Samayanews.

Samayanews.

2024-12-23 11:47:55

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಸಿಎಂ ಸಿದ್ದರಾಮಯ್ಯ ತವರಿನ ಅತಿದೊಡ್ಡ ಆಸ್ಪತ್ರೆಯಾಗಿರುವ ಕೆಆರ್ ಆಸ್ಪತ್ರೆಗೇ ಇದೀಗ ಚಿಕಿತ್ಸೆ ಬೇಕಾಗಿದೆ

ಮೈಸೂರು:ನೂರಾರು ಕೋಟಿ ರೂಪಾಯಿ ಅನುದಾನ ನೀಡಿದ್ದರೂ ಸಿಎಂ ಸಿದ್ದರಾಮಯ್ಯ ತವರು ಮೈಸೂರಿನ ಕೆಆರ್​​ ಆಸ್ಪತ್ರೆಯಲ್ಲಿ ಮೂಲಸೌಕರ್ಯ ಇಲ್ಲದಿರುವುದು ಬೆಳಕಿಗೆ ಬಂದಿದೆ. ಇರುವ ಒಂದು ವ್ಹೀಲ್​ ಚೇರ್​ಗೆ ಆಸ್ಪತ್ರೆ ಸಿಬ್ಬಂದಿ ಬೀಗ ಹಾಕಿಟ್ಟಿದ್ದರಿಂದ ವೃದ್ಧೆಯೊಬ್ಬರನ್ನು ಸಂಬಂಧಿಕರು ಪ್ಲಾಸ್ಟಿಕ್ ಚೇರ್​​ನಲ್ಲೇ ಕರೆದೊಯ್ದ ವಿಡಿಯೋ ಈಗ ವೈರಲ್ ಆಗುತ್ತಿದೆ.

ಮೈಸೂರಿನಲೇ ಅತಿದೊಡ್ಡ ಆಸ್ಪತ್ರೆಯಾಗಿರುವ, ಶತಮಾನ ಪೂರೈಸಿರುವ ಪ್ರತಿಷ್ಠಿತ ಕೆಆರ್ ಆಸ್ಪತ್ರೆಯಲ್ಲಿ ಮೂಲಸೌಕರ್ಯವೂ ಇಲ್ಲದಿರುವುದು ಬೆಳಕಿಗೆ ಬಂದಿದೆ. ಈಗಾಗಲೇ ಈ ಆಸ್ಪತ್ರೆಗೆ ನೂರು ಕೋಟಿ ರೂಪಾಯಿ ಅನುದಾನ ಕೂಡ ನೀಡಲಾಗಿದೆ. ನಾಲ್ಕು ಜಿಲ್ಲೆಗಳಿಗೆ ಪ್ರತಿಷ್ಠಿತ ಆಸ್ಪತ್ರೆಯಾಗಿರುವ ಕೆಆರ್ ಆಸ್ಪತ್ರೆಗೇ ಇದೀಗ ಚಿಕಿತ್ಸೆ ಬೇಕಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಸ್ಪತ್ರೆಗೆ ಹರೀಶ್​ಗೌಡ ಭೇಟಿ

ವಿಷಯ ತಿಳಿಯುತ್ತಿದ್ದಂತೆಯೇ ಶಾಸಕ ಹರೀಶ್‌ಗೌಡ ಕೆಆರ್​ ಆಸ್ಪತ್ರೆಗೆ ಭೇಟಿ ನೀಡಿದರು. ವ್ಹೀಲ್​ಚೇರ್​​ಗೆ ಬೀಗ ಹಾಕಿರುವುದನ್ನು ಕಂಡು ಕೆಂಡಾಮಂಡಲವಾದ ಶಾಸಕರು, ‘ನಿಮಗೆ ಸರ್ಕಾರದಿಂದ ಸಂಬಳ ಬರುತ್ತಿಲ್ಲವೇ? ಹೊರ ಗುತ್ತಿಗೆಯವರಿಗೆ ಸರಿಯಾಗಿ ಸಂಬಳ ನೀಡುತ್ತಿಲ್ಲವೇ? ಸುಮ್ಮನೆ ಸರ್ಕಾರದ ಮರಿಯಾದೆ ಯಾಕೆ ಕಳೆಯುತ್ತಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು. ಅಲ್ಲದೆ, ಸಮಸ್ಯೆಯನ್ನು ತಕ್ಷಣ ಬಗೆಹರಿಸಿ ಎಂದು ಮೇಲ್ವೀಚಾರಕಿ ಶೋಭಾಗೆ ತಾಕೀತು ಮಾಡಿದರು.

