ಟಾಪ್ 10 ನ್ಯೂಸ್
ಮಹಾಲಕ್ಷ್ಮಿ ಕೊಲೆ ಕೇಸ್ – ವೈದ್ಯರಿಂದ ಮರಣೋತ್ತರ ಪರೀಕ್ಷಾ ವರದಿ ಸಲ್ಲಿಕೆ

ಇಡೀ ಸಿಲಿಕಾನ್ ಸಿಟಿ ಜನತೆಯನ್ನ ಬೆಚ್ಚಿ ಬೆಳ್ಳಿಸಿದ ಒಂಟಿ ಮಹಿಳೆ ಮಹಾಲಕ್ಷ್ಮಿ ಮರ್ಡರ್ ಕೇಸ್ ಸಂಬಂಧ ವೈದ್ಯರು ಇಂದು ಮರಣೋತ್ತರ ರಿಪೋರ್ಟ್ ಸಲ್ಲಿಕೆ ಮಾಡುತ್ತಿದ್ದಾರೆ.
ವೈಯಾಲಿಕಾವಲ್‌ನಲ್ಲಿ ವಾಸವಿದ್ದ ಒಂಟಿ ಮಹಿಳೆಯ 52 ಪೀಸ್ ಮಾಡಿರೋ ದೇಹವನ್ನ ಬೌರಿಂಗ್ ಆಸ್ಪತ್ರೆ ವೈದ್ಯರು ಮರಣೋತ್ತರ ಪರೀಕ್ಷೆ ಮಾಡಿದ್ದಾರೆ. ಈ ಪ್ರಕರಣ ವೈದ್ಯರಿಗೂ ಕೂಡ ಚಾಲೆಂಜ್ ಆಗಿದ್ದು, ಮರಣೋತ್ತರ ಪರೀಕ್ಷಾ ವರದಿಯನ್ನು ಬೌರಿಂಗ್ ಆಸ್ಪತ್ರೆಯ ವೈದ್ಯರು ಇಂದು ಪೊಲೀಸರಿಗೆ ಒಪ್ಪಿಸಲಿದ್ದಾರೆ. ಪ್ರಾಥಮಿಕ ಮರಣೋತ್ತರ ಪರೀಕ್ಷೆ ಸಲ್ಲಿಕೆ ಮಾಡಲಿದ್ದು ಕೆಲವೊಂದು ಟೆಸ್ಟ್‌ಗಳ ರಿಪೋರ್ಟ್ ಅನ್ನು 10 ದಿನಗಳ ಬಳಿಕ ಸಲ್ಲಿಸಲಿದ್ದಾರೆ.
ಇನ್ನು ಮಧ್ಯೆ ರಾಷ್ಟ್ರೀಯ ಮಹಿಳಾ ಆಯೋಗ ಸುಮೊಟೋ ಕೇಸ್ ದಾಖಲಿಸಿಕೊಂಡಿದ್ದು. ಎಚ್ಚೆತ್ತ ರಾಜ್ಯ ಮಹಿಳಾ ಆಯೋಗದಿಂದ ಪೊಲೀಸ್ ಇಲಾಖೆಗೆ ಪತ್ರ ಬರೆದಿದ್ದಾರೆ. ಪೋಸ್ಟ್ ಮಾರ್ಟಂ ವರದಿಯಲ್ಲಿ ಭಯಾನಕ ಸತ್ಯಗಳು ಹೊರಬಿದ್ದಿವೆ.
Post a comment
Log in to write reviews