ಮಡಿಕೇರಿ: ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಹರಗ, ಕುಂದಳ್ಳಿ, ಕೂತಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಇಂದಿಗೂ ಸಾಮಾಜಿಕ ಬಹಿಷ್ಕಾರ ಎಂಬ ಅನಿಷ್ಟ ಪದ್ದತಿ ಜೀವಂತವಿದೆ. ಕಳೆದ ಹಲವು ವರ್ಷಗಳಿಂದ ಹಲವು ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ. ತೀವ್ರ ಮಾನಸಿಕ ಯಾತನೆಗೆ ಒಳಗಾದ ಹಲವು ಕುಟುಂಬಗಳು ಊರನ್ನೇಬಿಟ್ಟು ಹೋಗಿವೆ. ಇದು ಜಿಲ್ಲಾ ಪಂಚಾಯಿತಿಯಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿಯ ಕುಟುಂಬವನ್ನೇ ಬಿಟ್ಟಿಲ್ಲ.
2004ನೇ ಇಸವಿಯಲ್ಲಿ ಸುಗ್ಗಿ ಹಬ್ಬದ ಸಂದರ್ಭ ಕೆಳ ಜಾತಿಯವರು ಮಾಡಬೇಕಾಗಿದ್ದ ಕೆಲಸಗಳನ್ನು ಮಾಡಲು ನಿರಾಕರಿಸಿದ್ದಕ್ಕೆ ಕುಂದಳ್ಳಿ ಗ್ರಾಮದ ಕೊಡಗು ಜಿಲ್ಲಾ ಪಂಚಾಯತ್‌ನಲ್ಲಿ ವಿಕೇಂದ್ರಿತ ತರಬೇತಿ ಸಂಯೋಜಕ ಅಧಿಕಾರಿ ಬಿ.ಕೆ.ರವಿ ಅವರ ಕುಟುಂಬಕ್ಕೆ ಬಹಿಷ್ಕಾರ ಹಾಕಲಾಗಿದೆ. ನಮ್ಮ ಮನೆಯವರೊಂದಿಗೆ ಯಾರೂ ಮಾತನಾಡುವುದಿಲ್ಲ. ತಾಯಿ ಮೃತರಾಗಿದ್ದಾಗಲೂ ಯಾರೂ ಬಂದಿರಲಿಲ್ಲ. ಸಹೋದರರ ವಿವಾಹವಾದಗಲೂ ಕೂಡ ಯಾರೂ ಬಂದಿರಲಿಲ್ಲ. ನಾವು ಕೂಡ ಯಾರ ಕಾರ್ಯಕ್ರಮಗಳಿಗೂ ಹೋಗುವಂತಿಲ್ಲ ಎಂದು ಬಿ.ಕೆ.ರವಿ ತಿಳಿಸಿದ್ದಾರೆ.
Post a comment
Log in to write reviews