ಶಿಕ್ಷಣ ಸಚಿವರು ಟ್ರೋಲ್ ಮಾಡುವವರಿಗೆ ಶಾಪ ಹಾಕೊಂಡು ಕೂತಿದ್ದಾರೆ, ಅವರೇನು ವಿಶ್ವಾಮಿತ್ರ ಮುನಿಗಳಾ ಎಂದು ಕುಮಾರ್ ಬಂಗಾರಪ್ಪ ಲೇವಡಿ ಮಾಡಿದ್ದಾರೆ. ಮಳೆ ನಿಂತರೂ ಮಳೆಹನಿ ನಿಂತಿಲ್ಲ ಎನ್ನುವ ಹಾಗೇ ಶಿವಮೊಗ್ಗದಲ್ಲಿ ಸಹೋದರರ ವಾಗ್ಯುದ್ದಕ್ಕೆ ತೆರೆ ಬೀಳುತ್ತಿಲ್ಲ. ಎರಡು ದಿನಗಳ ಹಿಂದೆ ಟ್ರೋಲ್ ಮಾಡುವವರ ವಿರುದ್ದ ಕೆಂಡಕಾರಿದ್ದ ಸಚಿವ ಮಧು ಬಂಗಾರಪ್ಪ ಬಗ್ಗೆ ಸಹೋದರ ಬಿಜೆಪಿ ನಾಯಕ ಕುಮಾರ್ ಬಂಗಾರಪ್ಪ ಲೇವಡಿ ಮಾಡಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರಿಗೆ ಇಲಾಖೆಯ ಮೇಲೆ ಇನ್ನೂ ಹಿಡಿತ ಬಂದಿಲ್ಲ, ಇಲಾಖೆಯ ಕೆಲಸ ಏನೆಂದು ಗೊತ್ತಿಲ್ಲ. ಅವರಿಗೆ ಓದೋದಕ್ಕೆ ಬಂದರೆ ತಾನೆ, ಇಲಾಖೆಯ ಕೆಲಸ ಅರ್ಥವಾಗುವುದು" ಎಂದು ಕುಮಾರ್ ಬಂಗಾರಪ್ಪ ಹೀಯಾಳಿಸಿದ್ದಾರೆ.
ನಾವು ಬರಗಾಲದಲ್ಲಿದ್ದೇವೆ, ಪರಿಸ್ಥಿತಿ ಕೈಮೀರಿ ಹೋಗಿದೆ, ನೀರಿಲ್ಲದೆ ಜನ ಬೋರ್‌ವೆಲ್ ಅನ್ನು ಕಳೆದುಕೊಳ್ಳುತ್ತಿದ್ದಾರೆ. ರೈತರಿಗೆ ಅಲ್ವಸ್ವಲ್ಪ ಕೈಹಿಡಿದಿರುವುದು ಶುಂಠಿ ಬೆಳೆ ಮಾತ್ರ. ಉಳಿದ ಎಲ್ಲಾ ಬೆಳೆಗಳು ಕೈಬಿಟ್ಟು ಹೋಗಿದೆ ಎಂದು ಕುಮಾರ್ ಬಂಗಾರಪ್ಪ ಹೇಳಿದ್ದಾರೆ.
Post a comment
Log in to write reviews