ಭಾರತೀಯ ರೈಲ್ವೆಯಲ್ಲಿ 1700 ಮಂದಿ ಮಹಿಳಾ ಚಾಲಕರಿದ್ದಾರೆ. ಆದರೆ ಇವರೆಲ್ಲಾ ಮುಜುಗರ ಪಡುವಂತಹ ಅತ್ಯಂತ ಗಂಭೀರ ಸಮಸ್ಯೆ ಎದುರಿಸುತ್ತಿದ್ದಾರೆ. ಹಾಗಾದರೆ ಆ ಗಂಭೀರ ಸಮಸ್ಯೆಯಾವುದು???
ಮಹಿಳಾ ಚಾಲಕಿಯರು ರೈಲುಗಳನ್ನು ಓಡಿಸುವಾಗ ಎದುರಿಸುವ ಪ್ರಮುಖ ಸಮಸ್ಯೆಯೆಂದರೆ ಶೌಚಾಲಯದ ಸಮಸ್ಯೆ ಇದು ಅವರನ್ನು ಭೂತದಂತೆ ಕಾಡುತ್ತಿದೆ. ಯಾಕೆಂದರೆ ಮಹಿಳಾ ಚಾಲಕಿಯರು ಶೌಚಾಲಯಕ್ಕೆ ಹೋಗುವ ವಿಷಯವನ್ನು ಬಹಿರಂಗ ಪಡಿಸಿಕೊಂಡೆ ಹೋಗಬೇಕಾದ ಅನಿವಾರ್ಯ ಪರಿಸ್ಥಿತಿ ಭಾರತೀಯ ರೈಲ್ವೆ ಸೃಷ್ಟಿಸಿದೆ.
ಶೌಚದ ವಿಷಯವನ್ನೂ ನೂರಾರು ಜನರು ಆಲಿಸುವ ವಾಕಿಟಾಕಿಯಲ್ಲಿ ಹೇಳಬೇಕಾದ ಅನಿವಾರ್ಯತೆಯು ಮುಜುಗರದ ಜೊತೆಗೆ, ಕೆಲವೊಮ್ಮೆ ಅಸುರಕ್ಷತೆಗೂ ಕಾರಣವಾಗುತ್ತದೆ ಎಂದು ಮಹಿಳಾ ಚಾಲಕಿಯರು ತಾವು ಎದುರಿಸುತ್ತಿರುವ ಸಮಸ್ಯೆ ಪ್ರಥಮಬಾರಿ ಬಹಿರಂಗ ಪಡಿಸಿದ್ದಾರೆ.
ಹಾಲಿ ಭಾರತೀಯ ರೈಲ್ವೆಯಲ್ಲಿ 1700 ಮಹಿಳಾ ಚಾಲಕರಿದ್ದಾರೆ. ಅವರಲ್ಲಿ ಶೇಕಡಾ 90 ಮಂದಿ ಮಹಿಳೆಯರು ಸಹ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರತಿ ಬಾರಿ ಶೌಚಾಲಯಕ್ಕೆ ಹೋಗುವ ಮುನ್ನ ತಮ್ಮ ಪುರುಷ ಚಾಲಕರ ಅನುಮತಿ ಕೇಳಬೇಕಾಗುತ್ತದೆ.
ಒಂದು ವೇಳೆ ಶೌಚಾಲಯಕ್ಕೆ ಹೋಗಬೇಕೆಂದರೆ ಚಾಲಕರ ಕ್ಯಾಬಿನ್‌ನಿಂದ ಇಳಿದು ಪ್ರಯಾಣಿಕರ ಕ್ಯಾಬಿನ್‌ನ ಶೌಚಾಲಯಕ್ಕೆ ತೆರಳಬೇಕು. ಇದಕ್ಕೂ ಮುನ್ನ ಅವರ ಪುರುಷ ಚಾಲಕರ ಅನುಮತಿ ಪಡೆದ ಹೋಗಬೇಕು. ಪ್ರಯಾಣಿಕರ ರೈಲಿನಲ್ಲಿ ಈ ವಿಷಯ ಹೆಚ್ಚು ಸಮಸ್ಯೆ ತರದು.
ಆದರೆ ಸರಕು ಸಾಗಣೆ ರೈಲಿನಲ್ಲಿನ ಮಹಿಳಾ ಚಾಲಕರಿಗೆ ಶೌಚಕ್ಕೆ ಹೋಗುವುದೇ ದೊಡ್ಡ ಸಮಸ್ಯೆ. ಕಾರಣ ಅದರಲ್ಲಿ ಶೌಚಾಲಯ ಇರುವುದಿಲ್ಲ. ಹೀಗಾಗಿ ಮಹಿಳಾ ಚಾಲಕರು ತಾವು ಶೌಚಕ್ಕೆ ಹೋಗಬೇಕಿದ್ದರೆ ಮೊದಲೇ ಮುಂದಿನ ನಿಲ್ದಾಣದ ಅಧಿಕಾರಿಗಳಿಗೆ ವಾಕಿಟಾಕಿ ಮೂಲಕ ಸಂದೇಶ ರವಾನಿಸಬೇಕು. ಅದು ಬಹಳಷ್ಟು ಜನರ ಕಿವಿಗೆ ಬೀಳುತ್ತದೆ. ಜೊತೆಗೆ ನಿಲ್ದಾಣದಲ್ಲಿ ಇಳಿದು ಹೋಗುವಾಗ ಕೆಲವು ಅಧಿಕಾರಿಗಳು ವಿಚಿತ್ರವಾಗಿ ನಮ್ಮನ್ನು ನೋಡುತ್ತಾರೆ.
