ಜಗಳೂರು: ರೈತರಿಗೆ ಸಮರ್ಪಕವಾದ ಪರಿಹಾರ ನೀಡದೆ ರಿನ್ಯೂವ್ ಕಂಪನಿ ಅನ್ಯಾಯ ಮಾಡಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಜಮೀನಿನಲ್ಲಿ ಪ್ರತಿಭಟನೆ ನಡೆಸಿದರು.
ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಮೆಳ್ಳಕಟ್ಟೆ ಪದ್ಮ ಮಾತನಾಡಿ, ಉಜ್ಜನಗೌಡ್ರು ಎಂಬ ರೈತನಿಗೆ ಸೇರಿದ ಜಮಿನಿನಲ್ಲಿ ಖಾಸಗಿ ಕಂಪನಿ ಕಳೆದ ಮೂರು ವರ್ಷಗಳ ಹಿಂದೆ ವಿಂಡ್ ಫ್ಯಾನ್‌ನ ಹೈ ಟೆನ್ಷನ್ ವಿದ್ಯುತ್ ಸಂಪರ್ಕದ ಲೈನ್ ಎಳೆದಿದ್ದರು. ನಮ್ಮ ಜಮೀನಿನಲ್ಲಿ ಎಳೆಯದಂತೆ ತಡೆಯೊಡ್ಡಿದ ಸಂದರ್ಭದಲ್ಲಿ ಮಾರುಕಟ್ಟೆ ಬೆಲೆಯನ್ವಯ 60 ಲಕ್ಷ ರೂ. ಪರಿಹಾರ ನೀಡುವ ಭರವಸೆ ನೀಡಿದ್ದರು. ಇದುವರೆಗೂ ಯಾವುದೇ ಹಣ ನೀಡಿಲ್ಲ. ಆದರೆ, ಪರಿಹಾರ ನೀಡಿದ್ದೇವೆ ಎಂಬ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದರು.
ಪಕ್ಕದ ಜಮೀನಿನ ರೈತರಿಗೆ ಪ್ರತಿ ಗುಂಟೆಗೆ 30 ಸಾವಿರದವರೆಗೂ ಪರಿಹಾರ ನೀಡಲಾಗಿದೆ. ಅಂತೆಯೇ 30 ಗುಂಟೆಯಲ್ಲಿ ವಿದ್ಯುತ್ ಸಂಪರ್ಕ ಲೈನ್ ಎಳೆಯಲಾಗಿದೆ. ಪ್ರತಿ ಗುಂಟೆಗೆ 20 ಸಾವಿರ ರೂ. ನಂತೆ ಒಟ್ಟು 60 ಲಕ್ಷ ಪರಿಹಾರ ಹಣ ನೀಡಬೇಕು. ಇಲ್ಲವಾದರೆ ವಿದ್ಯುತ್ ಲೈನ್ ತೆರವುಗೊಳಿಸಲಾಗುವುದು ಎಂದು ಎಚ್ಚರಿಸಿದರು.
Post a comment
Log in to write reviews