ಬೆಂಗಳೂರು: ನಿಷೇಧದ ನಡುವೆಯೂ ಮಾರುಕಟ್ಟೆಗೆ ಲಗ್ಗೆಯಿಟ್ಟಿರುವ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಗಣೇಶ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಹದ್ದಿನ ಕಣ್ಣಿಟ್ಟಿದೆ. ಪಿಒಪಿ ಗಣೇಶ ವಿಗ್ರಹಗಳ ತಯಾರಕರು, ಮಾರಾಟಗಾರರು, ಖರೀದಿದಾರರ ವಿರುದ್ಧ ಕಾರ್ಯಾಚರಣೆ ನಡೆಸಿ ನಿರ್ದಾಕ್ಷಿಣ್ಯ ಕ್ರಮ ಕೈಗಳ್ಳಲು ಕೆಎಸ್‌ಪಿಸಿಬಿಯ ವಿಷೇಶ ತಂಡ ಸಜ್ಜಾಗಿದೆ.
ಪ್ರತಿ ತಂಡದಲ್ಲೂ ಪೊಲೀಸ್ ಇನ್ಸ್‌ಪೆಕ್ಟರ್, ಅಗ್ನಿಶಾಮಕ ದಳ, ಪರಿಸರ ಅಧಿಕಾರಿಗಳು ಸೇರಿ ಸಂಬಂಧಿಸಿ ಇಲಾಖೆಗಳ 8 ಅಧಿಕಾರಿಗಳು ಇರಲಿದ್ದಾರೆ. ಜಿಲ್ಲೆಗಳಲ್ಲಿ ಈ ತಂಡಗಳ ಜೊತೆಗೆ ಎಸ್‌ಪಿಗಳು ಸಮನ್ವಯ ಸಾಧೀಸಲಿದ್ದಾರೆ. ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಪರಿಸರ ಅಧಿಕಾರಿಗಳ ಜೊತೆಗೆ ಸಭೆ ನಡೆಸಿ ಈಗಾಗಲೆ ಪಿಒಪಿ ಮಾರಾಟ, ತಯಾರಿಕಾ ಘಟಕಗಳ ಮೇಲಿನ ದಾಳಿ ರೂಪುರೇಷೆ ಸಿದ್ಧಪಡಿಸಿದ್ದಾರೆ. ಇನ್ನು ಬೆಂಗಳೂರಿನ 8 ವಲಯಗಳಲ್ಲಿಯೂ ಕೆಎಸ್‌ಪಿಸಿಬಿಯ ಪ್ರಾದೇಶಿಕ ಅಧಿಕಾರಿಗಳು ಬಿಬಿಎಂಪಿ ಅಧೀಕಾರಿಗಳ ಜೊತೆಗೆ ಸೇರಿ ಪಿಒಪಿ ಗಣೇಶ ಮೂರ್ತಿಯನ್ನು ಪತ್ತೆಹಚ್ಚಲು ಸಜ್ಜಾಗಿದೆ.
ನೂರಾರು ಪಿಒಪಿ ಗಣೇಶ ಮೂರ್ತಿ ಜಪ್ತಿ:
ಈಗಾಗಲೆ ನಗರದ ಹಲವೆಡೆ ದಾಳಿ ನಡೆಸಿ ಅಲ್ಲಲ್ಲಿ ಪಿಒಪಿ ಮೂರ್ತಿಗಳನ್ನು ಜಪ್ತಿ ಮಾಡಲಾಗಿದೆ. ಪ್ರಮುಖವಾಗಿ ಬೆಂಗಳೂರಿನ ಗುಡುಮಾವು ಬಳಿಯ ಖಾಲಿ ಜಾಗದಲ್ಲಿ ಪ್ರತಿ ವರ್ಷದಂತೆ ವ್ಯಕ್ತಿಯೊಬ್ಬ ಪಿಒಪಿ ಗಣೇಶ ಮೂರ್ತಿ ತಯಾರಿಸಲು ಸಿದ್ಧತೆ ನಡೆಸಿದ್ದ ಎನ್ನಲಾಗಿದೆ. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಪರಿಸರ ಅಧಿಕಾರಿಗಳು ಆತನ ಗೋದಾಮಿಗೆ ದಾಳಿ ನಡೆಸಿ ಬೀಗ ಹಾಕಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಆತ ಬಿಡದಿ ಸಮೀಪಿದ ಖಾಸಗಿ ಜಮೀನಿನಲ್ಲಿ ಗಣೇಶ ಮೂರ್ತಿ ಮಾರಾಟಕ್ಕೆ ಯತ್ನಿಸಿ ಮತ್ತೆ ಕೆಎಸ್‌ಪಿಸಿಬಿ ಬಲೆಗೆ ಸಿಲುಕಿದ್ದಾನೆ. ಆತನ ಬಳಿ 20 ಸಾವಿರಕ್ಕೂ ಅಧಿಕ ಪಿಒಪಿ ಗಣೇಶ ಮೂರ್ತಿ ಇರುವ ಸುಳಿ ಸಿಕ್ಕಿದ್ದು, ಇದರ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಹೇಳಿದ್ದಾರೆ.
Post a comment
Log in to write reviews