ಪ್ರಧಾನಿ ಮೋದಿಯ ಧ್ಯಾನದ ಬಗ್ಗೆ ಕಾಂಗ್ರೆಸ್ ನ ಕಪಿಲ್ ಸಿಬಲ್ ವ್ಯಂಗ್ಯವಾಡಿದ್ದು, ಕನ್ಯಾಕುಮಾರಿಗೆ ಪ್ರಾಯಶ್ಚಿತ್ತಕ್ಕಾಗಿ ಹೋಗುವುದು ಒಳ್ಳೆಯದೇ ಎಂದಿದ್ದಾರೆ.
ಚಂಡೀಗಢದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್ , ವಿವೇಕ-ಧ್ಯಾನವನ್ನು ಅರ್ಥಮಾಡಿಕೊಳ್ಳದ ವ್ಯಕ್ತಿ ಪ್ರಾಯಶ್ಚಿತ್ತಕ್ಕೆ ಹೋಗುತ್ತಿದ್ದರೆ ಅದು ಒಳ್ಳೆಯದು. ಸ್ವಾಮಿ ವಿವೇಕಾನಂದರ ಬರಹ-ಭಾಷಣಗಳಿಂದ ಸ್ಫೂರ್ತಿ ಪಡೆಯಲು ಹೊರಡುವುದು ಒಳ್ಳೆಯ ನಿರ್ಧಾರ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಕೇಂದ್ರ ಸರ್ಕಾರವು ತನ್ನ ಸಾಧನೆಗಳ ಬಗ್ಗೆ ಮಾತನಾಡುವುದಿಲ್ಲ. ಏಕೆಂದರೆ ಅಲ್ಲಿ ಹೇಳಲು ಏನೂ ಇಲ್ಲ. ಕಳೆದ 10 ವರ್ಷಗಳಿಂದ ಅವರು ಏನು ಮಾಡಿದ್ದಾರೆಂದು ಪ್ರಧಾನಿ ತಮ್ಮ ಭಾಷಣಗಳಲ್ಲಿಯೇ ಹೇಳಿದ್ದಾರೆ ಎಂದು ಸಿಬಲ್ ವ್ಯಂಗ್ಯಮಾಡಿದ್ದಾರೆ.
Post a comment
Log in to write reviews