ಬೆಂಗಳೂರಿನಲ್ಲಿ ತಾಪಮಾನ ಗರಿಷ್ಠ 38.5 ಡಿಗ್ರಿ ಸೆಲ್ಸಿಯಸ್ ತಲುಪಿದ್ದು ಬಿಸಿಲಿನ ಬೇಗೆಗೆ ಜನ ಕಂಗಾಲಾಗಿದ್ದಾರೆ.
ಬಿಸಿ ಗಾಳಿ, ನೀರಿನ ಬಿಕ್ಕಟ್ಟು ಮತ್ತಿತರ ಕಾರಣಗಳಿಂದ ನಗರದಲ್ಲಿ ಸೋಂಕು ಹರಡುವಿಕೆ ಹೆಚ್ಚಾಗುತ್ತಿದೆ. ಜನರಲ್ಲಿ ಟೈಫಾಯ್ಡ್ ಮತ್ತು ತೀವ್ರವಾದ ಜಠರ ಕರುಳಿನ ಉರಿಯೂತ ಅಥವಾ ಗ್ಯಾಸ್ಟ್ರೋಎಂಟರೈಟಿಸ್ ಪ್ರಕರಣಗಳಲ್ಲಿ ಗಮನಾರ್ಹ ಏರಿಕೆ ಕಂಡಿದೆ ಎಂದು ಖಾಸಗಿ ಆಸ್ಪತ್ರೆಗಳ ಮೂಲಗಳು ತಿಳಿಸಿವೆ.
ಟೈಫಾಯ್ಡ್ ನೀರಿನಿಂದ ಹರಡುತ್ತಿದೆ ಆದರೆ ಜಠರ ಹಾಗೂ ಕರುಳು ಸಂಬಂಧಿತ ಸಮಸ್ಯೆಗಳು ಕಲುಷಿತ ನೀರು ಆಹಾರದಿಂದ ಹರಡುತ್ತಿದೆ ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ.
Post a comment
Log in to write reviews