Samayanews.

Samayanews.

2024-12-24 01:04:38

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ದಾಸನಿಗೆ ಜೈಲ್‌ ಫಿಕ್ಸ್‌ 

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಳ್ಳಾರಿ ಜೈಲಲ್ಲಿರುವ A-2 ಆರೋಪಿ ದರ್ಶನ್​ ಬೇಲ್‌ ಭವಿಷ್ಯ ಇಂದು ನಿರ್ಧಾರವಾಗಿದ್ದು, ಸಲ್ಲಿಸಿದ್ದ ಜಾಮೀನು ಸುದೀರ್ಘ ವಾದ-ಪ್ರತಿವಾದ ಆಲಿಸಿದ್ದ ಬೆಂಗಳೂರಿನ 57ನೇ CCH ಕೋರ್ಟ್ ಜಾಮೀನು ನೀಡಲು ನಿರಾಕರಿಸಿದೆ. 
ಪವಿತ್ರಗೌಡಗೆ ರೇಣುಕಾಸ್ವಾಮಿ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ ಆರೋಪ ಇತ್ತು. ಇದೇ ಕಾರಣಕ್ಕೆ ರೇಣುಕಾಸ್ವಾಮಿಯನ್ನು ದರ್ಶನ್ ಅಂಡ್​ ಗ್ಯಾಂಗ್ ಕಳೆದ ಜೂನ್​​ನಲ್ಲಿ ಅಪಹರಿಸಿ ಬೆಂಗಳೂರಿಗೆ ಕರೆದುಕೊಂಡು ಬಂದಿತ್ತು. ಈ ವೇಳೆ ದರ್ಶನ್ ಅಂಡ್​ ಗ್ಯಾಂಗ್​ ನಡೆಸಿದ್ದ ಮಾರಣಾಂತಿಕ ಹಲ್ಲೆಗೆ ರೇಣುಕಾಸ್ವಾಮಿ ಜೀವ ಕಳೆದುಕೊಂಡಿದ್ದರು ಎಂಬ ಆರೋಪ ಇತ್ತು. ಇದರ ತನಿಖೆ ನಡೆಸಿದ್ದ ಬೆಂಗಳೂರು ಪೊಲೀಸರು ಒಟ್ಟು 17 ಆರೋಪಿಗಳನ್ನು ಬಂಧಿಸಿದ್ದರು. ಸುದೀರ್ಘ ವಿಚಾರಣೆ ನಡೆಸಿದ್ದ ಪೊಲೀಸರು, 3,991 ಪುಟಗಳ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದರು. ಈ ಬೆನ್ನಲ್ಲೇ ದರ್ಶನ್ ಪರ ವಕೀಲರು ಬೆಂಗಳೂರಿನ ಕೋರ್ಟ್​ನಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ಇಂದು ಕೋರ್ಟ್ ಜಾಮೀನು ನೀಡಲು ನಿರಾಕರಿಸಿದ್ದು, ಮತ್ತೆ ನಟ ದರ್ಶನ್‌ಗೆ ಜೈಲು ವಾಸ ಮುಂದುವರೆದಿದೆ. 
 

img
Author

Post a comment

No Reviews