ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಚಾರ್ಜ್ಶೀಟ್ ಕೋರ್ಟ್ಗೆ ಸಲ್ಲಿಕೆ ಆಗುತ್ತಿದ್ದಂತೆ ಒಂದೊಂದೆ ವಿಚಾರಗಳು ಹೊರಬರುತ್ತಿದೆ. ಸದ್ಯ ರೇಣುಕಾಸ್ವಾಮಿ ಕೊಲೆ ಚಾರ್ಜ್ ಶೀಟ್ನಲ್ಲಿ ಸ್ಯಾಂಡಲ್ವುಡ್ನ ಮತ್ತಿಬ್ಬರು ನಟಿಯರ ಹೆಸರುಗಳು ಉಲ್ಲೇಖವಾಗಿವೆ.
ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಶುಭಾ ಪೂಂಜಾ ಹೆಸರು ಇದೆ. ಎ14 ಆರೋಪಿ ಪ್ರದೂಶ್ ಸ್ವ ಇಚ್ಛಾ ಹೇಳಿಕೆಯಲ್ಲಿ ಇಬ್ಬರ ನಟಿಯರ ಹೆಸರು ಉಲ್ಲೇಖ ಮಾಡಿದ್ದಾನೆ.
ರೇಣುಕಾಸ್ವಾಮಿ ಈ ಇಬ್ಬರು ನಟಿಯರಿಗೂ ಅಶ್ಲೀಲ ಸಂದೇಶ ಕಳಿಸಿದ್ದನಂತೆ. ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿದ ಬಳಿಕ ನಟ ದರ್ಶನ್ ಮೊಬೈಲ್ ತೆಗೆದುಕೊಂಡು ಪ್ರದೂಶ್ಗೆ ನೀಡಿದ್ದ. ಪ್ರದೂಶ್ ಮೊಬೈಲ್ ಪರಿಶೀಲನೆ ಮಾಡಿದಾಗ ರಾಗಿಣಿ ಹಾಗೂ ಶುಭಾ ಪೂಂಜಾಗೂ ಅಶ್ಲೀಲ ಸಂದೇಶ ಕಳುಹಿಸಿದ್ದಾನೆ ಎಂದು ದರ್ಶನ್ಗೆ ತಿಳಿಸಿದ್ದಾಗಿ ಸ್ವ ಇಚ್ಛೆ ಹೇಳಿಕೆಯನ್ನು ಪ್ರದೂಶ್ ನೀಡಿದ್ದಾನೆ.
ಆದರೆ ಶುಭ ಪೂಂಜಾ ಹಾಗೂ ರಾಗೀಣಿ ದ್ವಿವೇದಿ ಅಶ್ಲೀಲ ಮಸೇಜ್ ನಮಗೆ ಬಂದಿಲ್ಲ ಎಂದು ಹೇಳಿದ್ದಾರೆ. ಚಾರ್ಜ್ ಶೀಟ್ನಲ್ಲಿ ಹೆಸರು ಉಲ್ಲೇಖವಾಗಿರುವ ಬಗ್ಗೆ ನಟಿ ಶುಭ ಪೂಂಜಾ ಪೋಸ್ಟ್ ಮಾಡಿದ್ದಾರೆ. ರೇಣುಕಾಸ್ವಾಮಿಯಿಂದ ನನ್ನ ಪ್ರೊಫೈಲ್ಗೆ ಯಾವುದೇ ಮೆಸೇಜ್ ಬಂದಿಲ್ಲ. ನನ್ನ ಹೆಸರಿನ ಬೇರೆ ಪ್ರೊಫೈಲ್ಗಳಿಗೆ ಬಂದಿರುವ ಬಗ್ಗೆಯೂ ಗೊತ್ತಿಲ್ಲ. ಆದರೆ ನನ್ನ ಪ್ರೊಫೈಲ್ಗೆ ಯಾವುದೇ ಮೆಸೇಜ್ ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಚಾರ್ಜ್ ಶೀಟ್ನಲ್ಲಿ ಹೆಸರು ಉಲ್ಲೇಖವಾಗಿರುವ ಬಗ್ಗೆ ನಟಿ ರಾಗಿಣಿ ಪ್ರತಿಕ್ರಿಯೇ ನೀಡಿದ್ದಾರೆ. ಫೇಕ್ ಪ್ರೊಫೈಲ್ಗಳಿಂದ ನಿತ್ಯವೂ ಇಂತಹ ಮೆಸೇಜ್ಗಳು ಬರುತ್ತವೆ. ಅದರ ಬಗ್ಗೆ ನಾನು ತುಂಬಾ ತಲೆ ಕೆಡಿಸಿಕೊಳ್ಳಲ್ಲ. ಅಷ್ಟಕ್ಕೂ ಯಾವ ಪ್ರೊಫೈಲ್ನಿಂದ ಮೆಸೇಜ್ ಬಂದಿದೆ ಎಂಬುದರ ಬಗ್ಗೆಯೂ ನನಗೆ ಮಾಹಿತಿ ಇಲ್ಲ. ಯಾಕಂದರೆ ನನ್ನ ಸೋಶಿಯಲ್ ಮೀಡಿಯಾ ಪ್ರೊಫೈಲ್ನ ನಾನು ನೋಡಿಕೊಳ್ಳಲ್ಲ. ಸಿಂಗಾಪುರ್ ಮೂಲದ ಏಜೆಸ್ಸಿಗೆ ವಹಿಸಿದ್ದೇನೆ. ಏನೇ ಬಂದರು ಅದನ್ನು ಅವರು ಹ್ಯಾಂಡಲ್ ಮಾಡುತ್ತಾರೆ. ಹೀಗಾಗಿ ಯಾವ ಮೆಸೇಜ್ ಬಗ್ಗೆಯೂ ನಾನು ತಲೆ ಕೆಡಿಸಿಕೊಳ್ಳಲ್ಲ ಎಂದು ತಿಳಿಸಿದ್ದಾರೆ.
Post a comment
Log in to write reviews