತಿಯವರು ನಟಿ ಹಾಗು ಸಹ ಲೇಖಕಿಯಾಗಿರುವ ಟ್ವಿಂಕಲ್ ಖನ್ನಾ ಅವರೊಂದಿಗೆ ತಮ್ಮ 300ನೇ ಪುಸ್ತಕದ ಶೀರ್ಷಿಕೆ ಮತ್ತು 46 ನೇ ಪುಸ್ತಕ – ‘ಗ್ರ್ಯಾಂಡ್ ಪಾ ಬ್ಯಾಗ್ ಆಫ್ ಸ್ಟೋರೀಸ್’ ಪುಸ್ತಕ ಬಿಡುಗಡೆಯ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದಾಗ ಈ ಬಗ್ಗೆ ತಿಳಿಸಿದ್ದಾರೆ. ಬೆಂಗಳೂರಿನ ಲಿಟ್ ಸ್ಪಿರಿಟ್ ಫೌಂಡೇಶನ್ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.

ಯಾರಾದರೂ ಪ್ರಯಾಣಕ್ಕೆ ಹೋಗುತ್ತಿದ್ದಾಗ ಅಥವಾ ಮನೆಯಿಂದ ಹೊರಬಂದಾಗ ನನ್ನ ಅಜ್ಜ ಹೇಳುತ್ತಿದ್ದ ಶುಭಾಶಯಗಳು ಹಾಗೂ ಅಜ್ಜ ಪಠಿಸುತ್ತಿದ್ದ ‘ಶ್ಲೋಕಗಳು’ ಈ ಪುಸ್ತಕದಲ್ಲಿದೆ ಎಂದು ಸುಧಾ ಮೂರ್ತಿ ಹೇಳಿದರು.

ನನ್ನ ಪುಸ್ತಕದಲ್ಲಿ ನನ್ನ ಮೊಮ್ಮಕ್ಕಳ ಪಾತ್ರಗಳು ಇವೆ, ಆದರೆ ಅವು ಭಾರತದಲ್ಲಿ ನೆಲೆಗೊಂಡ ಪಾತ್ರಗಳಾಗಿವೆ. ನಾನು UK ನಲ್ಲಿ, 10 ರಿಂದ 15 ದಿನಗಳವರೆಗೆ ಮಾತ್ರ ಇರುತ್ತಿದ್ದೆ. ಕೆಲವು ಕಥೆಗಳಲ್ಲಿ ಸ್ಥಳಗಳ ಬಗ್ಗೆ ಬರೆಯಲು, ನಾವು ಆ ಸ್ಥಳವನ್ನು ಚೆನ್ನಾಗಿ ತಿಳಿದುಕೊಳ್ಳಬೇಕು. ಜನರೊಂದಿಗೆ ಸಂವಹನ ನಡೆಸಬೇಕು. ಆಗ ಮಾತ್ರ ಸಂಸ್ಕೃತಿಯ ಒಂದು ನೋಟವನ್ನು ಪಡೆಯಲಾಗುವುದು. ಮತ್ತು ಅದರ ಬಗ್ಗೆ ಆರಾಮವಾಗಿ ಬರೆಯಬಹುದು ಎಂದು ಅವರು ಹೇಳಿದರು.

 

img
Author

Post a comment

No Reviews