ಮಾಂಸ ಪ್ರಿಯರಿಗೆ ಶಾಕ್, ಬೆಲೆ ಏರಿಕೆ ಕೇಳಿದ್ರೆ ಬೆಚ್ಚಿ ಬೀಳೋದು ಗ್ಯಾರಂಟಿ.....!
ಬೆಂಗಳೂರು: ಕೋಳಿ ಮತ್ತು ಮಟನ್ ದಿಢೀರ್ ಬೆಲೆ ಏರಿಕೆಯಿಂದ ಸುಸ್ತಾದ ಕರ್ನಾಟಕದ ಜನತೆ. ಇಷ್ಟು ದಿನ ತರಕಾರಿಗಳ ಬೆಲೆ ಏರಿಕೆಯಲ್ಲಿ ಚರ್ಚೆ ಆಗ್ತಾ ಇತ್ತು. ಆದರೆ ಈಗ ಚಿಕನ್, ಮಟನ್ ಬೆಲೆ ಕೂಡ ಏರಿಕೆಯಾಗಿದೆ. ಬಿಸಿಲಿನ ತಾಪಮಾನ ಹೆಚ್ಚಾದಂತೆ ಮಾಂಸ ಮತ್ತು ಮೊಟ್ಟೆ ಬೆಲೆ ಕೂಡ ಏರಿಕೆಯಾಗಿದೆ. ಕಳೆದ ತಿಂಗಳಲ್ಲಿ ಒಂದು ಕೆಜಿ ಚಿಕನ್ಗೆ 280 ರೂಪಾಯಿ, ಒಂದು ಕೆಜಿ ಮಟನ್ಗೆ 800 ರೂಪಾಯಿ. ಒಂದು ಮೊಟ್ಟೆಗೆ 7 ರಿಂದ 8 ರೂಪಾಯಿ ನಿಗದಿ ಮಾಡಲಾಗಿದೆ. ಈ ಸೀಜನ್ನಲ್ಲಿ ಮಾಂಸಹಾರಕ್ಕೆ ಹೆಚ್ಚು ಬೇಡಿಕೆ ಇದೆ. ಬಿಸಿಲಿನ ತಾಪಮಾನದಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಈ ವರ್ಷ ಕೋಳಿ ಸಾಕಾಣಿಕೆಯಾಗಿಲ್ಲ. ಬೇಡಿಕೆ ಎಷ್ಟಿದೆಯೋ ಅಷ್ಟು ಮಾಂಸ ಪೂರೈಕೆ ಆಗುತ್ತಿಲ್ಲ. ಏಕೆಂದರೆ ಬಿಸಿಲಿನ ತಾಪಮಾನ ಹೆಚ್ಚಾದ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಈ ವರ್ಷ ಕೋಳಿ ಸಾಕಾಣಿಕೆ ಆಗಿರುವುದಿಲ್ಲ. ಬೇಡಿಕೆಗೆ ತಕ್ಕಷ್ಟು ಮಾಂಸ ಪೂರೈಕೆ ಇಲ್ಲದ ಕಾರಣ ಬೆಲೆ ಏರಿಕೆ ಆಗಿರಬಹುದು. ಮುಂಬರುವ ತಿಂಗಳಲ್ಲಿ ಮಾಂಸದ ಬೆಲೆ ಹೆಚ್ಚಾಗುವ ಸಾಧ್ಯತೆ ತುಂಬಾ ಇದೆ.
ಚಿಕನ್ 1 ಕೆಜಿಗೆ ಗರಿಷ್ಠ ದರ 400 ರಿಂದ 430 ರೂ ಆಗಬಹುದು, ಮಟನ್ ಬೆಲೆ 1 ಕೆಜಿಗೆ ಗರಿಷ್ಠ ದರ 850 ರಿಂದ 950 ರೂ ತಲುಪಬಹುದು. ಹೀಗಾದರೆ ತರಕಾರಿ ಬೆಲೆ ಏರಿಕೆಯ ಜೊತೆ ಮಾಂಸದ ಬೆಲೆಯೂ ಕೂಡ ಏರಿಕೆಯಾಗುವ ಸಾಧ್ಯತೆ ಇದೆ.
Post a comment
Log in to write reviews