ಟಾಪ್ 10 ನ್ಯೂಸ್
ವಸತಿಶಾಲೆಯಲ್ಲಿ ಕುರಾನ್ ಪಠಿಸುವಂತೆ ಸಚಿವ ಜಮೀರ್‌ಗೆ ರಾಜ್ಯ ಅಲ್ಪಸಂಖ್ಯಾತ ಅಯೋಗದ ಅಧ್ಯಕ್ಷರಿಂದ ಪತ್ರ
ಬೆಂಗಳೂರು : ಅಲ್ಪಸಂಖ್ಯಾತ ವಸತಿಶಾಲೆ ಹಾಗೂ ಹಾಸ್ಟೆಲ್ ಗಳಲ್ಲಿ ಬೆಳಗ್ಗೆ ಮತ್ತು ಸಂಜೆ ಕುರಾನ್ ಪಠಿಸುವಂತೆ ಸಮರ್ಥ ಗುರುವನ್ನು ನೇಮಿಸಬೇಕೆಂದು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಅಯೋಗದ ಅಧ್ಯಕ್ಷ ಅಬ್ದುಲ್ ಅಜೀಮ್ ಸಚಿವ ಜಮೀರ್ ಅಹ್ಮದ್ ಖಾನ್ ಗೆ ಪತ್ರ ಬರೆದಿದ್ದಾರೆ.
2019ನೇ ಸಾಲಿಗಿಂತ ಮೊದಲು ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಮುಂಜಾನೆ ಮತ್ತು ಸಾಯಂಕಾಲದ ಸಮಯದಲ್ಲಿ ಕುರಾನ್ ಪಠಣ ಇತ್ಯಾದಿ ಕಲಿಸಲಾಗುತ್ತಿತ್ತು.
ಕೋವಿಡ್ 19ರ ನಂತರ ಈ ಸೌಲಭ್ಯವನ್ನು ಕೈ ಬಿಡಲಾಗಿದೆ. ಹೀಗಾಗಿ ಅಲ್ಪಸಂಖ್ಯಾತರು ತಮ್ಮ ಮಕ್ಕಳನ್ನು ವಸತಿ ಶಾಲೆಗಳಲ್ಲಿ ದಾಖಲು ಮಾಡಲು ಆಸಕ್ತಿ ವಹಿಸುತ್ತಿಲ್ಲ. ಹೀಗಾಗಿ ಧಾರ್ಮಿಕ ಶಿಕ್ಷಣಕ್ಕೆ ಸಂಬಂಧಿಸಿದ ಗುರುಗಳನ್ನು ನೇಮಿಸಿದಲ್ಲಿ ದಾಖಲಾತಿ ಸಂಖ್ಯೆ ಹೆಚ್ಚಳವಾಗಲಿದೆ ಎಂದು ಅಜೀಮ್ ಅವರು ಪತ್ರದಲ್ಲಿ ತಿಳಿಸಿದ್ದಾರೆ.
Post a comment
Log in to write reviews