ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ನಿರ್ಣಾಮವಾಗಲಿದೆ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಗೆ ಮಂಗಳವಾರ ತಿರುಗೇಟು ನೀಡಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಾ, ಮೋದಿ ಅವರು ಜ್ಯೋತಿಷಿಯೇ ಎಂದು ಪ್ರಶ್ನಿಸಿದ್ದಾರೆ.
ಖಾಸಗಿ ವಾಹಿನಿ ಜೊತೆ ಮಾತನಾಡಿದ ಪ್ರಿಯಾಂಕಾ ಗಾಂಧಿ, ನಾನು ಜ್ಯೋತಿಷಿಯಲ್ಲ. ಅವರು ಜ್ಯೋತಿಷಿಯಾಗಿದ್ದರೆ ನನಗೆ ಹೇಳಿ ಎಂದರು.
ನಾವು ಮುಂಬರುವ ಚುನಾವಣೆಯಲ್ಲಿ 400 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಗುರಿಯೊಂದಿಗೆ ಮುನ್ನಡೆಯುತ್ತಿದ್ದೇವೆ. ಕಾಂಗ್ರೆಸ್ ಗೆ ಗುರುತು ಮೂಡಿಸಲು ಸಹ ಸಾಧ್ಯವಾಗುವುದಿಲ್ಲ” ಎಂದು ಪ್ರಧಾನಿ ಮೋದಿ ಹೇಳಿದ್ದರು. ಹಾಗೆಯೇ ಉತ್ತರ ಪ್ರದೇಶದ ಜನರು ಪರಿವಾರವಾದವನ್ನು ಒಪ್ಪುವುದಿಲ್ಲ. ಅವರು ತಮ್ಮ ಜೀವನವನ್ನು ಬದಲಿಸಿದ ಪರ್ಯಾಯ ಮಾದರಿಯನ್ನು ನೋಡಿದ್ದಾರೆ" ಎಂದು ಪ್ರಧಾನಿ ಮೋದಿ ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕಿ ವಾದ್ರಾ, ಯಾವ ಪಕ್ಷ ಏನು ಮಾಡಿದೆ ಎಂಬುದನ್ನು ಜಾಗೃತರಾಗಿ ಅರ್ಥಮಾಡಿಕೊಳ್ಳಲು ಸಾರ್ವಜನಿಕರನ್ನು ಒತ್ತಾಯಿಸಿದರು. ಮೊದಲು, ನಿಮ್ಮ ಸರ್ಕಾರ ಆಳುವ ರಾಜ್ಯಗಳಲ್ಲಿ ನೀವು [ಬಿಜೆಪಿ] ಏನು ಮಾಡಿದ್ದೀರಿ ಎಂಬುದನ್ನು ನೋಡಿ. ಹಾಗಾದರೆ ನಮ್ಮ ಸರ್ಕಾರ [ಕಾಂಗ್ರೆಸ್] ಏನು ಮಾಡುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಿ. ತದನಂತರ, ಇದೆಲ್ಲವನ್ನೂ ಪರಿಗಣಿಸಿ, ನಿಮ್ಮ ವಿವೇಚನೆಯಿಂದ ಮತ ಚಲಾಯಿಸಿ" ಎಂದು ಪ್ರಿಯಾಂಕಾ ಗಾಂಧಿ ಹೇಳಿದರು.
Post a comment
Log in to write reviews