Samayanews.

Samayanews.

2024-12-24 12:25:04

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಸಂಕಷ್ಟದಲ್ಲಿ ಜಮ್ಮ & ಕಾಶ್ಮೀರದ ಸೇಬು ಉದ್ಯಮ

ಪುಲ್ವಾಮಾ (ಜಮ್ಮ ಮತ್ತು ಕಾಶ್ಮೀರ): ಪುಲ್ವಾಮಾ ಮತ್ತು ಶೋಪಿಯಾನ್‌ ಜಿಲ್ಲೆಗಳಲ್ಲಿ ಕಳೆದ ವರ್ಷ ಬೆಳೆದ ಸೇಬು ಮಾರಾಟವಾಗದೇ ಕೋಲ್ಡ್ ಸ್ಟೋರೇಜ್‌ನಲ್ಲಿಯೇ ಉಳಿದಿರುವುದರಿಂದ ಬೆಳೆಗಾರರು ಮತ್ತು ವ್ಯಾಪಾರಿಗಳಲ್ಲಿ ಆತಂಕ ಸೃಷ್ಟಿಸಿದೆ. ಇದರ ಪರಿಣಾಮ ಸೇಬು ಬೆಳಗಾರರಿಗೆ ಲಾಭದ ಕುಸಿತವಾಗಿದೆ ಮತ್ತು ಮಾರುಕಟ್ಟೆಯಲ್ಲಿ ಬೆಲೆ ಏರಿಳಿತ ಸೇರಿದಂತೆ ಉದ್ಯಮಕ್ಕೆ ದೊಡ್ಡ ಹೊಡೆತ ನೀಡಿದೆ.

ಜಮ್ಮ ಮತ್ತು ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಂತೆಯೇ ಸೇಬು ಬೆಳೆಗಾರರು ಮತ್ತು ವ್ಯಾಪಾರಿಗಳು ತಮ್ಮ ಸಮಸ್ಯೆ ಪರಿಹರಿಕ್ಕಾಗಿ ಹೊಸ ಸರ್ಕಾರದ ಮೇಲೆ ಭರವಸೆ ಇಟ್ಟಿದ್ದಾರೆ.

"ರೈತರು ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗಿದೆ. ಮೊದಲನೆಯದು ಆಮದು, ಎರಡನೆಯದು ಕೀಟನಾಶಕಗಳು ಮತ್ತು ರಸಗೊಬ್ಬರ ಮತ್ತು ಮೂರನೆಯದಾಗಿ ಸರ್ಕಾರವು ಸಬ್ಸಿಡಿಗಳ ಬಗ್ಗೆ ಹೆಚ್ಚು ಗಮನ ಹರಿಸದಿರುವುದಾಗಿದೆ ಎಂದು ಸೇಬು ಬೆಳೆಗಾರ ಇಶ್ಫಾಕ್ ಯಾಸೀನ್ ತಿಳಿಸಿದ್ದಾರೆ.

ಸ್ಥಳೀಯ ನಾಯಕರಿಂದ ಮಾತ್ರ ಸಮಸ್ಯೆ ಪರಿಹಾರ: ಹೊಸ ಸರ್ಕಾರದ ಮೇಲೆ ಸೇಬು ರೈತರು ನಿರೀಕ್ಷೆಗಳೇನು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, "ಸ್ಥಳೀಯ ನಾಯಕನನ್ನು ಚುನಾವಣೆಯಲ್ಲಿ ಗೆಲ್ಲಿಸಿದರೆ ಮಾತ್ರ ನಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗುವ ಸಾಧ್ಯತೆಗಳಿವೆ. ಜಮ್ಮು ಮತ್ತು ಕಾಶ್ಮೀರ ವಿಶೇಷವಾಗಿ ಕಾಶ್ಮೀರವು ಸೇಬು ಉದ್ಯಮದ ಮೇಲೆ ಅವಲಂಬಿತವಾಗಿದೆ ಎಂದು ಸ್ಥಳೀಯ ನಾಯಕರಿಗೆ ತಿಳಿದಿದೆ. ಅವರು ಈ ಬಗ್ಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ ಎಂದು ನನಗೆ ಖಾತ್ರಿಯಿದೆ " ಎಂದು ಯಾಸೀನ್ ಹೇಳಿದರು.