ಕೆಆರ್ ಆಸ್ಪತ್ರೆಯಲ್ಲಿ ಅಧ್ವಾನಗಳ ಸರಣಿ

ಶಾಸಕರ ಭೇಟಿ ವೇಳೆ ಆಸ್ಪತ್ರೆಯಲ್ಲಿ ಸ್ಟ್ರೆಚ್ಚರ್, ವ್ಹೀಲ್‌ಚೇರ್‌ ಸೇರಿ ಸಾಮಾಗ್ರಿಗಳಿದ್ದ ಕೊಠಡಿಗೆ ಬೀಗ ಹಾಕಿರುವುದು ಕಂಡುಬಂತು. ಶಾಸಕರು ಬಂದರೂ, ಡೀನ್ ಬಂದರೂ ಬೀಗ ಸಿಗಲಿಲ್ಲ. ಕೊನೆಗೆ ಶಾಸಕ ಹರೀಶ್‌ಗೌಡ ಬೀಗ ಹಾಕಿದ ಬಾಗಿಲು ತಳ್ಳಿ ತೆಗೆಯುವ ಯತ್ನ ಮಾಡಿದರು. ನಂತರ ಶಾಸಕರ ಸಮ್ಮುಖದಲ್ಲೇ ಸಿಬ್ಬಂದಿ ಕಲ್ಲಿನಿಂದ ಹೊಡೆದು ಬೀಗ ಮುರಿದರು.

ಇದೇ ವೇಳೆ, ವಸ್ತುಗಳು ಹಾಳಾಗಿರುವ ಬಗ್ಗೆ ಅಧಿಕಾರಿ ಹಾಗೂ ಸಿಬ್ಬಂದಿ ನಡುವೆ ಕೆಸರೆರಚಾಟ ನಡೆಯಿತು. ಶಾಸಕರು ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆಯೇ ಮೇಲ್ವಿಚಾರಕಿ ರಾಜೀನಾಮೆ ಕೊಡುವ ಬೆದರಿಕೆ ಹಾಕಿದರು. ಸ್ಥಳದಿಂದ ಕಣ್ಣೀರು ಹಾಕುತ್ತ ತೆರಳಿದರು. ಕೊನೆಗೆ ಶಾಸಕರು ಮನವೊಲಿಸಿದರು.

ಆರ್​​ಟಿಐ ಕಾರ್ಯಕರ್ತರ ಬೆದರಿಕೆ ಇದೆ’

ನನಗೆ ಆರ್​​ಟಿಐ ಕಾರ್ಯಕರ್ತರ ಬೆದರಿಕೆ ಇದೆ. 10 ತಿಂಗಳಿಂದ ಕೆಲಸ ಮಾಡುತ್ತಿದ್ದೇನೆ. ಸೆಕ್ಯೂರಿಟಿ ಸೇರಿ ಸಿಬ್ಬಂದಿ ಸರಿಯಾಗಿ ಕೆಲಸ ಮಾಡುವುದಿಲ್ಲ. ಇದರ ಬಗ್ಗೆ ಪತ್ರ ಬರೆದರೆ 20 ಕ್ಕೂ ಹೆಚ್ಚು ಆರ್​​ಟಿಐ ಕಾರ್ಯಕರ್ತರು ಬಂದು ಪ್ರಶ್ನೆ ಮಾಡುತ್ತಾರೆ. ಇಲ್ಲಿ ವ್ಯವಸ್ಥೆ ಮೊದಲಿನಿಂದಲೂ ಹಾಳಾಗಿದೆ. ಡೀನ್ ಸೇರಿದಂತೆ ಎಲ್ಲರಿಗೂ ಮಾಹಿತಿ ಕೊಟ್ಟಿದ್ದೇನೆ. ಎಲ್ಲರಿಗೂ ಇದರ ಬಗ್ಗೆ ಮಾಹಿತಿ ಇದೆ ಎಂದು ಆಸ್ಪತ್ರೆ ಮೇಲ್ವಿಚಾರಕಿ ಶೋಭಾ ಹೇಳಿದರು.

img
Author

Post a comment

No Reviews