ಮೇ14ರಂದು ನಡೆದ ವಿಶೇಷ ಅಧಿವೇಶನದ 10 ನೇ ತುರ್ತು ಸಭೆಯಲ್ಲಿ ಭಾರತ ಪ್ಯಾಲೆಸ್ಟೈನ್‌ನ ಸದಸ್ಯತ್ವವನ್ನು ಬೆಂಬಲಿಸಿ ಪ್ಯಾಲೆಸ್ಟೈನ್‌ನ ಪರವಾಗಿ ಮತ ಹಾಕಿತು.
ಭಾರತದ ಖಾಯಂ ಪ್ರತಿನಿಧಿ ರುಚಿರಾ ಕಾಂಬೋಜ್ ಗಾಜಾ ಸಂಘರ್ಷದಲ್ಲಿ ನಾಗರಿಕರ ಸಾವನ್ನು ಖಂಡಿಸಿ ಎಲ್ಲಾ ದೇಶಗಳು ಅಂತರರಾಷ್ಟ್ರೀಯ ಕಾನೂನು ಮತ್ತು ಮಾನವೀಯ ಕಾನೂನನ್ನು ಎಲ್ಲಾ ಸಂದರ್ಭಗಳಲ್ಲಿಯೂ ಗೌರವಿಸಬೇಕು ಎಂದಿದ್ದಾರೆ.
ಮಾತನ್ನು ಮುಂದುವರೆಸುತ್ತ, "ಭಾರತವು ಹಲವು ಬಾರಿ ಶಾಂತಿ ಪರ ನಿಲುವು ವ್ಯಕ್ತ ಪಡಿಸಿದೆ ಹಾಗು ಸಂಘರ್ಷದಲ್ಲಾಗುತ್ತಿರುವ ಮಹಿಳಾ - ಮಕ್ಕಳ ಸಾವು ನೋವುಗಳು ಸಹಿಸಲಾಗದು" ಎಂದಿದ್ದಾರೆ.
ಹಾಗು 2023 ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ನಡೆದ ದಾಳಿಯನ್ನು ಖಂಡಿಸಿ ಶೀಘ್ರವಾಗಿ ಎಲ್ಲಾ ಒತ್ತೆಯಾಳುಗಳನ್ನು ಯಾವುದೇ ಷರತ್ತು ಅಥವಾ ತಡೆಯಿಲ್ಲದೆ ಬಿಡುಗಡೆ ಮಾಡಬೇಕೆಂದು ಘೋಷಿಸಿದ್ದಾರೆ. ಮಾತನ್ನು ಮುಗಿಸುತ್ತಾ "ಭಾರತವು ದ್ವಿರಾಷ್ಟ್ರ ನಿರ್ಣಯನ್ನು ಸದಾ ಗೌರವಿಸುತ್ತದೇ ಹಾಗಾಗಿ ಪ್ಯಾಲೆಸ್ಟೈನ್ ಗೆ ನ್ಯಾಯ ದೊರೆಕಿಸುವ ದೃಷ್ಟಿಯಲ್ಲಿ ಪ್ಯಾಲೆಸ್ಟೈನ್ಪರ ಮತ ಹಾಕಿದೆ, ಇದರಿಂದ ಅತಿಶೀಘ್ರವಾಗಿ ಪ್ಯಾಲೆಸ್ಟೈನ್ ಗೆ UN General Assembly ಸದಸ್ಯತ್ವದೊರೆಯಲಿದೆ ಎಂದು ವಿಶ್ವಾಸವಿದೆ" ಎಂದರು.
Tags:
- India News
- Kannada News
- unga vote on palestinian membership
- palestinian membership in un
- un palestinian membership
- unga votes palestine membership
- palestinian state un membership
- un palestine membership vote
- india support palestine membership un
- un votes palestine membership
- palestine membership in un
- united nations palestine membership
- un palestine membership
- palestine un membership
- un membership palestine
- palestine on un membership
- un membership to palestine
Post a comment
Log in to write reviews