ಉತ್ತರ ಪ್ರದೇಶ: ಆನ್ ಲೈನ್‌ನಲ್ಲಿ ಆರ್ಡ್‌ರ್ ಮಾಡಿದ ಅಮೂಲ್ ಐಸ್ ಕ್ರೀಮ್‌ನಲ್ಲಿ ಸತ್ತ ಚೇಳು ಪತ್ತೆಯಾಗಿರುವ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ. ಈ ಕುರಿತು ವಿಡಿಯೋ ಹಂಚಿಕೊಂಡಿರುವ ಮಹಿಳೆ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಐಸ್ ಕ್ರೀಂ ನಲ್ಲಿ ಕೀಟಗಳು ಸೇರಿಂದಂತೆ ಅನೇಕ ಜಂತುಗಳು ಪತ್ತೆಯಾಗುತ್ತಿರುವ ಘಟನೆ ಹೆಚ್ಚಾಗುತ್ತಿದೆ. ಈ ಹಿಂದೆ ಮುಂಬೈನಲ್ಲಿ ಮಹಿಳೆಯೊಬ್ಬರಿಗೆ ಐಸ್ ಕ್ರೀಂ ನಲ್ಲಿ ಬೆರಳು ಪತ್ತೆಯಾಗಿತ್ತು. ಈ ಘಟನೆ ಬೆನ್ನಲ್ಲೆ ಐಸ್ ಕ್ರೀಂ ನಲ್ಲಿ ಚೇಳು ಪತ್ತೆಯಾಗಿರುವುದರಿಂದ ಐಸ್ ಕ್ರೀಂ ಪ್ರಿಯರಿಗೆ ಆತಂಕ ಎದುರಾಗಿದೆ.
ಉತ್ತರ ಪ್ರದೇಶದ ನೋಯ್ಡಾದ ನಿವಾಸಿ ದೀಪಾ ಐಸ್ ಕ್ರೀಂ ಅನ್ನು ಆರ್ಡರ್ ಮಾಡಿದ್ದಾರೆ. ಆನ್ ಲೈನ್ ಬ್ಲಿಂಕಿಟ್ ಮೂಲಕ ಐಸ್ ಕ್ರೀಮ್ ಆರ್ಡರ್ ಪ್ಲೇಸ್ ಮಾಡಲಾಗಿದೆ. 195 ರೂಪಾಯಿ ಪಾವತಿಸಿದ್ದಾರೆ. ಕೆಲವೇ ಹೊತ್ತಲ್ಲಿ ಐಸ್ ಕ್ರೀಮ್ ದೀಪಾ ಮನೆ ಸೇರಿದೆ.
ಐಸ್ ಕ್ರೀಂ ಪ್ಯಾಕ್ ತೆರೆದ ಮಹಿಳೆಗೆ ಅಚ್ಚರಿಯಾಗಿದೆ. ಕಾರಣ ಐಸ್ ಕ್ರೀಂನಲ್ಲಿ ಸತ್ತ ಚೇಳೊಂದು ಪತ್ತೆಯಾಗಿದೆ. ಒಂದೆಡೆ ಆತಂಕ, ಆಕ್ರೋಶ ಎಲ್ಲವೂ ಹೆಚ್ಚಾಗಿದೆ. ಕಾರಣ ಐಸ್ ಕ್ರೀಂ ಮೇಲಿನ ಭಾಗದಲ್ಲೇ ಚೇಳು ಪತ್ತೆಯಾದ ಕಾರಣ ಅಪಾಯದಿಂದ ಪಾರಾಗಿದ್ದಾರೆ. ಮಕ್ಕಳು ಐಸ್ ಕ್ರೀಮ್ ತಿಂದಿದ್ದರೆ ಅಪಾಯ ಸಂಭವಿಸುವ ಸಾಧ್ಯತೆ ಇತ್ತು. ಅದೃಷ್ಠವಶಾತ್ ಯಾರೂ ತಿಂದಿರಲಿಲ್ಲ ಎಂದು ದೀಪಾ ಹೇಳಿದ್ದಾರೆ.
Post a comment
Log in to write reviews