ಲಾರಿ ಚಾಸ್ಸಿ ಬಳಸಿ ಗ್ರಾಮಸ್ಥರಿಗೆ ಸೇತುವೆ ನಿರ್ಮಿಸಿಕೊಟ್ಟ ಶಾಸಕ ಗುರುರಾಜ್ ಗಂಟಿಹೊಳೆ
ಉಡುಪಿ: ಮಳೆಗಾಲದಲ್ಲಿ ಕಿರು ಸೇತುವೆ ಇಲ್ಲದೆ ಕಂಗಾಲಾಗಿ ನಿಟ್ಟುಸಿರು ಬಿಡುತ್ತಿರುವ ಗ್ರಾಮಸ್ಥರಿಗೆ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ತಮ್ಮ ಕ್ಷೇತ್ರದ ಜನರಿಗೆ ನೆರವು ನೀಡುವ ಉದ್ದೇಶಕ್ಕೆ ಯಡಮೊಗೆಯಲ್ಲಿ ಕ್ರೌಡ್ ಫಂಡಿಂಗ್ ಮೂಲಕ ಅತ್ಯಂತ ಕಡಿಮೆ ವೆಚ್ಚದಲ್ಲಿ ಸೇತುವೆ ನಿರ್ಮಿಸಿದ್ದಾರೆ. ಅದು ಕೂಡ ಹಳೆ ಲಾರಿಯ ಚಾಸ್ಸಿ ಬಳಸಿ ಕಿರು ಸೇತುವೆಯನ್ನು ನಿರ್ಮಿಸಲಾಗಿದೆ.
ಕಳೆದ ಬಾರಿ ಸಮರ್ಪಕ ಕಿರು ಸೇತುವೆ ಇಲ್ಲದೆ ಶಾಲಾ ಬಾಲಕಿ ನೀರು ಪಾಲಾಗಿದ್ದಳು. ಈ ಹಿನ್ನೆಲೆಯಲ್ಲಿ ಮಳೆಗಾಲದಲ್ಲಿ ಆಗುವ ಸಾವು- ನೋವು ತಪ್ಪಿಸಲು ಸಮೃದ್ಧ ಬೈಂದೂರು ಮತ್ತು ಅರುಣಾಚಲ ಟ್ರಸ್ಟ್ ಸಹಭಾಗಿತ್ವದಲ್ಲಿ ಸೇತುವೆ ನಿರ್ಮಿಸಲಾಗಿದೆ.
ಮಳೆಗಾಲದಲ್ಲಿ ಸುಮಾರು 30 ಮನೆಗಳಿಗೆ ಸಂಪರ್ಕವೇ ಇಲ್ಲದೇ ಕಂಗಲಾಗಿದ್ದರು. ಮೂರು ಲಾರಿಗಳ ಹಳೆಯ ಚಾಸ್ಸಿ ಬಳಸಿ ಕಿರು ಸೇತುವೆಯನ್ನು ನಿರ್ಮಾಣ ಮಾಡಲಾಗಿದೆ. ರಾಜ್ಯದಲ್ಲಿಯೇ ಮೊದಲ ಬಾರಿಗೆ ಕಡಿಮೆ ಖರ್ಚಿನಲ್ಲಿ ಲಾರಿಯ ಚಾಸ್ಸಿ, ಬೋರ್ ವೇಲ್ ಪೈಪ್, ಜಿಎ ಪೈಟ್, ಕಬ್ಬಿಣ ತಗಡು ಬಳಸಿ ಸೇತುವೆ ನಿರ್ಮಿಸಲಾಗಿದೆ. ಅಂದಾಜು 2 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಕಿರು ಸೇತುವೆ ನಿರ್ಮಿಸಲಾಗಿದೆ.
Post a comment
Log in to write reviews