ಭಾರತ
ಪ್ರವಾಹ ಪೀಡಿತ ಪ್ರದೇಶಗಳ ಪರಿಶೀಲನೆ: ಟಿಎಂಸಿ ಶಾಸಕರು ಮತ್ತು ಸಂಸದರಿದ್ದ ದೋಣಿ ಪಲ್ಟಿ
ಪಶ್ಚಿಮ ಬಂಗಾಳ: ಪ್ರವಾಹ ಪೀಡಿತ ಪ್ರದೇಶಗಳ ಪರಿಶೀಲನೆಗೆಂದು ತೆರಳಿದ್ದಾಗ ಟಿಎಂಸಿ ಶಾಸಕರು ಮತ್ತು ಸಂಸದರಿದ್ದ ದೋಣಿ ಪಲ್ಟಿಯಾಗಿರುವ ಘಟನೆ ಬಿರ್‌ಭೂಮ್ ಜಿಲ್ಲೆಯಲ್ಲಿ ಸಂಭವಿಸಿದೆ. ಅದೃಷ್ಟವಶಾತ್ ಅಧಿಕಾರಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ದೋಣಿಯಲ್ಲಿ ಸಂಸದರು, ಶಾಸಕರು, ಉನ್ನತ ಅಧಿಕಾರಿಗಳು ಸೇರಿ ಒಟ್ಟು 13 ಮಂದಿ ಇದ್ದರು. ಲಾಬ್‌ಪುರ್‌ನ ಟಿಎಂಸಿ ಶಾಸಕ ಅಭಿಜಿತ್ ಸಿಂಗ್, ಪಕ್ಷದ ಸಂಸದರು, ಅಸಿತ್ ಮಲ್ ಮತ್ತು ಶಮೀರುಲ್ ಇಸ್ಲಾಂ, ಬಿರ್‌ಭೂಮ್‌ನ ಜಿಲ್ಲಾ ಮ್ಯಾಜಿಸ್ಟ್ರೇಟ್ ಬಿಧನ್ ರಾಯ್ ಮತ್ತು ಇತರ ಅಧಿಕಾರಿಗಳು ಬೋಟ್‌ನಲ್ಲಿ ಬೀರ್‌ಭಮ್‌ನ ಬಲರಾಮ್‌ಪುರ ಮತ್ತು ಲ್ಯಾಬ್‌ಪುರದ ಪ್ರವಾಹ ಪೀಡಿತ ಪ್ರದೇಶಗಳನ್ನು ಪರಿಶೀಲಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಘಟನೆಯ ನಂತರ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಯಾವುದೇ ಸುರಕ್ಷತಾ ಜಾಕೆಟ್ ಧರಿಸದ ತೃಣಮೂಲ ಸಂಸದರು ಮತ್ತು ಸ್ಥಳೀಯ ಅಧಿಕಾರಿಗಳನ್ನು ರಕ್ಷಿಸಿದರು. ಭಾರೀ ಮಳೆಯ ನಂತರ ಪಶ್ಚಿಮ ಬಂಗಾಳದ ಹಲವಾರು ಜಿಲ್ಲೆಗಳು ಪ್ರವಾಹದಂತಹ ಪರಿಸ್ಥಿತಿಗೆ ಸಾಕ್ಷಿಯಾಗಿದೆ ಮತ್ತು ಇದರ ಪರಿಣಾಮವಾಗಿ ಅಲ್ಪಾವಧಿಯಲ್ಲಿಯೇ ಬ್ಯಾರೇಜ್‌ಗಳಿಂದ ನೀರು ಹೊರಸೂಸುವಿಕೆ ಹೆಚ್ಚಾಗಿದೆ.
Post a comment
Log in to write reviews