ಇನ್ನು ಕೆಲವು ಕಡೆ ನಿರ್ಜನ ನಿಲ್ದಾಣಗಳಲ್ಲಿ ಹೀಗೆ ಮೊದಲೇ ಮಾಹಿತಿ ನೀಡಿ ಶೌಚಾಲಯಕ್ಕೆ ಹೋಗುವುದು ಸುರಕ್ಷತೆಗೂ ಧಕ್ಕೆ ತರುತ್ತದೆ ಎಂದು ಮಹಿಳಾ ಚಾಲಕರು ತಮ್ಮ ನೋವು ತೋಡಿಕೊಂಡಿದ್ದಾರೆ.ಈ ಸಮಸ್ಯೆಗಳ ಜೊತೆಗೆ ಮಹಿಳಾ ಸಿಬ್ಬಂದಿಗಳಿಗೆ ಶೌಚಾಲಯಕ್ಕೆ ಹೋಗಬೇಕಾದಾಗ ಎಲ್ಲ ಸಂದರ್ಭದಲ್ಲಿ ಅನುಮತಿಯೂ ಸಿಗುವುದಿಲ್ಲ. ಸಮಯ ಉಳಿಸಲು, ಹಿಂದಿನಿಂದ ಪ್ರಮುಖ ರೈಲುಗಳು ಬರುವ ವೇಳೆ ಶೌಚಾಲಯಕ್ಕೆ ಹೋಗದಂತೆ ಅಧಿಕಾರಿಗಳು ತಿಳಿಸುತ್ತಾರೆ ಎಂದು ಹೌರಾ ವಿಭಾಗದ ಮಹಿಳಾ ಪೈಲೆಟ್ ತಮ್ಮ ಸಮಸ್ಯೆ ತಿಳಿಸಿದರು.
ಅಲ್ಲದೇ ಈ ಮುಜಗರದ ಪರಿಸ್ಥಿತಿಯನ್ನು ತಡೆಯುವುದಕ್ಕಾಗಿಯೇ ಹಲವರು ಕರ್ತವ್ಯಕ್ಕೆ ಹಾಜರಾಗುವ ಸಂದರ್ಭದಲ್ಲಿ ನೀರು ಕುಡಿಯುವುದಕ್ಕೆ ಹಿಂದೇಟು ಹಾಕುತ್ತಾರೆ. ಅಲ್ಲದೇ ಕರ್ತವ್ಯದ ವೇಳೆಯಲ್ಲಿಯೂ ನೀರು ಕುಡಿಯುವುದಿಲ್ಲ. ಮಾತ್ರವಲ್ಲದೇ, ನೀರಿನ ಅಂಶ ಇರುವ ಯಾವುದೇ ಪದಾರ್ಥವನ್ನು ಸೇವಿಸುವುದಿಲ್ಲ., ಇದರಿಂದ ಮಹಿಳಾ ಲೋಕೋ ಪೈಲೆಟ್‌ಗಳಿಗೆ ನಿರ್ಜಲೀಕರಣ ಸೇರಿದಂತೆ ಬೇರೆ ಬೇರೆ ಆರೋಗ್ಯ ಸಮಸ್ಯೆಗಳು ಕಾಡುತ್ತಿದೆ ಎಂದು ಮಹಿಳಾ ಚಾಲಕರು ಹೇಳುತ್ತಾರೆ.
ಭಾರತೀಯ ರೈಲ್ವೆ ಶೌಚಾಲಯ ವಿಚಾರದಲ್ಲಿ ಮಹಿಳಾ ಸ್ನೇಹಿ ವ್ಯವಸ್ಥೆ ಜಾರಿಗೊಳಿಸಿದರೆ ತಾವು ಇನ್ನಷ್ಟು ಪರಿಣಾಮಕಾರಿಯಾಗಿ ಧಕ್ಷತೆಯಿಂದ ಕರ್ತವ್ಯ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Tags:
- India News
- Kannada News
- indianrailways
- indian railways
- travelling with pets in indian railways
- indian railways passengers!
- indian railway
- coimbatore railway station
- bonanza for indian railways
- indian railways video
- railway medical examination
- train videos indian railways
- indian railways mega projects
- railway station signal explain
- indian bike driving 3d railway station
- indian bikes driving 3d railway station
- benefits of ladies quota in railway reservation
Post a comment
Log in to write reviews