ಮೇ 18ರಂದು ಬೆಂಗಳೂರಿನ ನೆಲಮಂಗಲದ ಪ್ಲೈ ಓವರ್ ಮೇಲೆ ಕೆಎಸ್ಆರ್ಟಿಸಿ ಬಸ್ಸೊಂದು ಅಪಘಾತಕ್ಕೀಡಾಗಿದೆ. ಚಾಲಕ ನಿಯಂತ್ರಣ ತಪ್ಪಿದ ಬಸ್ ಮೇಲ್ಸೇತುವೆ ಮೇಲಿನ ಡಿವೈಡರ್ಗೆ ಡಿಕ್ಕಿ ಹೊಡೆದು ಎದುರಿನ ರಸ್ತೆಗೆ ಹಾರಿ ನಿಂತಿದೆ. ಅದೃಷ್ಟವಶಾತ್ ಕೂದಲೆಳೆ ಅಂತರದಲ್ಲಿ ದೊಡ್ಡ ದುರಂತವೊಂದು ತಪ್ಪಿದೆ.
ದುರಂತದಲ್ಲಿ ಚಾಲಕ ಹಾಗೂ ನಿರ್ವಾಹಕ ಸೇರಿ 6 ಜನ ಗಾಯಗೊಂಡಿದ್ದಾರೆ. 40 ಅಡಿಯ ಮೇಲ್ಸೇತುವೆ ಮೇಲೆ ಘಟನೆ ನಡೆದಿದ್ದು, ಅಪಘಾತವಾಗಿರುವ ರಭಸ ನೋಡಿದರೆ ಬಸ್ ಕೆಳಗೆ ಬೀಳುವ ಸಾಧ್ಯತೆ ಇತ್ತು. ಒಂದು ವೇಳೆ ಬಸ್ ಉರುಳಿ ಬಿದ್ದಿದ್ದರೆ ಕೆಳಗೆ ಸಂಚರಿಸುವ ಜನರ ಜೀವಕ್ಕೂ ಅಪಾಯ ಆಗುತ್ತಿತ್ತು. ಈ ಅಪಘಾತ ಕುರಿತು ನೆಲಮಂಗಲ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Post a comment
Log in to write reviews