ವಿಶ್ವದ ದುಬಾರಿ ಹಣ್ಣುಗಳಲ್ಲಿ ಒಂದಾದ ಜಪಾನ್ ಮೂಲದ ಮಿಯಾಜಾಕಿ ತಳಿಯ ಮಾವಿನ ಹಣ್ಣು ಇದೀಗ ಕರ್ನಾಟಕಕ್ಕೂ ಕಾಲಟ್ಟಿದೆ. ಕೆಜಿಗೆ ಸರಿಸುಮಾರು ೨,೫೦ ಲಕ್ಷ ಬೆಲೆಬಾಳುವ ಈ ಹಣ್ಣನ್ನು ಇದುವರೆಗೆ ಭಾರತ ಮತ್ತು ಪಶ್ಚಿಮ ಬಂಗಾಳದಲ್ಲಿ ಬೆಳೆಯಲಾಗಿತ್ತು. ಇದೀಗ ವಿಜಯಪುರ ಜಿಲ್ಲೆಯ ಅಷ್ಪಕ್ ಪಾಟೀಲ್ ಎಂಬ ಯುವಕ ಈ ಹಣ್ಣನ್ನು ತಮ್ಮ ಕೈತೋಟದಲ್ಲಿ ಬೆಳೆದಿದ್ದಾರೆ.
ಅಷ್ಪಕ್ ಎಂಟು ತಿಂಗಳ ಹಿಂದೆ ಒಂದು ಸಸಿಗೆ ೨.೫೦೦ ರೂ ಕೊಟ್ಟು ಖರೀದಿಸಿ 600 ಸಸಿಗಳನ್ನು ನಾಟಿ ಮಾಡಿದ್ದರು, ಅದರಲ್ಲೀಗ ಫಸಲು ಬಂದಿದ್ದು ಮಿಯಾಜಾಕಿ ಗಿಡದಲ್ಲಿ 14 ಹಣ್ಣು ಗಳು ಬಿಟ್ಟಿದೆ. ಆ ಹಣ್ಣನ್ನು ತೋಟಗಾರಿಕೆ ಇಲಾಖೆ ವತಿಯಿಂದ ಆಯೋಜಿಸಿರುವ ಮಾವು ಮೇಳದಲ್ಲಿ ಪ್ರದರ್ಶನಕ್ಕೆ ಇರಿಸಲಾಗಿದೆ. ಕರ್ನಾಟಕದಲ್ಲಿ ಪ್ರಪ್ರಥಮ ಬಾರಿಗೆ ಮಿಯಾಜಾಕಿ ಬೆಳೆದು ಲಕ್ಷಾಂತರ ರೂಪಾಯಿ ಲಾಭದ ನಿರೀಕ್ಷೆಯಲ್ಲಿರುವ ಅಷ್ಪಕ್ ಪಟೇಲ್ ತಾವೊಬ್ಬ ಪ್ರಯೋಗ ಶೀಲ ರೈತ ಎಂಬುದನ್ನ ಸಾಬೀತು ಪಡಿಸಿದ್ದಾರೆ. ಮಿಯಾಜಾಕಿ ಮಾವು ಫಸಲಿನ ಯಶಸ್ಸು ಬೇರೆ ರೈತರಿಗೂ ಈ ಕೃಷಿಯಲ್ಲಿ ತೊಡಗಲು ಉತ್ತೇಜನ ನೀಡಿದಂತಾಗಿದೆ, ಮಿಯಾಜಾಕಿ ತಳಿಯ ಮಾವು ಸೆರಿದಂತೆ ಇತರೆ ಬೆಳೆ ಬೆಳೆಯಲು ಕೃಷಿ ಮತ್ತು ತೋಟಗಾರಿಕೆ ಇಲಾಖೆ ಪ್ರೋತ್ಸಾಹದ ಅಗತ್ಯವಿದೆ. ಇತ್ತೀಚೆಗೆ ಬೆಂಗಳೂರು ಹೊರವಲಯದ ಹೊಸಕೋಟೆಯಲ್ಲಿ ಯುವಕನೊಬ್ಬ ಕಾಶ್ಮೀರಿ ಆಪಲ್ ಬೆಳೆದ ಯಶಸ್ವಿಯಾಗಿದ್ದನ್ನು ಈಗ ಸ್ಮರಿಸಬಹುದು.
Post a comment
Log in to write reviews