ಪ್ಯಾರಿಸ್: ಭಾರತದ ಗೋಲ್ಡನ್ ಬಾಯ್, ಎಂದೇ ಪ್ರಖ್ಯಾತಿ ಪಡೆದಿರುವ ನೀರಜ್ ಚೋಪ್ರಾ ಅವರು ಪ್ಯಾರಿಸ್ ಒಲಿಂಪಿಕ್ಸ್ 2024ರ ಜಾವೆಲಿನ್ ಥ್ರೋ ಫೈನಲ್ ಪ್ರವೇಶ ಪಡೆದಿದ್ದಾರೆ. ಅರ್ಹತಾ ಸುತ್ತಿನಲ್ಲಿ ಮೊದಲ ಸ್ಥಾನ ಪಡೆದ ನೀರಜ್ ಮತ್ತೊಂದು ಚಿನ್ನದ ಪದಕ ಗೆಲ್ಲುವ ಸೂಚನೆ ಕೊಟ್ಟಿದ್ದಾರೆ.
ಅರ್ಹತಾ ಸುತ್ತಿನಲ್ಲಿ ಕೇವಲ ಒಂದೇ ಒಂದು ಥ್ರೋ ಮಾಡಿದ ನೀರಜ್ ಚೋಪ್ರಾ ಅಲ್ಲೇ ತನ್ನ ಫೈನಲ್ ಸ್ಥಾನ ಖಚಿತ ಪಡಿಸಿಕೊಂಡರು. ಮಂಗಳವಾರ (ಆ.06) ನಡೆದ ಬಿ ಗುಂಪಿನ ಅರ್ಹತಾ ಸುತ್ತಿನಲ್ಲಿ ಚೋಪ್ರಾ ಅವರು 89.34 ಮೀಟರ್ ದೂರ ಜಾವೆಲೆನ್ ಎಸೆದು ಅರ್ಹತಾ ಸುತ್ತಿನಲ್ಲಿ ಮೊದಲ ಸ್ಥಾನ ಗಳಿಸಿದರು. ಅಲ್ಲದೆ ತಮ್ಮ ಮೊದಲ ಪ್ರಯತ್ನದಲ್ಲಿಯೇ ಫೈನಲ್‌ಗೆ ಅರ್ಹತೆ ಪಡೆದರು.
2022ರ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ 90 ಮೀಟರ್ ಗಡಿ ದಾಟಿದ್ದ ಪಾಕಿಸ್ತಾನದ ಅರ್ಶದ್ ನದೀಂ ಕೂಡಾ ನೀರಜ್ ಅವರೊಂದಿಗೆ ಫೈನಲ್ ಪ್ರವೇಶ ಪಡೆದಿದ್ದು, ಅವರು 86.59 ಮೀಟರ್ ಎಸೆದರು.
ಮೊದಲ ಬಾರಿಗೆ ಒಲಿಂಪಿಕ್ಸ್ ನಲ್ಲಿ ಆಡುತ್ತಿರುವ ಭಾರತದ ಮತ್ತೋರ್ವ ಎಸೆತಗಾರ ಕಿಶೋರ್ ಜೇನಾ ಅವರು ಫೈನಲ್ ಗೆ ಅರ್ಹತೆ ಪಡೆಯಲು ವಿಫಲರಾದರು. ಅವರು 80.73 ಮೀಟರ್ ಎಸೆದರು.
ಗ್ರೆನಡಾದ ಆಂಡರ್ಸನ್ ಪೀಟರ್ಸ್ ಪಾಕಿಸ್ತಾನದ ಅರ್ಶದ್ ನದೀಂ ಅವರ ಥ್ರೋ ಮೀರಿಸಿದರು. ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ಪುರುಷರ ಜಾವೆಲಿನ್ ಥ್ರೋ ಈವೆಂಟ್‌ನ ಫೈನಲ್‌ಗೆ ಅರ್ಹತೆ ಪಡೆದರು. ನೀರಜ್ ಚೋಪ್ರಾ ಮತ್ತು ನದೀಮ್ ಅವರಂತೆಯೇ, ಆಂಡರ್ಸನ್ ಕೂಡ ತಮ್ಮ ಮೊದಲ ಪ್ರಯತ್ನದಲ್ಲಿ 88.63 ಮೀ ದೂರವನ್ನು ದಾಖಲಿಸುವ ಮೂಲಕ ಫೈನಲ್ ಪ್ರವೇಶ ಪಡೆದರು.
Post a comment
Log in to write reviews