ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಪರಪ್ಪನ ಅಗ್ರಹಾರ ಸೇರಿರುವ ಆರೋಪಿ ದರ್ಶನ್ಗೆ ಇದೀಗ IT ಬಿಗ್ ಶಾಕ್ ನೀಡಿದೆ. ದರ್ಶನ್ ಮನೆ ಮೇಲೆ IT ಬಿಗ್ ರೇಡ್ ಮಾಡುವ ಸಾಧ್ಯತೆಯಿದೆ.
ಪೊಲೀಸರ ತನಿಖೆ ವೇಳೆ ದರ್ಶನ್ಗೆ ಸೇರಿದ್ದ 70 ಲಕ್ಷ ಹಣವನ್ನು ಕಾಮಾಕ್ಷಿಪಾಳ್ಯ ಪೊಲೀಸರು ಸೀಜ್ ಮಾಡಿದ್ದರು. ಇದೀಗ 70 ಲಕ್ಷ ಹಣದ ಮೂಲ ತನಿಖೆಗಾಗಿ ಕಾಮಾಕ್ಷಿಪಾಳ್ಯ ಪೊಲೀಸರು IT ಇಲಾಖೆಗೆ ಪತ್ರ ಬರೆದಿದ್ದಾರೆ. ದರ್ಶನ್ ಮನೆಯಲ್ಲಿ 37 ಲಕ್ಷ ರೂ. ವಿಜಯಲಕ್ಷ್ಮೀ ಬಳಿ 3 ಲಕ್ಷ, ದರ್ಶನ್ ಆಪ್ತ ಪ್ರದೋಷ್ ಬಳಿ ಸಿಕ್ಕಿತ್ತು ಬರೋಬ್ಬರಿ 30 ಲಕ್ಷ. ಒಟ್ಟು 70 ಲಕ್ಷ ಹಣ ನಟ ದರ್ಶನ್ಗೆ ಸಂಬಂಧಿಸಿದ್ದು ಎಂದು ITಗೆ ಪತ್ರ ಬರೆದಿದ್ದಾರೆ.
ಇದೀಗ IT, EDಯಲ್ಲೂ ದರ್ಶನ್ ವಿರುದ್ಧ FIR ದಾಖಲಾಗುವ ಸಾಧ್ಯತೆಯಿದ್ದು, FIR ದಾಖಲಾದ್ರೆ ಅಕ್ರಮ ಹಣ ಸಾಗಣೆ ಆರೋಪದಲ್ಲಿ ರೇಡ್ ಮಾಡಲಾಗುತ್ತದೆ. 70 ಲಕ್ಷ ಹಣದ ಬಗ್ಗೆ ತನಿಖೆ ಕೋರಿ ಕಾಮಾಕ್ಷಿಪಾಳ್ಯ ಪೊಲೀಸರು ಐಟಿಗೆ ಸುದೀರ್ಘ ಪತ್ರ ಬರೆದಿದ್ದು, ಆದಾಯ ತೆರಿಗೆ ಜಾರಿ ನಿರ್ದೇಶನಾಲಯ ರೇಡ್ ಮಾಡಿದ್ರೆ ದರ್ಶನ್ ಬಂಡವಾಳ ಎಲ್ಲಾ ಬಟಾ ಬಯಲಾಗಲಿದೆ.
Post a comment
Log in to write reviews