ನೈರೋಬಿ: ದೇಶಾದ್ಯಂತ ನಡೆದ ಭಾರೀ ಪ್ರತಿಭಟನೆಗೆ ಮಣಿದ ಕೀನ್ಯಾದ ಅಧ್ಯಕ್ಷ ವಿಲಿಯಂ ರೂಟೊ ವಿವಾದಾತ್ಮಕ ತೆರಿಗೆ ಹೆಚ್ಚಳ ಮಸೂದೆಯನ್ನು ವಾಪಸು ಪಡೆಯುವುದಾಗಿ ಹೇಳಿದ್ದಾರೆ.
ತೆರಿಗೆ ಹೆಚ್ಚಳ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಸಂಸತ್‍ಗೆ ಬೆಂಕಿ ಹಚ್ಚಲಾಗಿತ್ತು. ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ಕನಿಷ್ಠ 22 ಮಂದಿ ಮೃತಪಟ್ಟಿರುವುದಾಗಿ ಕೀನ್ಯಾ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ವರದಿ ಮಾಡಿತ್ತು.
ದೇಶವನ್ನುದ್ದೇಶಿಸಿ ಮಾತನಾಡಿದ ರೂಟೊ ಕೀನ್ಯಾ, ಜನತೆಗೆ ಈ ಮಸೂದೆ ಒಪ್ಪಿಗೆಯಿಲ್ಲ ಎಂಬುದನ್ನು ನಾನು ಒಪ್ಪಿಕೊಂಡು ಮಸೂದೆಗೆ ಸಹಿ ಹಾಕುವುದಿಲ್ಲ ಎಂದು ನಿರ್ಧರಿಸಿದ್ದೇನೆ. ಮಸೂದೆಯ ಬಗ್ಗೆ ಯುವಜನತೆಯೊಂದಿಗೆ ಸಂವಾದ ನಡೆಸಲಾಗುವುದು ಎಂದು ಹೇಳಿದ್ದಾರೆ.
Post a comment
Log in to write reviews