Samayanews.

Samayanews.

2024-12-24 12:15:27

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಉಡುಪಿ ಶ್ರೀ ಕೃಷ್ಣನ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ಜೂ ಎನ್​ಟಿಆರ್-ರಿಷಬ್ ಶೆಟ್ಟಿ

ತೆಲುಗಿನ ಖ್ಯಾತ ನಟ ಜೂ ಎನ್​ಟಿಆರ್ ಉಡುಪಿ ಶ್ರೀ ಕೃಷ್ಣನ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ. ಉಡುಪಿ ಕೃಷ್ಣನ ಮಠಕ್ಕೆ ಹಲವು ಸಿನಿಮಾ ಸೆಲೆಬ್ರಿಟಿಗಳು, ರಾಜಕಾರಣಿಗಳು, ಉದ್ಯಮಿಗಳು ಭೇಟಿ ನೀಡಿ ಶ್ರೀ ಕೃಷ್ಣನ ಆಶೀರ್ವಾದ ಪಡೆದಿದ್ದಾರೆ. ವಿಶೇಷವೆಂದರೆ ಜೂ ಎನ್​ಟಿಆರ್ ಅನ್ನು ಉಡುಪಿಗೆ ಕರೆತಂದಿರುವುದು ಕನ್ನಡದ ರಿಷಬ್ ಶೆಟ್ಟಿ.

ಜೂ ಎನ್​ಟಿಆರ್​ಗೆ ಕರ್ನಾಟಕದೊಂದಿಗೆ ವಿಶೇಷ ಬಂಧವಿದೆ. ಜೂ ಎನ್​ಟಿಆರ್ ತಾಯಿ ಹನ ಉಡುಪಿ ಮೂಲದವರೇ ಆಗಿದ್ದಾರೆ. ಕನ್ನಡವನ್ನು ಮಾತನಾಡಬಲ್ಲ, ಅರ್ಥ ಮಾಡಿಕೊಳ್ಳಬಲ್ಲ ಜೂ ಎನ್​ಟಿಆರ್, ಈ ಹಿಂದೆ ‘ಕಾಂತಾರ’ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು. ರಿಷಬ್ ಶೆಟ್ಟಿ ಜೊತೆಗೂ ಸಹ ಈ ಬಗ್ಗೆ ಮಾತನಾಡಿ ತಮ್ಮ ಮೆಚ್ಚುಗೆ ತಿಳಿಸಿದ್ದರು.

ಇದರಿಂದ ಇಬ್ಬರ ನಡುವೆ ಉತ್ತಮ ಬಾಂಧವ್ಯ ಸೃಷ್ಟಿಯಾಗಿತ್ತು. ಇದೀಗ ಜೂ ಎನ್​ಟಿಆರ್ ಕೃಷ್ಣನ ದರ್ಶನಕ್ಕೆ ಬಂದಾಗ ರಿಷಬ್ ಶೆಟ್ಟಿ ಸಹ ಅವರಿಗೆ ಜೊತೆಯಾಗಿದ್ದಾರೆ. ಮಾತ್ರವಲ್ಲದೆ ನಿರ್ದೇಶಕ ಪ್ರಶಾಂತ್ ನೀಲ್ ಸಹ ಇವರ ಜೊತೆಗಿದ್ದರು.

ಜೂ ಎನ್​ಟಿಆರ್​ಗೆ ಕನ್ನಡ ಚಿತ್ರರಂಗದ ಜೊತೆಗೆ ವಿಶೇಷ ಬಾಂಧವ್ಯ ಇದೆ. ಪುನೀತ್ ರಾಜ್​ಕುಮಾರ್ ಹಾಗೂ ಜೂ ಎನ್​ಟಿಆರ್ ಅತ್ಯಾಪ್ತ ಗೆಳೆಯರು.

ಪುನೀತ್ ರಾಜ್​ಕುಮಾರ್ ನಟನೆಯ ಸಿನಿಮಾ ಒಂದರಲ್ಲಿ, ‘ಗೆಳೆಯ-ಗೆಳೆಯ’ ಎಂಬ ಹಾಡೊಂದನ್ನು ಜೂ ಎನ್​ಟಿಆರ್ ಹಾಡಿದ್ದರು. ಅಪ್ಪು ನಿಧನವಾದ ಸಮಯದಲ್ಲಿ ಜೂ ಎನ್​ಟಿಆರ್ ಆಗಮಿಸಿದ್ದರು. ಆ ಬಳಿಕ ಕರ್ನಾಟಕ ರತ್ನ ಕಾರ್ಯಕ್ರಮ ಮಾಡಿದಾಗಲೂ ಸಹ ಜೂ ಎನ್​ಟಿಆರ್ ಆಗಮಿಸಿದ್ದರು. ಈಗ ಉಡುಪಿ ಕೃಷ್ಣನ ದರ್ಶನಕ್ಕೆ ಬಂದಿದ್ದಾರೆ.

ಪ್ರಶಾಂತ್ ನೀಲ್ ನಿರ್ದೇಶನದ ‘ಡ್ರ್ಯಾಗನ್’ ಹೆಸರಿನ ಸಿನಿಮಾದಲ್ಲಿ ಜೂ ಎನ್​ಟಿಆರ್ ನಟಿಸಲಿದ್ದಾರೆ. ಸಿನಿಮಾದ ಮುಹೂರ್ತ ಇತ್ತೀಚೆಗಷ್ಟೆ ಮುಗಿದಿದೆ.

ಸಿನಿಮಾದ ಚಿತ್ರೀಕರಣ ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದ್ದು, ಸಿನಿಮಾದ ಚಿತ್ರೀಕರಣ ಪ್ರಾರಂಭ ಮಾಡುವ ಮುನ್ನ ದೇವರ ದರ್ಶನ ಮತ್ತು ಆಶೀರ್ವಾದ ಪಡೆಯಲೆಂದು ಜೂ ಎನ್​ಟಿಆರ್ ಕರ್ನಾಟಕಕ್ಕೆ ಬಂದಿದ್ದಾರೆ. ಇನ್ನುಳಿದಂತೆ ಜೂ ಎನ್​ಟಿಆರ್ ‘ದೇವರ’ ಹೆಸರಿನ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಪೋಸ್ಟ್ ಪ್ರೊಡಕ್ಷನ್ ಕೆಲಸ ಚಾಲ್ತಿಯಲ್ಲಿದೆ. ಹಿಂದಿಯಲ್ಲಿ ಹೃತಿಕ್ ರೋಷನ್ ಜೊತೆಗೆ ‘ವಾರ್’ ಸಿನಿಮಾ ಚಿತ್ರೀಕರಣ ಮುಗಿಸಿದ್ದಾರೆ.

img
Author

Post a comment

No Reviews