ಮಂಡ್ಯ: ರೈಲು ನಿಲ್ದಾಣದಲ್ಲಿ ಇಂದು (ಆಗಸ್ಟ್ 10) ಬೆಳಗ್ಗೆ ದಾರುಣ ಘಟನೆಯೊಂದು ನಡೆದಿದೆ. ಹಂಪಿ ಎಕ್ಸ್‌ಪ್ರೆಸ್ ರೈಲಿಗೆ ಸಿಲುಕಿ ಗೋಲ್ಡ್ ಮೆಡಲ್ ಪದವೀಧರೆ ದೇಹ ಛಿದ್ರ, ಛಿದ್ರವಾಗಿದೆ. ರೈಲಿಗೆ ಸಿಲುಕಿ ಸಾವನ್ನಪ್ಪಿದ ಯುವತಿಯನ್ನು ಸ್ವರ್ಣಸಂದ್ರ ಬಡಾವಣೆಯ 24 ವರ್ಷದ ರಮ್ಯಾ ಅವರಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಎಂಕಾಂನಲ್ಲಿ ಚಿನ್ನದ ಪದಕ ಪಡೆದಿದ್ದ ರಮ್ಯಾ ಅವರು ಬೆಂಗಳೂರಲ್ಲಿ ಅಕೌಂಟೆಂಟ್ ಟ್ರೈನಿಂಗ್ ಮಾಡುತ್ತಾ ಇದ್ದರು. ಹಾಗಾಗಿ ಪ್ರತಿನಿತ್ಯ ಮಂಡ್ಯದಿಂದ ಬೆಂಗಳೂರಿಗೆ ರೈಲಿನಲ್ಲಿ ತೆರಳುತ್ತಿದ್ದರು. ಇಂದು ರಮ್ಯಾ ಅವರು ಹಳಿ ದಾಟುತ್ತಿದ್ದಾಗ ರೈಲಿಗೆ ಸಿಲುಕಿದ ಯುವತಿಯ ದೇಹ ಛಿದ್ರಗೊಂಡಿದೆ. ಹಂಪಿ ಎಕ್ಸ್‌ಪ್ರೆಸ್ ರೈಲು ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿತ್ತು.
ರಮ್ಯಾ ಹಾಗೂ ಅವರ ತಂದೆ ಪ್ರತಿದಿನ ರೈಲಿನಲ್ಲೇ ಬೆಂಗಳೂರಿಗೆ ಹೋಗುತ್ತಾ ಇದ್ದರು. ಎಂದಿನಂತೆ ಇವತ್ತೂ ಕೂಡ ರಮ್ಯಾ ಅವರನ್ನು ಅವರ ತಮ್ಮ ರೈಲ್ವೆ ನಿಲ್ದಾಣಕ್ಕೆ ಕರೆದುಕೊಂಡು ಬಂದಿದ್ದಾನೆ. ಮೃತ ಯುವತಿ ತಮ್ಮ ಮೊದಲು ಅಪ್ಪನನ್ನು ಕರೆದುಕೊಂಡು ಹೋಗಿದ್ದಾರೆ. ಆಮೇಲೆ ರಮ್ಯಾ ಅವರನ್ನು ತಮ್ಮ ಕರೆದುಕೊಂಡು ಬಂದಿದ್ದಾರೆ. ಆಗ ಫ್ಲಾಟ್‌ಫಾರಂ ಹಳಿ ದಾಟುವಾಗ ರೈಲು ಡಿಕ್ಕಿಯಾಗಿದೆ.
ರೈಲು ನಿಲ್ದಾಣದ ರೈಲ್ವೆ ಮೇಲ್ಸೇತುವೆ ಬಳಿ ಹಳಿ ದಾಟುವ ವೇಳೆ ಈ ದುರಂತ ಸಂಭವಿಸಿದೆ. ರೈಲ್ವೆ ಹಳಿ ದಾಟುವ ವೇಳೆ ಮೈಸೂರಿಗೆ ತೆರಳುತ್ತಿದ್ದ ಹಂಪಿ ಎಕ್ಸ್‌ಪ್ರೆಸ್ ರೈಲು ಗುದ್ದಿದೆ. Mcom ನಲ್ಲಿ ಚಿನ್ನದ ಪದಕ ಪಡೆದಿದ್ದ ಯುವತಿಯ ದೇಹ ಛಿದ್ರ, ಛಿದ್ರವಾಗಿದೆ. ಮಂಡ್ಯ ರೈಲ್ವೆ ಪೊಲೀಸರು ಮೃತ ಯುವತಿ ಶವವನ್ನು ಜಿಲ್ಲಾಸ್ಪತ್ರೆಗೆ ಸಾಗಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.
Post a comment
Log in to write reviews