Independence Day 2024: ಭಾರತವು ಆಗಸ್ಟ್ 15 ರ ಗುರುವಾರದಂದು ತನ್ನ 78 ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲು ಸಜ್ಜಾಗಿದೆ. ತ್ರಿವರ್ಣ ಧ್ವಜವನ್ನು ಹಾರಿಸಲು ಜನರಿಗೆ ಹೆಚ್ಚಿನ ಉತ್ತೇಜನ ನೀಡುವ ಸಲುವಾಗಿ ʼಹರ್ ಘರ್ ತಿರಂಗಾʼ ಅಭಿಯಾನವನ್ನು ಶುರು ಮಾಡಲಾಗಿದೆ. ಇದೇ ವೇಳೆ ಭಾರತೀಯ ಕರಾವಳಿ ಪಡೆ ಕೂಡಾ ಲಕ್ಷದ್ವೀಪದ ಸಾಗರದಡಿಯಲ್ಲಿ ವಿಶೇಷ ರೀತಿಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದೆ.
ಭಾರತವು ಆಗಸ್ಟ್ 15 ಅಂದರೆ ನಾಳೆ ತನ್ನ ಸ್ವಾತಂತ್ರ್ಯ ದಿನವನ್ನು ಆಚರಿಸಲು ಸಜ್ಜಾಗಿದೆ. ಎಲ್ಲೆಡೆ ತ್ರಿವರ್ಣ ರಂಗು ದೇಶವನ್ನು ಬೆಳಗುತ್ತಿದೆ, ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸುತ್ತಾ, ದೇಶಕ್ಕಾಗಿ ಅವರು ಮಾಡಿದ ತ್ಯಾಗವನ್ನು ಸ್ಮರಿಸುತ್ತಾ ಸ್ವಾತಂತ್ರ್ಯ ದಿನವನ್ನು ಆಚರಿಸಲು ಇಡೀ ದೇಶವೇ ಕಾತುರದಿಂದ ಕಾಯುತ್ತಿದೆ. ಇನ್ನೂ ತ್ರಿವರ್ಣ ಧ್ವಜವನ್ನು ಹಾರಿಸಲು ಜನರಿಗೆ ಹೆಚ್ಚಿನ ಉತ್ತೇಜನ ನೀಡುವ ಸಲುವಾಗಿ 78 ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಈ ಬಾರಿಯೂ ಕೂಡಾ ʼಹರ್ ಘರ್ ತಿರಂಗಾʼ ಅಭಿಯಾನವನ್ನು ನಡೆಸಲಾಗುತ್ತಿದೆ. ಇದೇ ವೇಳೆ ಸ್ವಾತಂತ್ರ್ಯ ದಿನವನ್ನು ಸ್ಮರಣೀಯವಾಗಿರಿಸಲು ಭಾರತೀಯ ಕರಾವಳಿ ಪಡೆ ಕೂಡಾ ಲಕ್ಷದ್ವೀಪದಲ್ಲಿ ಸಾಗರದಡಿಯಲ್ಲಿ ವಿಶೇಷ ರೀತಿಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದೆ. ಈ ರೋಮಾಂಚನಕಾರಿ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಕುರಿತ ವಿಶೇಷ ಪೋಸ್ಟ್ ಒಂದನ್ನು ಭಾರತೀಯ ಕರಾವಳಿ ಪಡೆ (Indian Costal Guard) ತನ್ನ ಅಧೀಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, “78 ನೇ ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನದಂದು ಹರ್ ಘರ್ ತಿರಂಗಾ ಅಭಿಯಾನದ ಭಾಗವಾಗಿ ಭಾರತೀಯ ಕರಾವಳಿ ಪಡೆ ಲಕ್ಷದ್ವೀಪದ ಶುದ್ಧ ನೀರಿನಡಿಯಲ್ಲಿ ರಾಷ್ಟ್ರ ಧ್ವಜವನ್ನು ಹಾರಿಸಿತು” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದೆ. ವೈರಲ್ ವಿಡಿಯೋದಲ್ಲಿ ಭಾರತೀಯ ಕರಾವಳಿ ಪಡೆ ಲಕ್ಷದ್ವೀಪದಲ್ಲಿ ಶುದ್ಧ ನೀರಿನಡಿಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿರುವ ರೋಮಾಂಚನಕಾರಿ ದೃಶ್ಯವನ್ನು ಕಾಣಬಹುದು.
Post a comment
Log in to write reviews