Samayanews.

Samayanews.

2024-12-23 11:17:21

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ನಾಮಿನೇಶನ್​ ಬಿಸಿ - ಕಿತ್ತಾಡಿಕೊಂಡ ಜಗದೀಶ್‌ ಧನ್‌ರಾಜ್‌ 

ಬಿಗ್‌ಬಾಸ್‌ ಸ್ಟಾರ್ಟ್‌ ಆಗಿ ಇಲ್ಲಿಗೆ 4 ದಿನ ಕಳೆದಿದ್ದು, ಶುರುವಾದ ಮೊದಲ ದಿನವೇ ನಾಮೇಶನ್‌ ಪ್ರಕ್ರಿಯೆ ನಡೆದಿದೆ. ವಾರದ ಅಂತ್ಯಕ್ಕೂ ಮುನ್ನವೇ ಬಿಗ್​ ಬಾಸ್​ನಲ್ಲಿ ನಾಮಿನೇಶನ್​ ಬಿಸಿ ಜೋರಾಗಿದೆ. ಇದರ ನಡುವೆ   ಜಗಳಗಳು ಶುರುವಾಗಿದ್ದು, ಸ್ಪರ್ಧಿಗಳು ಒಬ್ಬರೊನ್ನೊಬ್ಬರು ಟಾರ್ಗೆಟ್‌ ಮಾಡಲು ಶುರು ಮಾಡಿದ್ದಾರೆ.
ಚೈತ್ರಾ ಕುಂದಾಪುರ, ಗೌತಮಿ, ಭವ್ಯಾ, ಹಂಸ, ಶಿಶಿರ್, ಯಮುನಾ, ಜಗದೀಶ್, ಮಾನಸ, ಮೋಕ್ಷಿತಾ ಅವರು ಮೊದಲ ವಾರ ನಾಮಿನೇಟ್​ ಆಗಿದ್ದಾರೆ. ಆದರೆ ನಾಮಿನೇಟ್​ ಆದ ಸ್ಪರ್ಧಿಗಳಿಗೆ ಬಿಗ್​ ಬಾಸ್​​ ಟಾಸ್ಕ್​ವೊಂದನ್ನು ಕೊಟ್ಟಿದ್ದು, ಪಾರಾಗಲು ಮೊದಲ ಅವಕಾಶ ನೀಡಿದ್ದಾರೆ.
ಆದರೆ ಈ ವೇಳೆ ಜಗದೀಶ್​ ಮತ್ತು ಯಮುನಾ ಟಾಸ್ಕ್​ ವೇಳೆ ಡಿಕ್ಕಿ ಹೊಡೆದಿದ್ದು, ಯಮುನಾ ನೆಲಕ್ಕೆ ಬಿದ್ದಿದ್ದಾರೆ. ಇಲ್ಲಿಂದ ಟಾಸ್ಕ್​​ ರೆಫ್ರಿ ಮತ್ತು ಜಗದೀಶ್​ ನಡುವೆ ಜಗಳ ಶುರುವಾಗಿದೆ.
ಧನ್​ರಾಜ್​ ಮತ್ತು ಜಗದೀಶ್​ ಮಾತು ಮಾತು ಬೆಳೆಸಿದ್ದಾರೆ. ಈ ವೇಳೆ ಜಗದೀಶ್​​ ಅರ್ಹವಾದ ರೆಫ್ರಿ ಇವನಲ್ಲ ಎಂದು ಧನ್​ರಾಜ್​ಗೆ ಹೇಳಿದ್ದಾರೆ. ಇದಕ್ಕೆ ಕೋಪಗೊಂಡ ಧನ್​ರಾಜ್​ ಸುಮ್ಮೆ ಕೂತ್ಕೊತೀಯಾ.. ನೀನು ಯಾರು ಹೇಳೋಕೆ ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ಬಿಗ್‌ ಬಾಸ್‌ ಮನೆಯಲ್ಲಿ ಆಟ, ಜಗಳ, ಮಾತು ಹಾಗೇ ಮನೆಯಲ್ಲಿ ಏನಾಯ್ತು ಎಂಬ ಕುತೂಹಲ ಎಲ್ಲರಲ್ಲೂ ಇದೆ. ಮುಂದೇನಾಗುತ್ತೆ ನೋಡೋಣ. 
 

img
Author

Post a comment

No Reviews