ಜಾತ್ಯತೀತ ಜನತಾದಳ ಹೆಚ್.ಡಿ.ದೇವೇಗೌಡರು 1999ರಲ್ಲಿ ಪ್ರಾರಂಭಿಸಿದ ಪಕ್ಷ.
ಅಂದಿನಿಂದ ಇಂದಿನವರೆಗೂ ಹಲವು ಏಳುಬೀಳುಗಳನ್ನು ಕಾಣುತ್ತಿದೆ.
ಈ ಪಕ್ಷ ಜನತಾ ಪಾರ್ಟಿಯ ಭಾಗವಾಗಿ ಉದಯವಾದ ಪಕ್ಷ. ಇದು ಕರ್ನಾಟಕದ ಪ್ರಾದೇಶಿಕ ಪಕ್ಷವಾಗಿ ಗುರುತಿಸಿಕೊಂಡಿದೆ. ಸಮಾಜವಾದಿ ವಿಚಾರಧಾರೆಯನ್ನು ಬೆಂಬಲಿಸುವ ಪಕ್ಷ ಇದಾಗಿದ್ದು, ಹಳೆ ಮೈಸೂರು ಭಾಗದಲ್ಲಿ ಹೆಚ್ಚಿನ ಬೆಂಬಲ ಪಡೆದಿದೆ. ಹಾಗೆಯೇ ಈ ಪಕ್ಷವನ್ನು ರಾಜ್ಯದ ಮೂರನೇ ದೊಡ್ಡ ಪಕ್ಷವೆಂದು ಕರೆಯಲಾಗುತ್ತದೆ.
ರಾಜ್ಯದಲ್ಲಿ ಇದೇ ಜೆಡಿಎಸ್ ಪಕ್ಷದಿಂದ ಕುಮಾರ ಸ್ವಾಮಿ 2 ಬಾರಿ ಮುಖ್ಯ ಮಂತ್ರಿಯಾಗಿ ಆಯ್ಕೆಯಾಗಿದ್ದರು. ರಾಜ್ಯದಲ್ಲಿ ಈಗ ಪವರ್ ಫುಲ್ ರಾಜಕಾರಣಿಗಳೆಂದು ಗುರುತಿಸಿ ಕೊಂಡಿರುವ ಹಲವು ರಾಜಕಾರಣಿಗಳ ಮಾತೃ ಪಕ್ಷ ಇದೆಂದು ಹೇಳಿದರೆ ತಪ್ಪಾಗಲಾರದು.
ಆದರೆ, 2023 ರ ವಿಧಾನಸಭಾ ಚುನಾವಣೆಯಲ್ಲಿ ಜೆ ಡಿ ಎಸ್ ಗೆ ಮರ್ಮಾಘಾತವಾಯಿತು. ಕುಮಾರಸ್ವಾಮಿ ಉತ್ತಮ ಪ್ರಣಾಳಿಕೆ ನೀಡಿ, ತೀವ್ರ ರೀತಿಯ ಕ್ಯಾಂಪೇನ್ ಮಾಡಿದರು. ಆದರೂ, ಪಕ್ಷ ಕಳಪೆ ಪ್ರದರ್ಶನ ನೀಡಿತು.
ಜೆ ಡಿ ಎಸ್ ಪರ ಇದ್ದ ಒಕ್ಕಲಿಗ ಮತ ಮತ್ತು ಮುಸ್ಲಿಂ ಮತಗಳು ಡಿ ಕೆ ಶಿವಕುಮಾರ್ ಮಾಡಿದ್ದ ಕಸರತ್ತಿನಿಂದಾಗಿ ಕಾಂಗ್ರೆಸ್ ಕಡೆ ವಾಲಿದ್ದವು.
ಜೆಡಿಎಸ್ ಗೆ ಅಳಿವು ಉಳಿವಿನ ಪ್ರಶ್ನೆ ಆಗಿತ್ತು. ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿತು.
ಜೆ.ಡಿ.ಎಸ್ ರಾಜ್ಯದಲ್ಲಿ ದಿನ ಕಳೆದಂತೆ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ. ಅದಕ್ಕೆ ಹಲವಾರು ಕಾರಣಗಳಿವೆ. ಎಚ್ ಡಿ ದೇವೇಗೌಡರು ಈ ಇಳಿ ವಯಸ್ಸಿನಲ್ಲಿ ಪಕ್ಷದಲ್ಲಿ ಸಕ್ರಿಯರಾಗಿ ತೊಡಗಿ ಕೊಳ್ಳಲು ಸಾಧ್ಯವಾಗುತ್ತಿಲ್ಲ. ಮತ್ತೊಂದೆಡೆ ಎಚ್.ಡಿ.ಕುಮಾರ ಸ್ವಾಮಿಯವರಿಗೆ ಆಗಾಗ ಕಾಡುತ್ತಿರುವ ಆನಾರೋಗ್ಯ ಸಮಸ್ಯೆ ಪಕ್ಷಕ್ಕೆ ಪ್ರಮುಖ ಸಮಸ್ಯೆಯಾಗಿ ಕಾಡುತ್ತಿದೆ.
ಈಗ ಪ್ರಜ್ವಲ್ ರೇವಣ್ಣರ ಪೆನ್ಡ್ರೈವ್ ಪ್ರಕರಣ ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಜೆಡಿಎಸ್ ಪಕ್ಷಕ್ಕೆ ತೀವ್ರ ಮುಜುಗರವನ್ನು ಉಂಟುಮಾಡಿದೆ. ಅಷ್ಟೇ ಅಲ್ಲದೆ ಜೆಡಿಎಸ್ ಹಾಗೂ ಬಿಜೆಪಿ ಪಕ್ಷದ ಮೈತ್ರಿ ಜೆ ಡಿ ಎಸ್ ನಲ್ಲಿ ಅಧಿಕಾರ ಆಕಾಂಕ್ಷಿಗಳಾಗಿದ್ದ ಹಲವರಿಗೆ ನಿರಾಸೆಯನ್ನು ಉಂಟು ಮಾಡಿದೆ.
Tags:
- jds party
- jds party meet
- jd(s) party
- jds party fights
- jds party leaders
- jds party workers
- karnataka jds party
- jds party latest news
- jds party fights 2017
- jds party workers unhappy
- jds
- congress party
- regional party
- jds party activists protest
- jds president in jd(s) party?
- ks eshwarappa mocks jds party
- kanataka jds party manifesto
- hd kumaraswamy congress jds party
- jds mp
- partnerships
Post a comment
Log in to write reviews