ಜಮ್ಮು ಮತ್ತು ಕಾಶ್ಮೀರದ ತಡರಾತ್ರಿ ಶಂಕಿತ ಪಾಕಿಸ್ತಾನ್ ಡ್ರೋನ್ ಮೇಲೆ ಭಾರತೀಯ ಸೇನಾ ಪಡೆ ಗುಂಡಿನ ದಾಳಿ ನಡೆಸಿದೆ. ಭಾರತದೊಳಗೆ ಅತಿಕ್ರಮಣ ಮಾಡಿದ್ದ ಡ್ರೋನ್ ಹಿಂದಿರುಗಿ ಪಾಕಿಸ್ತಾನದತ್ತ ಹೋಗುತ್ತಿರುವ ಸಂದರ್ಭದಲ್ಲಿ ಭಾರತೀಯ ಸೇನೆ ಗುಂಡಿನ ದಾಳಿ ನಡೆಸಿದೆ ಎಂದು ಪಿಟಿಐ ವರದಿ ಮಾಡಿದೆ.
ಡ್ರೋನ್ ಉರುಳಿಸಿದ ಬಳಿಕ ಕೇರಿ ವಲಯದ ಪ್ರದೇಶದಲ್ಲಿ ಸೇನಾ ಸಿಬ್ಬಂದಿ ವ್ಯಾಪಕ ಶೋಧ ನಡೆಸಲಾಗಿದ್ದು, ಯಾವುದೇ ರೀತಿಯ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ. ಶಸ್ತ್ರಾಸ್ತ್ರಗಳು ಮತ್ತು ಮಾದಕ ವಸ್ತುಗಳನ್ನು ರವಾನಿಸಲು ಡ್ರೋನ್ ಬಳಕೆ ಮಾಡಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ. ಈ ಹಿನ್ನೆಲೆ ಗಡಿ ಪ್ರದೇಶದಲ್ಲಿ ಅನುಮಾನಾಸ್ಪದ ವ್ಯಕ್ತಿ ಅಥವಾ ಡ್ರೋನ್‌ಗಳ ಚಲನವಲನದ ಮೇಲೆ ಭಾರತೀಯ ಸೇನೆ ಹದ್ದಿನಕಣ್ಣು ಇರಿಸಿದೆ.
ಶನಿವಾರ ಮತ್ತು ಭಾನುವಾರದ ಮಧ್ಯರಾತ್ರಿಯಲ್ಲಿ ಪೂಂಚ್ ಜಿಲ್ಲೆಯ ಅಲ್ಲಾಪಿರ್ ಪ್ರದೇಶದ ಬಳಿ ಆಕಾಶದಲ್ಲಿ ಬ್ಲಿಂಕ್ ಲೈಟ್ ಹಾರುವ ವಸ್ತು ಕಾಣಿಸಿಕೊಂಡಿತ್ತು. ಕೂಡಲೇ ಅಲರ್ಟ್ ಆದ ಭದ್ರತಾಪಡೆದ ಸುತ್ತಲಿನ ಪ್ರದೇಶವನ್ನು ತಮ್ಮ ವಶಕ್ಕೆ ಪಡೆದುಕೊಂಡು ಇಂಚಿಂಚೂ ಜಾಗವನ್ನು ತಪಾಸಣೆ ನಡೆಸಿದ್ದಾರೆ. ಆದರೆ ಯಾವುದೇ ರೀತಿಯ ಅನುಮಾನಾಸ್ಪದ ಅಥವಾ ಶಸ್ತ್ರಾಸ್ತ್ರಗಳು ಸಿಕ್ಕಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Tags:
- India News
- Kannada News
- indian army shot down pakistani drone
- india shot down pakistani drone
- pakistani drone shot down by india
- indian drone shot down by pakistan
- pakistan drone shot down
- pakistan drone shot down in amritsar
- pakistani drone shot down
- pakistan indian drone
- bsf shot down pakistan drone
- pak spy drone shot down by indian army
- pakistani drone shot down in amritsar
- pakistan army shot sown indian air force plane
- shot down indian drone
- india pakistani drone
Post a comment
Log in to write reviews