Samayanews.

Samayanews.

2024-12-24 12:58:25

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಈ ವಾರ ಕನ್ನಡದಲ್ಲಿ ಹಲವು ಚಿತ್ರಗಳು ರಿಲೀಸ್

‘ಕೃಷ್ಣಂ ಪ್ರಣಯ ಸಖಿ’ ಹಾಗೂ ‘ಭೀಮ’ ಚಿತ್ರದ ಅಬ್ಬರ ಕೊಂಚ ಕಡಿಮೆ ಆದ ಹಿನ್ನೆಲೆ ಈ ವಾರ ರಿಲೀಸ್ ಆಗುವ ಸಿನಿಮಾಗಳು ಹೈಪ್ ಪಡೆದುಕೊಳ್ಳೋ ಸಾಧ್ಯತೆ ಇದೆ. ಈ ವಾರ ಗುರುವಾರ (ಸೆಪ್ಟೆಂಬರ್ 12) ಹಾಗೂ ಶುಕ್ರವಾರ (ಸೆಪ್ಟೆಂಬರ 13) ಸಿನಿಮಾಗಳು ರಿಲೀಸ್ ಆಗುತ್ತಿವೆ. ಅದರಲ್ಲೂ ಕನ್ನಡದಲ್ಲಿ ಕೆಲವು ಚಿತ್ರಗಳು ಬಿಡುಗಡೆ ಕಾಣುತ್ತಿವೆ.

‘ರಾನಿ’
‘ರಾನಿ’ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಈ ಚಿತ್ರದಲ್ಲಿ ಕಿರಣ್ ರಾಜ್ ಅವರು ಪ್ರಮುಖ ಪಾತ್ರ ಮಾಡಿದ್ದಾರೆ. ರಾಧ್ಯಾ ಆರ್, ರವಿ ಶಂಕರ್, ಯಶ್ ಶೆಟ್ಟಿ, ಧರ್ಮಣ್ಣ ಕಡೂರ್ ಮೊದಲಾದವರು ನಟಿಸಿದ್ದಾರೆ. ಈ ಚಿತ್ರವನ್ನು ಗುರುತೇಜ್ ಶೆಟ್ಟಿ ನಿರ್ದೇಶನ ಮಾಡಿದ್ದಾರೆ. ಉಮೇಶ್ ಹೆಗ್ಡೆ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಮಣಿಕಾಂತ್ ಅವರು ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಈ ಸಿನಿಮಾ ಸೆಪ್ಟೆಂಬರ್ 12ರಂದು ರಿಲೀಸ್ ಆಗುತ್ತಿದೆ.

ಕಾಲಾಪತ್ಥರ್
ವಿಕ್ಕಿ ವರುಣ್​, ಧನ್ಯಾ ರಾಮ್​ಕುಮಾರ್ ಮೊದಲಾದವರು ‘ಕಾಲಾಪತ್ಥರ್’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ವಿಕ್ಕಿ ವರುಣ್ ಅವರೇ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಸೆಪ್ಟೆಂಬರ್ 13ರಂದು ರಿಲೀಸ್ ಆಗುತ್ತಿದೆ.

ವಿಕಾಸಪರ್ವ
ವಿಕಾಸಪರ್ವ ಹೆಸರಿನ ಚಿತ್ರದಲ್ಲಿ ರೋಹಿತ್ ನಾಗೇಶ್, ಸ್ವಾತಿ ಎಚ್​ವಿ, ಅಶ್ವಿನ್ ಹಾಸನ್ ಮೊದಲಾದವರು ನಟಿಸುತ್ತಿದ್ದಾರೆ. ಅನ್ಬು ಅರಸ್ ಅವರು ಈ ಚಿತ್ರ ನಿರ್ದೇಶನ ಮಾಡಿದ್ದಾರೆ.

ಎ.ಆರ್.​ಎಂ.
ಇದಲ್ಲದೆ ಮಲಯಾಳಂನಲ್ಲಿ ‘ಎ.ಆರ್​.ಎಂ’ ಹೆಸರಿನ ಸಿನಿಮಾ ಮೂಡಿಬರುತ್ತಿದೆ. ಟುವಿನೋ ಥಾಮಸ್, ಕೃತಿ ಶೆಟ್ಟಿ ಮೊದಲಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.

img
Author

Post a comment

No Reviews