ಮೈಸೂರು : ಕುಕ್ಕರಹಳ್ಳಿ ಕೆರೆ ಅಭಿವೃದ್ಧಿಯಲ್ಲಿ ಭ್ರಷ್ಟಾಚಾರ ನಡೆಯುತ್ತದೆ ಎಂದು ಜನ ಆಕ್ಷೇಪ ಹೊರ ಹಾಕಿದ್ದಾರೆ.
ಮೈಸೂರು ನಗರದ ಹೃದಯ ಭಾಗವಾಗಿರುವ ಕುಕ್ಕರಹಳ್ಳಿ ಕೆರೆಯ ಪುನರ್ಜೀವನಕ್ಕೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸುವ ಕಾರ್ಯವನ್ನು ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಅಂಡ್ ಕಲ್ಚರಲ್ ಹರಿಟೇಜ್ ಸಂಸ್ಥೆಗೆ ವಹಿಸಲಾಗಿತ್ತು. ಆದರೆ ಇದೀಗ ಕುಕ್ಕರಹಳ್ಳಿ ಕೆರೆ ಅಭಿವೃದ್ಧಿ ವಿಚಾರವಾಗಿ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.
ದೆಹಲಿ ಮೂಲದ ಇಂಟೆಕ್ಸ್ ಎಂಬ ಕಂಪನಿಗೆ ಜಿಲ್ಲಾಡಳಿತವು ಡಿಪಿಆರ್ ಟೆಂಡರ್ ಕೊಟ್ಟಿದೆ. ಆನ್ಲೈನ್ ಟೆಂಡರ್ ಕರೆಯದೆ ಸಾರ್ವಜನಿಕ ಜಾಹೀರಾತು ಸಹ ನೀಡದೆ ದೆಹಲಿ ಮೂಲದ ಕಂಪನಿಗೆ ಯಾಕೆ ಜಿಲ್ಲಾಡಳಿತ ಟೆಂಡರ್ ಕೊಟ್ಟಿದೆ ಎಂಬ ಪ್ರಶ್ನೆ ಜನರಲ್ಲಿ ಮೂಡಿದೆ ಅಷ್ಟೇ ಅಲ್ಲದೆ ಕೇವಲ ಡಿಪಿಆರ್ ಸಿದ್ಧಪಡಿಸಲು 63.80 ಲಕ್ಷ ರೂ ನಿಗದಿ ಮಾಡಲಾಗಿದೆ, ಹಾಗೆ ಪ್ರಾರ್ಥಮಿಕವಾಗಿ 18 ಲಕ್ಷ ಬಿಡುಗಡೆ ಮಾಡಿದೆ. ಕೇವಲ ಡಿಪಿಆರ್ ಸಿದ್ಧಪಡಿಸಲು 63.80 ಲಕ್ಷ ಆದರೆ ಕೆರೆಯ ಸಂಪೂರ್ಣ ಅಭಿವೃದ್ಧಿಗೆ ಎಷ್ಟು ಹಣ ಬೇಕು? ಅನಾವಶ್ಯಕವಾಗಿ ಸರ್ಕಾರದ ಹಣವನ್ನು ಪೋಲು ಮಾಡಲು ಜಿಲ್ಲಾಡಳಿತ ಮಂದಾಗಿದೆ, ಇದರಲ್ಲಿ ಸಾಕಷ್ಟು ಬ್ರಷ್ಟಾಚಾರ ನಡೆಯುತ್ತಿದೆ, ಇದರಲ್ಲಿ ಸ್ವತಃ ಜಿಲ್ಲಾಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ಜನ ಇದರ ವಿರುದ್ಧ ಆಕ್ಷೇಪ ಹೊರ ಹಾಕುತ್ತಿದ್ದಾರೆ. ಈ ಕುರಿತು ಸದ್ಯ ಲೋಕಾಯುಕ್ತಕ್ಕೆ ದೂರು ಸಲ್ಲಿಸಲು ಕೆಆರ್‌ಎಸ್ ಪಕ್ಷದ ಶ್ರೀವಾರಿ ನಾಗರಾಜು ಮುಂದಾಗಿದ್ದಾರೆ ಅಲ್ಲದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಯಬೇಕು ಎಂದು ಆಗ್ರಹಿಸುತ್ತಿದ್ದಾರೆ.
Post a comment
Log in to write reviews