ಉಕ್ರೇನ್ ಸೇನೆಗೆ ಭಾರಿ ಪ್ರಮಾಣದಲ್ಲಿ ಶಸ್ತ್ರಾಸ್ತ್ರ ನೀಡಿದ್ದ ಅಮೇರಿಕ ಈಗ ಅದನ್ನ ರಷ್ಯಾ ನೆಲದ ಮೇಲೆ ನೇರ ದಾಳಿ ಮಾಡಲು ಬಳಸಿ ಎಂದಿದೆ ಎನ್ನಲಾಗಿದೆ.
ಇಷ್ಟು ದಿನ, ಕೇವಲ ಉಕ್ರೇನ್ ನೆಲದ ರಕ್ಷಣೆಗೆ ಈ ಅಸ್ತ್ರಗಳನ್ನು ಬಳಸಲು ಅನುಮತಿ ನೀಡಲಾಗಿತ್ತು. ಆದರೆ ಇದೀಗ ಅಮೇರಿಕ ತನ್ನ ವರಸೆ ಬದಲಿಸಿದೆ ಎನ್ನಲಾಗಿದೆ.
ಅಮೇರಿಕದ ನೇರ ಮತ್ತು ದೊಡ್ಡ ಶತ್ರು ರಷ್ಯಾ. ಹೀಗಾಗಿ ರಷ್ಯಾ ದೇಶವನ್ನು ಸದೆಬಡಿದರೆ ತನಗೆ ಒಳಿತು ಎಂಬ ಅಭಿಪ್ರಾಯವಿದೆ. ಈ ಕಾರಣಕ್ಕೆ ಅಮೆರಿಕ ಈಗ ಹೊಸ ತಂತ್ರ ರೂಪಿಸಿದ್ದು ಉಕ್ರೇನ್ ಮೂಲಕವೇ ರಷ್ಯಾ ನಾಶಕ್ಕೆ ಯತ್ನಿಸುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ರಷ್ಯಾದಲ್ಲಿ ಭೀಕರ ದಾಳಿ ಮಾಡಲು ಅಮೇರಿಕದ ಅಸ್ತ್ರಗಳನ್ನೇ ಬಳಸಿ ಎಂದಿದ್ದು ಉಕ್ರೇನ್ ಕೂಡ ಆ ಮಾತನ್ನು ಪಾಲಿಸಲು ಮುಂದಾಗಿದೆ.
ರಷ್ಯಾ ಮತ್ತು ಉಕ್ರೇನ್ ಇಬ್ಬರೂ ಒಬ್ಬರು ಮತ್ತೊಬ್ಬರನ್ನ ನಾಶ ಮಾಡುವ ಹಂತಕ್ಕೂ ಬಂದಿದ್ದಾರೆ. ಎರಡು ವರ್ಷಗಳ ಹಿಂದೆ ಶುರುವಾದ ರಷ್ಯಾ ಹಾಗೂ ಉಕ್ರೇನ್ ಯುದ್ಧ ಜಗತ್ತಿನ ಕಣ್ಣಿಗೆ ಕಟ್ಟಿದಂತೆ ಕಾಣುತ್ತಿದೆ. ಈ ಯುದ್ಧವು ಪ್ರತಿದಿನ ಒಂದಲ್ಲ ಒಂದು ಸಮಸ್ಯೆ ಸೃಷ್ಟಿ ಮಾಡುತ್ತಿದೆ. ಹೀಗೆ ಯುದ್ಧ ಕಾರ್ಮೋಡ ಮತ್ತಷ್ಟು ದಟ್ಟವಾಗುತ್ತಿದ್ದು ಯಾವ ಕ್ಷಣದಲ್ಲಿ ಏನಾಗುತ್ತದೆ ಅನ್ನುವುದು ಗೊತ್ತಾಗುತ್ತಿಲ್ಲ. ವಿಶ್ವಸಂಸ್ಥೆ ಕೂಡ ಯುದ್ಧ ನಿಲ್ಲಿಸುವ ಪ್ರಯತ್ನ ಮಾಡಿ ವಿಫಲವಾಗಿದೆ. ಇಷ್ಟೆಲ್ಲದರ ಮಧ್ಯೆ ಈಗ ಅಮೆರಿಕ ನೀಡಿರುವ ವಿಶೇಷ ಅನುಮತಿ ಉಕ್ರೇನ್‌ಗೆ ಶಕ್ತಿ ನೀಡಿದ್ದು, ರಷ್ಯಾ ಕಟ್ಟಿಹಾಕಬೇಕು ಎಂಬುದು ಅಮೇರಿಕನ್ನರ ತಂತ್ರ ಬಯಲಾದಂತಿದೆ.
ರಷ್ಯಾ ಸೇನೆ ಉಕ್ರೇನ್ ವಿರುದ್ಧ ಮತ್ತಷ್ಟು ಉಗ್ರವಾಗಲು ಬಲವಾದ ಕಾರಣವಿದ್ದು, ಯಾವಾಗ ಅಮೇರಿಕ ಪರೋಕ್ಷವಾಗಿ ಉಕ್ರೇನ್‌ಗೆ ಸಹಾಯ ಮಾಡುತ್ತಿತ್ತೋ ಆಗಲೇ ಉಕ್ರೇನ್ ಸೇನೆ ಗ್ರಹಚಾರ ಕೆಟ್ಟಿದೆ. ಈಗ ನೇರವಾಗಿ ಉಕ್ರೇನ್ ಬೆನ್ನಿಗೆ ನಿಲ್ಲಲು ಅಮೆರಿಕ ನಿಶ್ಚಯಿಸಿದ್ದು ಪಾಶ್ಚಿಮಾತ್ಯ ದೇಶಗಳ ಒಕ್ಕೂಟ ಸಿದ್ಧವಾಗಿರುವುದು ಪರಿಸ್ಥಿತಿ ಕೈಮೀರುವಂತೆ ಮಾಡಿದೆ.
ಯದ್ದದಲ್ಲಿ ಅಮೇರಿಕದ ಎಫ್-16 ವಿಮಾನ ಭಾಗಿಯಾದಲ್ಲಿ ರಷ್ಯಾ ತನ್ನಲ್ಲಿನ ಮತ್ತಷ್ಟು ವಿನಾಶಕಾರಿ ಅಸ್ತ್ರಗಳನ್ನ ಹೊರ ತೆಗೆಯುವ ಸಾಧ್ಯತೆ ಇದೆ. ಇದರ ಜೊತೆಗೆ ಇನ್ನೂ ಹಲವು ವಿನಾಶಕಾರಿ ಅಸ್ತ್ರಗಳನ್ನು ಅಮೇರಿಕ ಈಗ ಉಕ್ರೇನ್ ಸೇನೆಗೆ ಉಡುಗೊರೆಯಾಗಿ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
Post a comment
Log in to write reviews