ಕವಿತಾ ಗೌಡ ಹಾಗೂ ಚಂದನ್ ಕುಮಾರ್ ದಂಪತಿ ಇತ್ತೀಚೆಗಷ್ಟೇ ಗಂಡು ಮಗುವಿಗೆ ಜನ್ಮ ನೀಡಿದ್ದರು. ಪಾಲಕರಾದ ಖುಷಿಯಲ್ಲಿದ್ದ ದಂಪತಿ ಈಗ ತಮ್ಮ ಮಗನ ಪೋಟವನ್ನು ರಿವೀಲ್ ಮಾಡಿದ್ದು ಅವರ ಅಭಿಮಾನಿ ಬಳಗದ ಕೋರಿಕೆ ಈಡೇರಿಸಿದ್ದಾರೆ.
ಸ್ವತಃ ಕವಿತಾ ಗೌಡ ಅವರೇ ತಮ್ಮ ಮುದ್ದು ಮಗನ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಫ್ಯಾನ್ಸ್ ಕಡೆಯಿಂದ ಉತ್ತಮ ಲೈಕ್ಸ್ ಸಿಕ್ಕಿದ್ದು, ಗಂಟೆಗೆ ಸಾವಿರಾರು ಲೈಕ್ಸ್ ಪಡೆದುಕೊಂಡಿದೆ.
ಚಂದನ್ ಹಾಗೂ ಕವಿತಾ ಒಂದೇ ಧಾರಾವಾಹಿಯಲ್ಲಿ ನಟಿಸಿದವರು. ಬಳಿಕ ಇಬ್ಬರ ಮಧ್ಯೆ ಪ್ರೀತಿ ಮೂಡಿತು. ನಂತರ ಮದುವೆ ಆಗುವ ನಿರ್ಧಾರ ತೆಗೆದುಕೊಂಡು ಕೊವಿಡ್ ಸಂದರ್ಭದಲ್ಲಿ ವಿವಾಹವಾಗಿದ್ದರು. ಇತ್ತೀಚೆಗೆ ಗಂಡು ಮಗು ಜನಿಸಿದ ಬಗ್ಗೆ ದಂಪತಿ ಮಾಹಿತಿ ನೀಡಿದ್ದರು.
ಕೆಲವು ಸೆಲೆಬ್ರಿಟಿಗಳು ಮಕ್ಕಳ ಮುಖವನ್ನು ರಿವೀಲ್ ಮಾಡೋಕೆ ಇಷ್ಟಪಡುವುದಿಲ್ಲ. ಆದರೆ, ಕವಿತಾ ಗೌಡ ಹಾಗೂ ಚಂದನ್ ದಂಪತಿ ಮಗುವಿನ ಮುಖವನ್ನು ಎಲ್ಲರಿಗೂ ತೋರಿಸಿದ್ದಾರೆ. ಮತ್ತಷ್ಟು ಫೋಟೋ ಹಂಚಿಕೊಳ್ಳಿ ಎಂದು ಫ್ಯಾನ್ಸ್ ಕಮೆಂಟ್ಸ್ ಮಾಡಿದ್ದಾರೆ
Post a comment
Log in to write reviews