ನವದೆಹಲಿ: ರಾಜ್ಯದ ಮೂರು ಸಂಸದರಿಗೆ ಕೇಂದ್ರ ಸಚಿವ ಸ್ಥಾನ ದಕ್ಕಲಿದೆ ಎಂಬಂತಹ ಸಂಭಾವ್ಯ ಪಟ್ಟಿಯೊಂದು ಹೊರಬಿದ್ದಿದೆ. ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಕ್ಷಣಗಣನೆ ಶುರುವಾಗಿದ್ದು, ರಾsaಷ್ಟ್ರಪತಿ ಭವನದಲ್ಲಿ ಇಂದು ಸಂಜೆ 7.15ಕ್ಕೆ ಪದಗ್ರಹಣ ನಡೆಯಲಿದೆ. ಇದರ ನಡುವೆ ಮೋದಿ ಸಚಿವ ಸಂಪುಟವನ್ನು ಯಾರು ಸೇರುತ್ತಾರೆ ಎಂಬ ಚರ್ಚೆಗೆ ಇದೀಗ ಉತ್ತರ ದೊರೆತಿದೆ. ಆ ಪ್ರಕಾರವಾಗಿ ಕರ್ನಾಟಕದಿಂದ ಸಂಸದರಾಗಿ ಆಯ್ಕೆಯಾದ ಎಚ್.ಡಿ.ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆಗೆ ಸಚಿವ ಸ್ಥಾನ ಸಿಗಬಹುದು ಎಂದು ನಿರೀಕ್ಷಿಸಲಾಗಿದೆ. ಇನ್ನು ತಮಿಳುನಾಡಿನ ಕೊಯಂಬತ್ತೂರು ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದ ಅಣ್ಣಾಮಲೈ ಸೋಲು ಕಂಡರು ಅವರಿಗೆ ಸಚಿವ ಸ್ಥಾನ ನೀಡುವ ಲಕ್ಷಣಗಳು ಕಂಡುಬರುತ್ತಿರುವುದು ಅಚ್ಚರಿಯ ಬೆಳವಣಿಗೆಯಾಗಿದೆ.
ಇನ್ನುಳಿದಂತೆ ಜ್ಯೋತಿರಾದಿತ್ಯ ಸಿಂಧಿಯಾ, ಎಂಎಲ್ ಖಟ್ಟರ್, ಚಂದ್ರಶೇಖರ ಚೌಧರಿ, ಜಯಂತ್ ಚೌಧರಿ, ಮನ್ಸುಖ್ ಮಾಂಡವಿಯಾ, ಅಶ್ವಿನಿ ವೈಷ್ಣವ್, ಪಿಯೂಷ್ ಗೋಯಲ್, ಕಿರಣ್ ರಿಜಿಜು, ರಕ್ಷಾ ಖಡ್ಸೆ, ಕಮಲಜೀತ್ ಸೆಹ್ರಾವತ್, ರಾವ್ ಇಂದ್ರಜಿತ್ ಸಿಂಗ್, ರಾಮದಾಸ್ ಅಠವಳೆ, ರಾಜನಾಥ್ ಸಿಂಗ್, ನಿತಿನ್ ಗಡ್ಕರಿ, ಅರ್ಜುನ್ ರಾಮ್ ಮೇಘವಾಲ್, ಚಿರಾಗ್ ಪಾಸ್ವಾನ್, ಸರ್ಬಾನಂದ ಸೋನೋವಾಲ್, ಶಿವರಾಜ್ ಸಿಂಗ್ ಚೌಹಾಣ್, ಚಂದ್ರಶೇಖರ್ ಪೆಮ್ಮಸಾನಿ, ರಾಮ್ ಮೋಹನ್ ನಾಯ್ಡು ಕಿಂಜರಾಪು, ರಾಮ್ ನಾಥ್ ಠಾಕೂರ್, ಲಾಲನ್ ಸಿಂಗ್, ಪ್ರತಾಪ್ ರಾವ್ ಜಾಧವ್ ಇವರುಗಳಿಗೆ ಸಚಿವರ ಸ್ಥಾನ ಸಿಗಬಹುದು ಎಂದು ಸಂಭಾವ್ಯ ಪಟ್ಟಿಯಲ್ಲಿ ತಿಳಿಸಲಾಗಿದೆ.
Post a comment
Log in to write reviews