ಬೆಂಗಳೂರು: ಹಲವು ಮಾರ್ಗದಲ್ಲಿ ಉಂಟಾಗಿರುವ ಬಸ್ ಕೊರತೆಯನ್ನು ನೀಗಿಸಲು ಕೆಎಸ್‌ಆರ್‌ಟಿಸಿ ಹೊಸ ಬಸ್ ಖರೀದಿಗೆ ಚಿತನೆ ನಡೆಸಿದೆ. ರಾಜ್ಯದ ಹಲುವು ಭಾಗದಲ್ಲಿ ಅನೇಕ ಮಾರ್ಗದಲ್ಲಿ ಸಂಚಾರ ನಡೆಸಲು ಬಸ್ ಗಳ ಕೊರತೆಯಿದ್ದು ಈ ಕುರಿತು ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರಿಂದ ಹೆಚ್ಚಿನ ಬಸ್‌ಗಳ ನಿಯೋಜನೆಗೆ ಬೇಡಿಕೆ ಬಂದಿತ್ತು. ಈ ಹಿನ್ನಲೆಯಲ್ಲಿ 814 ಹೊಸ ಬಸ್‌ಗಳ ಖರೀದಿ ಮಾಡುವ ಮೂಲಕ 300ಕ್ಕೂ ಹೆಚ್ಚಿನ ಹೊಸ ಮಾರ್ಗಗಳಲ್ಲಿ ಹೆಚ್ಚುವರಿ ಬಸ್ ಸೇವೆ ಆರಂಭಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ನಿರ್ಧಾರ ಮಾಡಿದೆ. ಶಾಲೆ-ಕಾಲೇಜುಗಳು ಹೆಚ್ಚಿರುವ ಮಾರ್ಗಗಳಿಗೆ ಹೆಚ್ಚುವರಿ ಅಥವಾ ಹೊಸದಾಗಿ ಬಸ್ ಸೇವೆ ಆರಂಭಿಸಲು ಸಿದ್ದತೆ ನಡೆಸಿದೆ.
ಕೆಎಸ್‌ಆರ್‌ಟಿಸಿ ವ್ಯಾಪ್ತಿಯಲ್ಲಿ ಬಸ್‌ಗಳ ಕೊರತೆ ನೀಗಿಸುವ ಸಲುವಾಗಿ ಹೊಸ ಬಸ್ ಖರೀದಿ ಮಾಡಲಾಗುತ್ತಿದೆ. ಸದ್ಯ 814 ಹೊಸ ಬಸ್ಗಳ ಸೇರ್ಪಡೆ ಜತೆಗೆ 977 ಹಳೇ ಬಸ್‌ಗಳನ್ನು ಪುನಶ್ಚೇತನ ಮಾಡಲಾಗುತ್ತದೆ. 100 ಹೊಸ ಪಲ್ಲಕ್ಕಿ ಸ್ಲೀಪರ್ ಬಸ್‌ಗಳ ಸೇರ್ಪಡೆಗೆ ಸರ್ಕಾರ ಅನುಮತಿ ನೀಡಿದ್ದು, 20 ಅಂಬಾರಿ, 20 ಐರಾವತ ಉತ್ಸವ ಬಸ್‌ಗಳ ಖರೀದಿಗೆ ಅನುಮತಿ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಸರ್ಕಾರ ಕೂಡ ಈಗಾಗಲೇ ಗ್ರೀನ್ ಸಿಗ್ನಲ್ ನೀಡಿದೆ. ಸಾಮಾನ್ಯ ಸಾರಿಗೆ ಬಸ್‌ಗಳ ಜತೆಗೆ ಪ್ರೀಮಿಯಂ ಬಸ್‌ಗಳ ಸಂಖ್ಯೆಯನ್ನೂ ಹೆಚ್ಚಿಸಲು ನಿಗಮ ಯೋಜನೆ ಮಾಡಿದೆ ಎಂದು ನಿಗಮದ ಮೂಲಗಳು ತಿಳಿಸಿವೆ.
Post a comment
Log in to write reviews