ಮೂಲ್ಕಿ: ನಕಲಿ ದಾಖಲೆಗಳನ್ನು ಸೃಷ್ಟಿಸಿ ಕೋಟಿಗಟ್ಟಲೆ ರೂಪಾಯಿ ಮೌಲ್ಯದ ಜಮೀನಿನನ್ನು ಕಬಳಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿಯಲ್ಲಿ ವರದಿಯಾಗಿದೆ. ಈ ಪ್ರಕರಣದಡಿಯಲ್ಲಿ ಹಳೆಯಂಗಡಿ ಇಂದಿರಾ ನಗರದ ನಿವಾಸಿ ಜಗದೀಶ್ ಕುಲಾಲ್ ಮತ್ತು ನಿತ್ಯಾನಂದ ಕುಂದರ್ ಎನ್ನುವರರನ್ನು ಮೂಲ್ಕಿ ಪೊಲೀಸರು ಬಂದಿಸಿದ್ದಾರೆ.
ಭವಾನಿ ಅಡಪ್ಪ ಎಂಬವರಿಗೆ ಸೇರಿದ ಸುರತ್ಕಲ್ ಗ್ರಾಮದ ಒಂದು ಎಕರೆ ಜಮೀನಿನ ಸರ್ವೆ ನಂಬರ್ 186/2ಸಿ ಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಏಪ್ರಿಲ್ 8ರಂದು ಮೂಲ್ಕಿಯ ಸಬ್ ರಿಜಿಸ್ಟಾರ್ ಕಚೇರಿಯಲ್ಲಿ ನೋಂದಣಿ ಮಾಡಿರುವುದಾಗಿ ಮಂಗಳೂರಿನ ಹರೀಶ್ ಶೆಟ್ಟಿ ಎಂಬುವವರು ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು ಎನ್ನಲಾಗಿದೆ.
Post a comment
Log in to write reviews