ಅಹಮದಾಬಾದ್ : ಐಪಿಎಲ್ 2024 – ರಾಜಸ್ಥಾನ್ ರಾಯಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಂದು ಅಹಮದಾಬಾದ್ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುವ ಎಲಿಮಿನೇಟರ್ ಪಂದ್ಯದಲ್ಲಿ ಕಣಕ್ಕಿಳಿಯಲು ಸಜ್ಜಾಗಿತ್ತು. ಆದರೆ, ಇದೀಗ ದುಷ್ಕರ್ಮಿಗಳು ಐಪಿಎಲ್ ಕಿಂಗ್ ʼವಿರಾಟ್ ಕೊಹ್ಲಿʼಗೆ ಜೀವ ಬೆದರಿಕೆ ಹಾಕಿದ್ದಾರೆ. ಈ ಹಿನ್ನಲೆ ಇಂದು IPL ಎಲಿಮಿನೇಟರ್ ಪಂದ್ಯ ನಡೆಯುತ್ತಾ ಇಲ್ವಾ? ಅನ್ನೊ ಪ್ರಶ್ನೆ ಎಲ್ಲರಲ್ಲಿ ಹುಟ್ಟಿಕೊಂಡಿದೆ.
ಬೆದರಿಕೆ ಹಿನ್ನೆಲೆ ಆರ್ಸಿಬಿ ಎಲ್ಲಾ ಶೆಡ್ಯೂಲ್ ಕ್ಯಾನ್ಸಲ್ ಮಾಡಿದ್ದು, ಆರ್ಸಿಬಿ ಸಂಜೆಯ ಫ್ರೀ-ಮ್ಯಾಚ್ ಪ್ರೆಸ್ಮೀಟ್ ಸಹ ರದ್ದುಮಾಡಿದೆ. ಈದುವರೆಗೂ ಆರ್ಸಿಬಿ ಆಟಗಾರರು ಹೊಟೇಲ್ನಲ್ಲೇ ಉಳಿದಿದ್ದು, ಇದರ ಹಿನ್ನಲೆ ಅಹಮದಾಬಾದ್ ಹೊಟೇಲ್ ಗೆ ಭಾರೀ ಬಿಗಿ ಭದ್ರತೆ ವ್ಯವಸ್ಥೆ ಮಾಡಿದ್ದಾರೆ.
ಈಗಾಗಲೇ ಅಹಮದಾಬಾದ್ ಏರ್ಪೋರ್ಟ್ನಲ್ಲಿ ಪೊಲೀಸರು ನಾಲ್ವರು ಶಂಕಿತರನ್ನು ಅರೆಸ್ಟ್ ಮಾಡಿದ್ದಾರೆ. ಶಂಕಿತರ ಬಂಧನದ ಬೆನ್ನಲ್ಲೇ RCB ಆಟಗಾರರಿಗೆ ಬಿಗಿ ಭದ್ರತೆ ವ್ಯವಸ್ಥೆ ಮಾಡಿದ್ದಾರೆ.
Post a comment
Log in to write reviews