ಚಿಕನ್ ಪ್ರಿಯರಿಗೆ ಸೈನ್ಸ್ ಅಂಡ್ ಎನ್ವಿರಾನ್ಮೆಂಟ್[ಸಿಎಇ] ಪ್ರಯೋಗಾಲಯ ಅಘಾತಕಾರಿ ಸುದ್ದಿಯನ್ನು ಬಹಿರಂಗ ಪಡಿಸಿದೆ.
ನಾವು ಸೇವಿಸುವ ಚಿಕನ್‌ನಲ್ಲಿ ಶೇಕಡಾ 40ರಷ್ಟು ಪ್ರತಿಜೀವಕ ಶೇಷಗಳನ್ನು ಹೊಂದಿದೆ ಎಂದು ವರದಿ ಮಾಡಿದೆ.
ಚಿಕನ್ ನಲ್ಲಿ ಪ್ರೋಟೀನ್ ವಿಟಮಿನ್ ಮತ್ತು ಖನಿಜಗಳಿವೆ. ಆದರೆ, ಕೆಲವು ಇತ್ತೀಚಿನ ಸಂಶೋಧನೆಗಳ ಪ್ರಕಾರ ಚಿಕನ್ ತಿನ್ನುವ ಜನರಲ್ಲಿ ರೋಗನಿರೋಧಕ ಶಕ್ತಿಯನ್ನು ದುಬ೯ಲಗೊಳಿಸುತ್ತದೆ, ಮತ್ತು ಪ್ರತಿಜೀವಕಗಳಿಗೆ ಕಡಿಮೆ ಒಳಗಾಗುತ್ತಾರೆ ಎಂದು ಬಹಿರಂಗಪಡಿಸಿದೆ.
ಕೋಳಿಗಳಿಗೆ ರೋಗಗಳಿಂದ ರಕ್ಷಿಸಲು ಅಥಾವಾ ವೇಗವಾಗಿ ಬೆಳೆಯಲು ಮತ್ತು ತೂಕವನ್ನು ಹೆಚ್ಚಿಸಲು ಪ್ರತಿಜೀವಕಗಳನ್ನು ನೀಡಲಾಗುತ್ತದೆ. ಚಿಕನ್ ಸೇವಿಸಿದರಿಂದ ದೇಹದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಏಕೆಂದರೆ ಚಿಕನ್ನಲ್ಲಿರುವ ಪ್ರತಿಜೀವಕಗಳು ನಿಮ್ಮ ದೇಹಕ್ಕೆ ಹೋಗುತ್ತವೆ. ಅದರ ನಂತರ, ನಿಮ್ಮ ದೇಹವು ಅದಕ್ಕೆ ಒಗ್ಗಿಕೊಳ್ಳುತ್ತದೆ. ಒಬ್ಬ ವ್ಯಕ್ತಿಯು ಅನಾರೋಗ್ಯಕ್ಕೆ ಒಳಗಾದಾಗ, ಪ್ರತಿಜೀವಕಗಳು ಸಾಕಷ್ಟು ವೇಗವಾಗಿ ಕೆಲಸ ಮಾಡುವುದಿಲ್ಲ ಎಂದು ಸಿಎಇ ಪ್ರಯೋಗಾಲಯ ತಿಳಿಸಿದೆ.
Post a comment
Log in to write reviews