ನ್ಯೂಯಾರ್ಕ್: ಟಿ20 ವಿಶ್ವಕಪ್‌ನಲ್ಲಿ ಇಂದು ಭಾರತ ತನ್ನ ಮೊದಲ ಪಂದ್ಯವನ್ನಾಡಲಿದೆ. ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಟೀಂ ಇಂಡಿಯಾ, ಐರ್ಲೆಂಡ್ ಸವಾಲು ಸ್ವೀಕರಿಸಲಿದೆ. ಸಂಜೆ 8 ಗಂಟೆಗೆ ಪಂದ್ಯ ಆರಂಭವಾಗಲಿದ್ದು, ಮೊದಲ ಪಂದ್ಯದಲ್ಲಿ ಗೆಲುವಿನ ಶುಭಾರಂಭ ಮಾಡಲು ರೋಹಿತ್ ಶರ್ಮಾ ಪಡೆ ತುದಿಗಾಲಿನಲ್ಲಿ ನಿಂತಿದೆ. ಕಳೆದ ಬಾಂಗ್ಲಾದೇಶ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಟೀಂ ಇಂಡಿಯಾ, ಇವತ್ತು ಅದೇ ಉತ್ಸಾಹದಲ್ಲಿ ಕಣಕ್ಕಿಳಿಯಲಿದೆ.
ಕಳೆದ ಅಭ್ಯಾಸ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಸೋತಿದ್ದ ಐರ್ಲೆಂಡ್, ಇಂದು ಭಾರತಕ್ಕೆ ಬಲಿಷ್ಟ ಪೈಪೋಟಿ ನೀಡಲು ಸಜ್ಜಾಗಿದೆ. ಇನ್ನು ಭಾರತಕ್ಕೆ, ಐರ್ಲೆಂಡ್ ಕಠಿಣ ಸವಾಲು ಅಲ್ಲದೇ ಇದ್ದರೂ ಯುವ ಪಡೆಯನ್ನ ಕಡೆಗಣಿಸುವಂತಿಲ್ಲ. ಯಾಕಂದ್ರೆ ಭಾರತ ಕೊಂಚ ಯಾಮಾರಿದ್ರೂ ಕೂಡ ಸೋಲಿನ ಆಘಾತ ಅನುಭವಿಸಬೇಕಾಗುತ್ತೆ. ಟೀಂ ಇಂಡಿಯಾ ಇವತ್ತಿನ ಪಂದ್ಯದಲ್ಲಿ ಯಾರನ್ನ ಕಣಕ್ಕಿಳಿಸುತ್ತೆ ಅನ್ನೋದು ಕುತೂಹಲ ಮೂಡಿಸಿದೆ. ಭಾರತ ತಂಡದಲ್ಲಿರುವ ಎಲ್ಲ ಆಟಗಾರರು ಉತ್ತಮ ಫಾರ್ಮ್‌ನಲ್ಲಿದ್ದು, ಯಾರು ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆದುಕೊಳ್ಳಲಿದ್ದಾರೆ ಅನ್ನೋದನ್ನ ಕಾದು ನೋಡಬೇಕಿದೆ.
ರೋಹಿತ್ ಜೊತೆ ಇನ್ನಿಂಗ್ಸ್ ಓಪನ್ ಮಾಡ್ತಾರಾ ಕೊಹ್ಲಿ..?
ಟೀಂ ಇಂಡಿಯಾದಲ್ಲಿ ಓಪನಿಂಗ್ ಸ್ಲಾಟ್‌ನಲ್ಲಿ ಯಾರು ಕಣಕ್ಕಿಳಿಯುತ್ತಾರೆ ಅನ್ನೋದು ಕುತೂಹಲ ಮೂಡಿಸಿದೆ. ಏಕೆಂದ್ರೆ ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಇನ್ನಿಂಗ್ಸ್ ಆರಂಭಿಸಿದ್ದ ವಿರಾಟ್ ಕೊಹ್ಲಿ ಭಾರತದ ಪರವೂ ಇನ್ನಿಂಗ್ಸ್ ಆರಂಭಿಸ್ತಾರಾ ಅನ್ನೋದು ಇವತ್ತಿನ ಪಂದ್ಯದಲ್ಲಿ ಗೊತ್ತಾಗಲಿದೆ. ಇನ್ನು ಇತ್ತ ರೈಟ್ ಹ್ಯಾಂಡ್ ಲೆಫ್ಟ್ ಹ್ಯಾಂಡ್ ಕಾಂಬಿನೇಷನ್‌ನಲ್ಲಿ ಕಣಕ್ಕಿಳಿಯಲು ಟೀಂ ಇಂಡಿಯಾ ತಯಾರಿ ನಡೆಸಿದೆ. ಒಂದು ವೇಳೆ ಇದೇ ತಂತ್ರ ಬಳಸಿದ್ರೆ ರೋಹಿತ್ ಜೊತೆ ಯಶ್ವಸ್ವಿ ಜೈಸ್ವಾಲ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ.
ಇನ್ನು ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್, ಶಿವಂ ದುಬೆ, ರಿಷಬ್ ಪಂತ್, ಹಾರ್ದಿಕ್ ಪಾಂಡ್ಯ ಹಾಗೂ ರವೀಂದ್ರ ಜಡೇಜಾ ಕಣಕ್ಕಿಳಿಯುವ ಸಾಧ್ಯತೆ ಇದೆ.
ಟೀಂ ಇಂಡಿಯಾ ಸ್ಟಾಂಗ್ ಬೌಲಿಂಗ್ ಯೂನಿಟ್ ಹೊಂದಿದ್ದು, ವೇಗದ ವಿಭಾಗದಲ್ಲಿ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಹಾಗೂ ಅರ್ಶ್‌ದೀಪ್ ಸಿಂಗ್ ಮೋಡಿ ಮಾಡಲು ತಯಾರಾಗಿದ್ದಾರೆ.. ಸ್ಪಿನ್ ವಿಭಾಗದಲ್ಲಿ ಕುಲ್ದೀಪ್ ಯಾದವ್ ಹಾಗೂ ರವೀಂದ್ರ ಜಡೇಜಾ ಕಮಾಲ್ ಮಾಡಲು ರೆಡಿಯಾಗಿದ್ದಾರೆ.
ಇದೇ ಮೊದಲ ಬಾರಿಗೆ ಅಮೆರಿಕಾದಲ್ಲಿ ಟಿ20 ವಿಶ್ವಕಪ್ ನಡೆಯುತ್ತಿದ್ದು, ಮೊದಲ ಸವಾಲಿನಲ್ಲಿ ಗೆದ್ದು ಬೀಗಲು ಟೀಂ ಇಂಡಿಯಾ ತಯಾರಾಗಿದೆ.
Post a comment
Log in to write reviews