ಗಾಝಾ: ಇಸ್ರೇಲ್ ಅಮಾನವೀಯ ದಾಳಿ ಮುಂದುವರೆಸುತ್ತಿದ್ದು, ಪ್ರತಿದಿನ ಸಾವು ನೋವು ಸಂಭವಿಸುತ್ತಲೇ ಇದೆ. ಗಾಝಾದಲ್ಲಿ ಇಸ್ರೇಲ್ ನಡೆಸಿದ ಬಾಂಬ್ ದಾಳಿಗೆ ನವಜಾತ ಶುಶುಗಳು ಸೇರಿ ಇಡೀ ಕುಟುಂಬ ಮರಣಿಸಿದೆ. ತನಗೆ ಅವಳಿ ಮಕ್ಕಳು ಹುಟ್ಟಿದ ಖುಷಿಯಲ್ಲಿ ಸರ್ಕಾರಿ ಕಚೇರಿಗೆ ಹೋಗಿ ಜನನ ಪ್ರಮಾಣ ಪತ್ರ ಮಾಡಿಸಲು ಹೋಗಿದ್ದ ವ್ಯಕ್ತಿ ಮರಳಿ ಮನೆಗೆ ಬರುವಷ್ಟರಲ್ಲಿ ಅವರ ಅವಳಿ ಶಿಶುಗಳು, ಉಳಿದ ಮಕ್ಕಳು, ಪತ್ನಿ, ಅತ್ತೆ ಎಲ್ಲರೂ ಬಾಂಬ್ ಸ್ಪೋಟದಲ್ಲಿ ಸಾವನ್ನಪ್ಪಿದ್ದಾರೆ.
ಮುಹಮ್ಮದ್ ಅಬು ಅಲ್ ಕುಮ್ಸನ್ ಎಂಬವರೇ ತನ್ನವರನ್ನು ಕಳೆದುಕೊಂಡವರು. ಮುಹಮ್ಮದ್ ಅಬು ಅಲ್ ಕುಮ್ಸನ್ ಕೈಯಲ್ಲಿ ಜನನ ಪ್ರಮಾಣಪತ್ರ ಹಿಡಿದು ಬಂದಾಗ ಮನೆಯಲ್ಲಾದ ಅನಾಹುತವನ್ನು ನೋಡಿದ ವ್ಯಕ್ತಿಯ ರೋದನ ಕಲ್ಲು ಕರಗುವಂತಿತ್ತು. ಶವಗಳ ಮುಂದೆ ಮುಂದೆ ಜನನ ಪ್ರಮಾಣಪತ್ರ ಹಿಡಿದು ಆ ವ್ಯಕ್ತಿ ಅಳುತ್ತಿರುವ ದೃಶ್ಯ ನಿಜಕ್ಕೂ ಮನ ಕಲಕುವಂತಿದೆ ಎಂದು ಬುಧವಾರದ ವರದಿಗಳು ತಿಳಿಸಿವೆ.
ಈ ಹಿಂದೆ ಬೇರೆ ಮನೆಯಲ್ಲಿದ್ದ ಮೊಹಮ್ಮದ್, ದಾಳಿಯ ಮುನ್ಸೂಚನೆ ಮೇರೆಗೆ, ಎಲ್ಲರನ್ನೂ ಬೇರೆ ಮನೆಗೆ ಸ್ಥಳಾಂತರಿಸಿದ್ದ. ಆದರೆ ಇದೀಗ ಈತ ತಂಗಿದ್ದ ಮನೆಯ ಮೇಲೆ ಶೆಲ್ ದಾಳಿ ನಡೆದು, ಎಲ್ಲರೂ ಸಾವನ್ನಪ್ಪಿದ್ದಾರೆ. ಇಲ್ಲಿಯವರೆಗೆ ಇಸ್ರೇಲ್ ಮತ್ತು ಗಾಜಾ ನಡುವೆ ನಡೆದ ಯುದ್ಧದಲ್ಲಿ 115ಕ್ಕೂ ಹೆಚ್ಚು ನಮಜಾತ ಶಿಶುಗಳು ಸಾವನ್ನಪ್ಪಿವೆ ಎನ್ನಲಾಗಿದೆ
Post a comment
Log in to write reviews