ಕುವೈತ್: ಕುವೈತ್ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಸಾವನ್ನಪ್ಪಿರುವ ಪೈಕಿ 14 ಜನರು ಕೇರಳ ರಾಜ್ಯಕ್ಕೆ ಸೇರಿದವರಾಗಿದ್ದು, ಮೃತ ದೇಹಗಳನ್ನು ಭಾರತಕ್ಕೆ ತರಲಾಗುತ್ತದೆ ಎನ್ನಲಾಗಿದೆ.
ವಿದೇಶಾಂಗ ಸಚಿವ ಎಸ್.ಜೈಶಂಕರ್ ಮೃತದೇಹ ಭಾರತಕ್ಕೆ ತರಲು ಕುವೈತ್ ವಿದೇಶಾಂಗ ಸಚಿವರೊಂದಿಗೆ ಮಾತನಾಡಿದ್ದು, ಶೀಘ್ರವೇ ಪಾರ್ಥಿವ ಶರೀರಗಳನ್ನು ಸ್ವದೇಶಕ್ಕೆ ಕಳುಹಿಸುವಂತೆ ಮನವಿ ಮಾಡಿದ್ದಾರೆ.
ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ಅವರು ಪ್ರಧಾನಿ ಮೋದಿಯವರ ನಿರ್ದೇಶನದ ಮೇರೆಗೆ ಕುವೈತ್‌ಗೆ ಪ್ರಯಾಣಿಸಿದ್ದು, ಮೃತರನ್ನು ಸ್ವದೇಶಕ್ಕೆ ತರಲು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.
ಘಟನೆಯಲ್ಲಿ ಮೃತಪಟ್ಟ 14 ಜನರ ಗುರುತು ಪತ್ತೆ ಹಚ್ಚಲಾಗಿದೆ. ಇದರಲ್ಲಿ ಕೇರಳ ಮೂಲದ ಥಾಮಸ್ ಒಮ್ಮೆನ್ (37) - ಪತ್ತನಂತಿಟ್ಟ, ವಿಶ್ವ ಕೃಷ್ಣ ಕಣ್ಣೂರು, ನೂಹ (40) - ಮಲಪ್ಪುರಂ, ಬಹುಲೆಯನ್ (36) - ತ್ರಿಶೂರ್, ಶ್ರೀಹರಿ ಪ್ರದೀಪ್ (27) – ಕೊಟ್ಟಾಯಂ, ಶಮೀರ್ ಉಮರುದ್ದೀನ್ (30) - ಕೊಲ್ಲಂ, ಕೆ.ರಂಜಿತ್ (34) - ಕಾಸರಗೋಡು, ಕೆಲು ಪೊನ್ಮಲೆರಿ (58) - ಕಾಸರಗೋಡು, ಸ್ಟೇಫಿನ್ ಅಬ್ರಹಂ ಸಬು (29) - ಕೊಟ್ಟಾಯಂ, ಆಕಾಶ್ ಸಾಯಿಸಿಧರನ್ ನಾಯರ್ (31) - ಪತ್ತನಂತಿಟ್ಟ, ಸಜ್ಜನ್ ಜಾರ್ಜ್ (29) - ಕೊಲ್ಲಂ, ಸಜು ವರ್ಘೆಸೆ (56) - ಪತ್ತನಂತಿಟ್ಟು, ಪಿ.ವಿ ಮುರಳಿಧರನ್ (68) - ಪತ್ತನಂತಿಟ್ಟ, ಲುಕು (48) – ಕೊಲ್ಲಂ ಮೃತರು.
ದಕ್ಷಿಣ ಕುವೈತ್ನ ಮಂಗಾಫ್ ನಗರದಲ್ಲಿ ಕಾರ್ಮಿಕರು ವಾಸವಿದ್ದ ಬೃಹತ್ ಕಟ್ಟಡವೊಂದರಲ್ಲಿ ಬುಧವಾರ ಅಗ್ನಿ ಅವಘಡ ಸಂಭವಿಸಿತ್ತು. ಘಟನೆಯಲ್ಲಿ ಈವರೆಗೆ 49 ಜನರು ಸಾವನ್ನಪ್ಪಿದ್ದು, ಇದರಲ್ಲಿ 40 ಜನ ಭಾರತೀಯರಾಗಿದ್ದಾರೆ. ಇನ್ನೂ 55 ಕ್ಕೂ ಅಧಿಕ ಜನರು ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
2 ಲಕ್ಷ ರೂ. ಪರಿಹಾರ
ಕುವೈಟ್ ದುರ್ಘಟನೆಗೆ ಪ್ರಧಾನಿ ಮೋದಿ ಅವರು ಸಂತಾಪ ಸೂಚಿಸಿದ್ದು ಪಿಎಂ ವಿಶೇಷ ನಿಧಿಯಿಂದ ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ.
Post a comment
Log in to write reviews