ಪ್ಯಾರಿಸ್ : 17ನೇ ಆವೃತ್ತಿ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಪದಕ ಗಳಿಕೆಯ ನಾಗಾಲೋಟ ಮುಂದುವರಿದಿದೆ. ಶುಕ್ರವಾರ ದೇಶದ ಪದಕ ಖಾತೆಗೆ ಮತ್ತೆ ಎರಡು ಪದಕ ಸೇರ್ಪಡೆಗೊಂಡಿದೆ.
ಪುರುಷರ ಹೈಜಂಪ್ ಟಿ64 ವಿಭಾಗದಲ್ಲಿ ಪ್ರವೀಣ್ ಕುಮಾರ್, ಏಷ್ಯಾ ದಾಖಲೆಯೊಂದಿಗೆ ಬಂಗಾರದ ಪದಕಕ್ಕೆ ಕೊರಳೊಡ್ಡಿದರು. ಇದರೊಂದಿಗೆ ಭಾರತದ ಪದಕ ಸಂಖ್ಯೆ 27ಕ್ಕೆ ಹೆಚ್ಚಳವಾಗಿದೆ. ಭಾರತ ಈ ಭಾರಿ 6 ಚಿನ್ನದ ಪದಕ ಗೆದ್ದಿದ್ದು, 9 ಬೆಳ್ಳಿ, 12 ಕಂಚಿನ ಪದಕಗಳು ದೇಶದ ಖಾತೆಗೆ ಸೇರ್ಪಡೆಗೊಂಡಿವೆ.
ಶುಕ್ರವಾರ ನಡೆದ ಸ್ಪರ್ಧೆಯಲ್ಲಿ ನೋಯ್ಡಾದ 21 ವರ್ಷದ ಪ್ರವೀಣ್ ಕುಮಾರ್ 2.08 ಮೀ. ಎತ್ತರಕ್ಕೆ ನೆಗೆದರು. ಈ ಮೂಲಕ ಅವರು ಏಷ್ಯನ್ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡರು. ಮೊದಲ ಪ್ರಯತ್ನದಲ್ಲಿ 1.89 ಮೀ. ಎತ್ತರಕ್ಕೆ ನೆಗೆದ ಪ್ರವೀಣ್, ಬಳಿಕ 1.93 ಮೀಟರ್, 1.97 ಮೀಟರ್, 2.00 ಮೀಟರ್, 2.03 ಮೀಟರ್, 2.06 ಮೀಟರ್ ಪ್ರಯತ್ನಗಳಲ್ಲೂ ಸಫಲರಾಗಿದ್ದಾರೆ. ಬಳಿಕ 2.08 ಮೀ. ಎತ್ತರಕ್ಕೆ ಹಾರುವ ಎಲ್ಲಾ 3 ಪ್ರಯತ್ನಗಳಲ್ಲಿ ಯಶಸ್ಸು ಸಾಧಿಸುವ ಮೂಲಕ ಅಗ್ರಸ್ಥಾನ ಗಿಟ್ಟಿಸಿಕೊಂಡರು. ಡೆರೆಕ್ ಲಾಕಿ ಡೆಂಡ್ 2.06 ಮೀ. ಎತ್ತರಕ್ಕೆನೆಗೆದು ಬೆಳ್ಳಿ ಪದಕ ಪಡೆದರೆ, ಉಜೇಕಿಸ್ತಾನದ ಟೆಮುರ್‌ಬೆಕ್ ಗಿಯಾಜೊವ್ 2.03 ಮೀ. ಎತ್ತರಕ್ಕೆ ಹಾರಿ ಕಂಚಿನ ಪದಕ ಜಯಿಸಿದರು.
Post a comment
Log in to write reviews