ಅಲ್ಲಲ್ಲಿ ಜನ ಒಂದು ಮಾತು ಹೇಳ್ತಿದ್ದಾರೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ಮಳೆಯೇ ಇಲ್ಲ. ಬೆಳೆ ಬಗ್ಗೆ ಮಾತಾಡುವಂತೆಯೇ ಇಲ್ಲ.
ಅದರಲ್ಲೂ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಾಗೆಲ್ಲ ಮಳೆ ಇಲ್ಲ ಮತ್ತು ಭೀಕರ ಬರ.
ಇದು ಎಷ್ಟು ವಾಸ್ತವ?
ಸಿದ್ದರಾಮಯ್ಯ ಎರಡನೇ ಬಾರಿಗೆ ಮುಖ್ಯಮಂತ್ರಿ ಆಗಿದ್ದು 2023 ರಲ್ಲಿ. ಮೇ 13 ರಂದು ವಿಧಾನಸಭಾ ಚುನಾವಣೆ ಫಲಿತಾಂಶ ಬಂತು. ಡಿ ಕೆ ಶಿವಕುಮಾರ್ ಜೊತೆ ಹಗ್ಗಜಗ್ಗಾಟ ಆದ ನಂತರ ಸಿದ್ದರಾಮಯ್ಯ ಮುಖ್ಯಮಂತ್ರಿ ಆದರು.
ಆಗ ತಾನೇ ಮಳೆಗಾಲ ಆರಂಭ. 2023 ರ ಸಾಲಿನಲ್ಲಿ ಮಳೆ ಸ್ಥಿತಿ ಹೇಗಿತ್ತು?
ಪೂರ್ಣ ಪ್ರಮಾಣದಲ್ಲಿ ಮಳೆ ಆಗಲಿಲ್ಲ. -23%.
ಕರ್ನಾಟಕದ ಬಹುಭಾಗಗಳಲ್ಲಿ ಬರ. ಕುಡಿಯುವ ನೀರಿಗೆ ತೀವ್ರ ಕೊರತೆ. 2024 ರಲ್ಲಿ ಬೆಂಗಳೂರು ಸೇರಿದಂತೆ ಹಲವೆಡೆ ನೀರಿಗೆ ಹಾಹಾಕಾರ.
2024 ರಲ್ಲಂತೂ ಸುಡುಬಿಸಿಲು. ಈ ವರ್ಷ ಮಳೆರಾಯ ಕೈಹಿಡಿಯದಿದ್ದರೆ ರೈತರಿ ಹಾಗೂ ಶ್ರೀಸಾಮಾನ್ಯರ ಬವಣೆ ಊಹಿಸಿಕೊಳ್ಳಲೂ ಅಸಾಧ್ಯ.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಇದಕ್ಕೂ ಮುನ್ನ 2013 ರಿಂದ 2018 ರವರೆಗೂ ಪೂರ್ಣಾವಧಿ, ಪೂರ್ಣಮತದ ಸರ್ಕಾರವಿತ್ತು.
ಸಿದ್ದರಾಮಯ್ಯ ಅವಧಿಯಲ್ಲಿ ರಾಜ್ಯದಲ್ಲಿ ಮಳೆ ಪ್ರಮಾಣ ಎಷ್ಟಿತ್ತು?
ಯಾವುದೇ ಒಂದು ರಾಜ್ಯದಲ್ಲಿ ಉತ್ತಮ ಮಳೆಯ ಪ್ರಮಾಣ ಎಂದರೆ 1153 ಮಿಲಿ ಮೀಟರ್ ಗಳಷ್ಟಾದರೂ ಮಳೆ ಆಗಬೇಕು. ಸಿದ್ದರಾಮಯ್ಯ ಅವಧಿಯಲ್ಲಿ ರಾಜ್ಯದಲ್ಲಿ ಮಳೆ ಪ್ರಮಾಣ ಎಷ್ಟಾಗಿತ್ತು ಎಂದು ನೋಡುವುದಾದರೆ, ಅವುಗಳ ಮಾಹಿತಿ ಈ ಕೆಳಕಂಡಂತಿದೆ:-
2013 ರ ಸಾಲಿನಲ್ಲಿ ಮಳೆ ಪ್ರಮಾಣ ಕರ್ನಾಟಕದಲ್ಲಿ... 1235.6
2014 ರ ಸಾಲಿನಲ್ಲಿ ...1238.5
2015 ರ ಸಾಲಿನಲ್ಲಿ.. 1024.9
2016 ರ ಸಾಲಿನಲ್ಲಿ.. 845.73
2017 ರ ಸಾಲಿನಲ್ಲಿ..1111.7
2018 ರ ಸಾಲಿನಲ್ಲಿ… 1076.7
2019 ರ ಸಾಲಿನಲ್ಲಿ…1422.3
2020 ರ ಸಾಲಿನಲ್ಲಿ… 1419.1
2021 ರ ಸಾಲಿನಲ್ಲಿ.. 1450.9
2022 ರ ಸಾಲಿನಲ್ಲಿ…….1566.5
2018 ರ ವರೆಗೆ ಸಿದ್ದರಾಮಯ್ಯ ಅವಧಿಯಲ್ಲಿ ಮಳೆ ಪ್ರಮಾಣ ಕಡಿಮೆಯಾಗಿತ್ತು, 2019 ರ ನಂತರ ಬಂದ ಯಡಿಯೂರಪ್ಪ ಹಾಗೂ ಕುಮಾರ್ ಸ್ವಾಮಿ ಅವಧಿಯಲ್ಲಿ ಉತ್ತಮ ಮಳೆಯಾಗಿತ್ತು. ಇದೆಲ್ಲ ಮಾಹಿತಿ ಅವಲೋಕಿಸಿದರೆ, ಕಾಂಗ್ರೆಸ್ ಸರ್ಕಾರ ಅಂದರೆ ಸಿದ್ದರಾಮಯ್ಯ ಸರ್ಕಾರ ಇದ್ದಾಗೆಲ್ಲ ಮಳೆ ಕೊರತೆ, ಬರ ಪರಿಸ್ಥಿತಿ ಇದ್ದಿದ್ದೇ. ಇದು 2024ರಲ್ಲೂ ಮರುಕಳಿಸಿದರೆ, ಜನರ ಮತ್ತು ರೈತರು ಬಸವಳಿಯುತ್ತಾರೆ. ಮತ್ತು ಕಾಂಗ್ರೆಸ್ ಸರ್ಕಾರ ಬಂದಾಗೆಲ್ಲ ಕರ್ನಾಟಕದಲ್ಲಿ ಮಳೆಯಿಲ್ಲ, ಬೆಳೆಯಿಲ್ಲ ಮತ್ತು ಎಲ್ಲೆಲ್ಲೂ ಬರ ಎಂದು ಜನ ಮಾತಾಡಿಕೊಳ್ಳೋದು ಸರಿ ಎಂಬುದು ಸಾಬೀತಾಗುತ್ತದೆ.
Tags:
- karnataka draught
- which district has highest rainfall in karnataka?
- karnataka rain
- which district has lowest rainfall in karnataka?
- district-wise annual rainfall in karnataka
- karnataka congress
- karnataka cm
- karnataka latest news
- siddaramaiah
- subhash chandra bose statue inauguration
- central vista inauguration
- karnataka
- karnataka news
- karanataka today breaking
- kartavya path inauguration
- #karnataka economic survey
- karnataka politics
- karanatakatodynews
Post a comment
Log in to write reviews