ಹುಬ್ಬಳ್ಳಿ: ಮಾದ್ಯಮದೊಂದಿಗೆ ಮಾತನಾಡಿದ ಸಚಿವ ಪ್ರಲ್ಹಾದ ಜೋಶಿ ದೆಹಲಿ ಮುಖ್ಯಮಂತ್ರಿ ಆಗಿರಲು, ಅರವಿಂದ ಕೇಜ್ರಿವಾಲ್ ಅವರಿಗೆ ಯೋಗ್ಯತೆ ಇಲ್ಲ ಎಂದು ಹೇಳಿದರು. ಅವರದ್ದು ಯಾವುದೇ ತತ್ವಗಳಿಲ್ಲದ ಪಕ್ಷ. ಭ್ರಷ್ಟಾಚಾರ, ಮಹಿಳೆಯರ ಮೇಲಿನ ದೌರ್ಜನ್ಯಗಳ ವಿರುದ್ಧ ಬಂಡಾಯವೆದ್ದು ಅಸ್ತಿತ್ವಕ್ಕೆ ಬಂದ ಪಕ್ಷ. ಇಂದು ತಾನೇ ಆ ಹಾದಿ ತುಳಿದಿದೆ. ಎಎಪಿ ಇಂದು ಭ್ರಷ್ಟಾಚಾರ, ಮಹಿಳೆಯರ ಮೇಲಿನ ದೌರ್ಜನ್ಯಗಳ ಪರ ನಿಲ್ಲುವ ಪಕ್ಷವಾಗಿ ಮಾರ್ಪಟ್ಟಿದ್ದು, ನಿಜಕ್ಕೂ ನಾಚಿಕೆಗೇಡಿನ ಸಂಗತಿ ಎಂದರು. ಸ್ವಾತಿ ಮಲಿವಾಲ್ ಅವರೊಂದಿಗೆ ಒಪ್ಪಂದ ಫಲಿಸದ ಕಾರಣ ಆಕೆಯ ಚಾರಿತ್ರ್ಯದ ಮೇಲೆ ಎಎಪಿ ನಾಯಕರು ಮಸಿ ಬಳಿಯುತ್ತಿದ್ದಾರೆ ಎಂದು ಖಂಡಿಸಿದರು. ಕೇಜ್ರಿವಾಲ್ ಮನೆಯಲ್ಲಿದ್ದಾಗಲೇ ಸ್ವಾತಿ ಮಲಿವಾಲ್ ಅವರ ಮೇಲೆ ಹಲ್ಲೆ ನಡೆದಿರುವುದು ನಾಚಿಕೆಗೇಡಿನ ಸಂಗತಿ. ಸಿಎಂ ಕೇಜ್ರಿವಾಲ್ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಪ್ರಲ್ಹಾದ ಜೋಶಿ ಒತ್ತಾಯಿಸಿದ್ದಾರೆ.
Post a comment
Log in to write reviews