ಬೆಂಗಳೂರು : ಹಾವು ರಕ್ಷಕರಿಗೆ ಎರಡು ದಿನಗಳ ತರಬೇತಿಯನ್ನು ಜೂನ್ 19 ಹಾಗೂ 20 ರಂದು ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಆಯೋಜಿಸಲಾಗದೆ.
ಕರ್ನಾಟಕ ಅರಣ್ಯ ಇಲಾಖೆಯು ಹಮ್ಮಿಕೊಂಡಿರುವ ಈ ತರಬೇತಿಯಲ್ಲಿ ಹಾವುಗಳ ರಕ್ಷಣೆ, ಸುರಕ್ಷತೆ, ನಿರ್ವಹಣೆ ವಿಧಾನಗಳು, ಕಾರ್ಯತಂತ್ರಗಳು, ಉರಗ ರಕ್ಷಕರಿಗೆ ಹಾವು ಕಚ್ಚಿದಾಗ ಪ್ರಥಮ ಚಿಕಿತ್ಸೆಯ ಮಾಹಿತಿ ಮತ್ತು ದಾಖಲಾತಿಗಳ ನಿರ್ವಹಣೆ, ಇಲಾಖೆಯೊಂದಿಗೆ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಲು ಅನುಕೂಲವಾಗಲು ತಜ್ಞ ಹಾಗೂ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಲಾಗುವುದು.
ನೋಂದಣಿ ಮಾಡಿಕೊಂಡವರಿಗೆ ಮಾತ್ರ ತರಬೇತಿ ಪಡೆಯಲು ಅವಕಾಶವಿದ್ದು, ಆಸಕ್ತರು ಲಿಂಕ್ https:/bit.ly/kfdswblr and https://forms.gle/mT8gNW2oK7usEhx58 ಮೂಲಕ ನೋಂದಣಿ ಮಾಡಿಕೊಳ್ಳಬಹುದು ಎಂದು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಉಪ ಅರಣ್ಯ ಸಂರಕ್ಷಣಾಧಿಕಾರಿ ತಿಳಿಸಿದ್ದಾರೆ.
Post a comment
Log in to write reviews