ಕಲ್ಕಿ 2898 ಎಡಿ ಜೂನ್ 27ರಂದು ವಿಶ್ವಾದ್ಯಂತ ಬಿಡುಗಡೆಯಾಗಿ ಸುದೀರ್ಘವಾಗಿ ಚಿತ್ರ ಮಂದಿರಗಳಲ್ಲಿ ಓಡಿ ಸಂಭ್ರಮ ಪಟ್ಟ ಈ ಚಿತ್ರ ಆಗಸ್ಟ್ 22ರಿಂದ ಒಟಿಟಿಯಲ್ಲಿ ಪ್ರದರ್ಶನ ಕಾಣಲಿದೆ. ನೆಟ್‌ಫ್ಲಿಕ್ಸ್ ಮತ್ತು ಅಮೆಜಾನ್ ಪ್ರೈಮ್ ಎರಡರಲ್ಲೂ ವಿವಿಧ ಭಾಷೆಗಳಲ್ಲಿ ಲಭ್ಯವಿದೆ.
ಕಲ್ಕಿ 2898 ಎಡಿ ಈ ವರ್ಷದ ಅತೀ ದೊಡ್ಡ ಬಜೆಟ್‌ನ ಚಿತ್ರಗಳಲ್ಲಿ ಒಂದಾಗಿದೆ. ಗಲ್ಲಾಪೆಟ್ಟಿಗೆಯಲ್ಲಿ ಹೆಚ್ಚು ಸದ್ದು ಮಾಡದೇ ಇದ್ದರೂ ಐದು ಭಾಷೆಗಳಲ್ಲಿ ಚಿತ್ರ ಥಿಯೇಟರ್‌ಗಳಲ್ಲಿ ಬಂದಾಗ ಭಾರಿ ಮೆಚ್ಚುಗೆಗೆ ಪಾತ್ರವಾಯಿತು. ಅಮಿತಾಭ್ ಬಚ್ಚನ್ ದೀಪಿಕಾ ಪಡುಕೋಣೆ, ಪ್ರಭಾಸ್, ಕಮಲ್ ಹಾಸನ್ ನಟಿಸಿರುವ ಈ ಚಿತ್ರವನ್ನು ನಾಗ್ ಅಶ್ವಿನ್ ನಿರ್ಮಿಸಿದ್ದಾರೆ.
ವಿಶ್ವಾದಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾದ ಕಲ್ಕಿ 2898 ಎಡಿ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಮೂರನೇ ಅತಿದೊಡ್ಡ ಓಪನರ್ ಕಂಡ ಸಿನಿಮಾವಾಗಿ ಹೊರಹೊಮ್ಮಿತ್ತು. ಆರಂಭಿಕ ದಿನದಂದು 180 ಕೋಟಿ ರೂ. ಗಳಿಕೆ ಕಂಡ ಚಿತ್ರಕ್ಕೆ ಭಾರತದಲ್ಲಿ ಉತ್ತಮ ಪ್ರತಿಕ್ರಿಯೆಯು ವ್ಯಕ್ತವಾಯಿತು.
ಚಲನಚಿತ್ರದ ಹಿಂದಿ ಆವೃತ್ತಿಯು ನೆಟ್‌ಫ್ಲಿಕ್ಸ್‌ನಲ್ಲಿ ಪ್ರದರ್ಶನವನ್ನು ಪ್ರಾರಂಭಿಸಿದೆ. ಇನ್ನು ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಆವೃತ್ತಿಗಳು ಅಮೆಜಾನ್ ಪ್ರೈಮ್ ನಲ್ಲಿ ಲಭ್ಯವಿದೆ.
ಏಕಕಾಲಕ್ಕೆ ಎರಡು ಸ್ಟ್ರೀಮಿಂಗ್ ದೈತ್ಯ ಒಟಿಟಿಯಲ್ಲಿ ಚಲನಚಿತ್ರದ ಡ್ಯುಯಲ್ ಪ್ಲಾಟ್‌ಫಾರ್ಮ್ ಬಿಡುಗಡೆ ತಂತ್ರವು ‘ಕಲ್ಕಿ 2898 ಎಡಿ’ ಚಿತ್ರವನ್ನು ವಿವಿಧ ಪ್ರದೇಶಗಳು ಮತ್ತು ಭಾಷೆಗಳಲ್ಲಿ ವ್ಯಾಪಕವಾಗಿ ಪ್ರೇಕ್ಷಕರನ್ನು ತಲುಪುವ ಗುರಿಯನ್ನು ಹೊಂದಿದೆ. ಈ ವಿಧಾನವು ವೀಕ್ಷಕರನ್ನು ಹೆಚ್ಚಿಸುವುದು ಮಾತ್ರವಲ್ಲದೆ ವೈವಿಧ್ಯಮಯ ಭಾಷಾ ಆದ್ಯತೆಗಳನ್ನು ಸಹ ಒದಗಿಸುತ್ತದೆ. ಇದು ಅಪರೂಪವಾಗಿ ಕಂಡುಬರುತ್ತದೆ.
‘ಕಲ್ಕಿ 2898 ಎಡಿ’ ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 1050 ಕೋಟಿ ರೂ. ಗಳಿಸಿತ್ತು. ಭಾರತದಲ್ಲಿ ಎಲ್ಲಾ ಭಾಷೆಗಳಲ್ಲಿ 700 ಕೋಟಿ ರೂ. ಗಿಂತ ಹೆಚ್ಚು ಗಳಿಸಿದೆ. ಚಿತ್ರದ ಒಟಿಟಿ ಆವೃತ್ತಿಯು ಚಿತ್ರಮಂದಿರಗಳಲ್ಲಿ ಚಿತ್ರವನ್ನು ನೋಡಲಾಗದ ಹೆಚ್ಚಿನ ಪ್ರೇಕ್ಷಕರನ್ನು ತಲುಪುವಂತೆ ಮಾಡಲಿದೆ ಎನ್ನುವುದು ಚಿತ್ರ ತಂಡದ ನಿರೀಕ್ಷೆಯಾಗಿದೆ.
Post a comment
Log in to write reviews