ದಕ್ಷಿಣ ಕಾಶ್ಮೀರದ ಪುಲ್ವಾಮಾ ಮತ್ತು ಶೋಪಿಯಾನ್ ಎರಡು ಜಿಲ್ಲೆಗಳು ವಿಶ್ವಪ್ರಸಿದ್ಧ ಸೇಬು ಉತ್ಪಾದಿಸುತ್ತವೆ. ಆದರೆ ಸೇಬು ವ್ಯಾಪಾರಿಗಳ ಪ್ರಕಾರ, ತೀವ್ರವಾದ ಆಲಿಕಲ್ಲು ಮಳೆ ಪರಿಣಾಮ ಸೇಬು ಉದ್ಯಮ ಗಣನೀಯ ನಷ್ಟವನ್ನು ಅನುಭವಿಸಿದೆ.

ನಾವು ನಮ್ಮ ಗರಿಷ್ಠ ಬೆಳೆ ಪಡೆಯುವ ಕುಲ್ಗಾಮ್ ಮತ್ತು ಶೋಪಿಯಾನ್ ಜಿಲ್ಲೆಗಳಲ್ಲಿ ಆಲಿಕಲ್ಲು ಮಳೆಯಾಗಿದೆ. ಪರಿಣಾಮ ನಾವು ನಷ್ಟ ಅನುಭವಿಸಿದ್ದೇವೆ. ಇದು ಉದ್ಯಮದ ಮೇಲೆ ನೇರ ಪರಿಣಾಮ ಬೀರಿತು ಎಂದು ಪುಲ್ವಾಮಾದ ಕೋಲ್ಡ್ ಸ್ಟೋರೇಜ್ ಫೆಸಿಲಿಟಿಯ ಮ್ಯಾನೇಜರ್ ರಿಜ್ವಾನ್ ಗುಲ್ಜಾರ್ ಹೇಳಿದ್ದಾರೆ.

ಸೇಬು ಆಮದಿಗೆ ಕಡಿವಾಣ ಹಾಕಿ: "ಸರ್ಕಾರವು ಸೇಬುಗಳ ಆಮದು ಕಡಿಮೆ ಮಾಡುವ ಸಂಬಂಧ ಹೊಸ ನೀತಿಗಳನ್ನು ರೂಪಿಸಬೇಕು. ಸೇಬು ಆಮದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಎಂದು ನಾವು ಹೇಳುವುದಿಲ್ಲ. ಆದರೆ, ದರಗಳ ಮೇಲೆ ಪರಿಣಾಮ ಬೀರದಂತೆ ಅದನ್ನು ಸೀಮಿತಗೊಳಿಸಬೇಕು. ಸಬ್ಸಿಡಿಗಳು ಸಹ ಇರಬೇಕು, ಒಕ್ಕೂಟವನ್ನು ರಚಿಸಬೇಕು ಮತ್ತು ದರಗಳನ್ನು ನಿಯಂತ್ರಿಸುವ ಹಾಗೂ ನಮ್ಮ ಮಾರುಕಟ್ಟೆಯನ್ನು ಹಾಳುಮಾಡುವ ಆಮದು ನಿಯಂತ್ರಿಸುವ ಸಂಘವಿರಬೇಕು. ಹೊಸ ಸರ್ಕಾರ ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು" ಎಂದು ಶಹಮೀರ್ ಪ್ಯಾಕೇಜಿಂಗ್ ಕಂಪನಿಯ ಎಂಡಿ ಅಬಿದ್ ಮಿರ್ ತಿಳಿಸಿದ್ದಾರೆ.

ಕಾಶ್ಮೀರವು ಭಾರತದಲ್ಲಿ ಸೇಬಿನ ಕೃಷಿಯ ಕೇಂದ್ರಬಿಂದುವಾಗಿದೆ. ಇದು ದೇಶದ ವಾರ್ಷಿಕ ಸೇಬಿನ ಉತ್ಪಾದನೆಯ ಶೇ.75 ರಷ್ಟನ್ನು ಉತ್ಪಾದಿಸುತ್ತದೆ. ಇನ್ನು ಜಮ್ಮು ಮತ್ತು ಕಾಶ್ಮೀರದ 90 ವಿಧಾನಸಭಾ ಕ್ಷೇತ್ರಗಳಿಗೆ ಸೆಪ್ಟೆಂಬರ್ 18 ಮತ್ತು ಅಕ್ಟೋಬರ್ 1 ರ ನಡುವೆ ಮೂರು ಹಂತಗಳಲ್ಲಿ ಮತದಾನ ನಡೆಯಲಿದೆ. ಅಕ್ಟೋಬರ್ 8 ರಂದು ಫಲಿತಾಂಶ ಪ್ರಕಟವಾಗಲಿದೆ.

img
Author

Post a comment

No Reviews