“ನನ್ನ ಮಗ್ಗ ನನ್ನ ಹೆಮ್ಮೆ” ಎಂಬ ಧ್ಯೇಯ ವಾಕ್ಯದೊಂದಿಗೆ 10ನೇ ವರ್ಷದ ಕೈ ಮಗ್ಗ ದಿನಾಚರಣೆಗೆ ಚಾಲನೆ
ಬೆಂಗಳೂರು: ಕರ್ನಾಟಕ ಸರ್ಕಾರದ ಕೈ ಮಗ್ಗ ಮತ್ತು ಜವಳಿ ಇಲಾಖೆ ವತಿಯಿಂದ ಇಂದು (ಆಗಸ್ಟ್ 07) 10ನೇ ವರ್ಷದ ಕೈ ಮಗ್ಗ ದಿನಾಚರಣೆಯನ್ನು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನನ್ನ ಮಗ್ಗ ನನ್ನ ಹೆಮ್ಮೆ ಎಂಬ ಧ್ಯೇಯ ವಾಕ್ಯದೊಂದಿಗೆ ದಿನಾಚರಣೆಗೆ ಚಾಲನೆ ನೀಡಲಾಯಿತು.
ಕೈ ಮಗ್ಗ ದಿನಾಚರಣೆಯನ್ನುದ್ದೇಶಿಸಿ ಮಾತನಾಡಿದ ಕಾವೇರಿ ಹ್ಯಾಂಡ್ ಲೂಮ್ ಅಧ್ಯಕ್ಷರು ಗಣೇಶ್, ಇತ್ತೀಚಿಗೆ ಕೈ ಮಗ್ಗ ಕ್ಷಿಣಿಸುತ್ತಿದೆ, ಇದಕ್ಕೆ ಆದ್ಯತೆ ಸಿಗಬೇಕು. ಹಾಗೆ ಎಲ್ಲರಿಗೂ ಹೆಚ್ಚಿನ ಉದ್ಯೋಗಳು ಸಿಗಬೇಕು ಮತ್ತು ಬೇರೆ ಇಲಾಖೆಯಂತೆ, ನಮ್ಮ ಜವಳಿ ಇಲಾಖೆಯಲ್ಲೂ ಹೆಚ್ಚಿನ ಉದ್ಯೋಗಳು ಸೃಷ್ಟಿ ಆಗಲಿ ಎಂದು ನುಡಿದರು.
ಕೈ ಮಗ್ಗ ಉದ್ದೇಶಿಸಿ ಜವಳಿ ಸಚಿವ ಶಿವಾನಂದ ಪಾಟೀಲ್ ಮಾತು:
ಕೈ ಮಗ್ಗದವರಿಗೆ ನ್ಯಾಯಾ ಕೊಡಿಸುವ ನಿಟ್ಟಿನಲ್ಲಿ ನಾವೆಲ್ಲಾ ಕೆಲಸ ಮಾಡ್ತಾ ಇದ್ದೇವೆ. ಕಳೆದ ವರ್ಷ ನಾನು ಇಲಾಖೆಗೆ ಬಂದ ಮೇಲೆ, ಈ ಇಲಾಖೆಯಲ್ಲಿ ಅನೇಕ ಸಮಸ್ಯೆಗಳಿವೆ ಎಂಬುದನ್ನು ಬಹಳ ಹತ್ತಿರದಿಂದ ಗಮನಿಸಿರುವೆ. “ಇದು ಸ್ಪರ್ಧಾತ್ಮಕ ಯುಗ, ಈಗಿನ ನೇಕಾರರಿಗೆ ಲಾಭ ಸಿಗ್ತಾ ಇಲ್ಲಾ”. ನೇಕಾರಿಕೆ ಜೊತೆ ವೈಜ್ಞಾನಿಕ ನೇಕಾರಿಕೆ ಮಾಡುವ ಚಿಂತನೆ ನಮ್ಮ ಕೈ ಮಗ್ಗ ಇಲಾಖೆಯದ್ದಾಗಿದೆ. ವೈಚಾರಿಕತೆ ಅಳವಡಿಸಡಿದ್ದಾರೆ ಹಾಗಾಗಿ ಇದರಲ್ಲಿ ಲಾಭ ಸಿಗೋದು ತುಂಬಾ ಕಷ್ಟಕರವಾಗಿದೆ. ಅಷ್ಟೇ ಅಲ್ಲದೆ, ಕೈ ಮಗ್ಗ ವೃತ್ತಿ ವೃತ್ತಿ ಕೂಡ ಕಡಿಮೆ ಆಗ್ತಿದೆ.
ಹಾಗಾಗಿ ಕೈ ಮಗ್ಗ ಇಲಾಖೆ ಸ್ಮಾರ್ಟ್ ಕಾರ್ಡ್ ಕೊಡುವ ಯೋಜನೆ ಹಮ್ಮಿಕೊಂಡಿದ್ದಲ್ಲದೆ, ನೇಕಾರಿಕೆ ಸಮ್ಮಾನ್ ಯೋಜನೆಯಡಿಯಲ್ಲಿ 5000 ಹಣ ಕೊಡ್ತಾ ಇದ್ದೇವೆ ಇದನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕೆಂದರು. ಈಗಾಗಲೇ 1 ಲಕ್ಷ ಸ್ಮಾರ್ಟ್ ಕಾರ್ಡ್ ವಿತರಣೆ ಆಗಿದೆ. ಇದರಿಂದ ನೇಕಾರ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ ಸಾಲ ಸಿಗುವಂತೆ ಮಾಡಲಾಗಿದೆ ಎಂದರು.
Post a comment
Log in to write reviews