ಹಾವೇರಿಯಲ್ಲಿ ರಣಭೀಕರ ಮಳೆ ಸಾಕಷ್ಟು ಅವಾಂತರ ಸೃಷ್ಟಿ ಮಾಡಿದ್ದು, ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಮೂಲಭೂತ ಸೌಕರ್ಯಗಳ ಕೊರತೆಯಿಂದ ಜನರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಈ ಮಧ್ಯೆ ಬಿಜೆಪಿ ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿದೆ.
ಹಾವೇರಿಯ ಜನತೆ ಅಕಾಲಿಕ ಮಳೆಯಿಂದ ಇನ್ನಿಲ್ಲದ ತೊಂದರೆ ಅನುಭವಿಸುತ್ತಿದ್ದರೂ, ಶಾಸಕ ರುದ್ರಪ್ಪ ಲಮಾಣಿ ಮಾತ್ರ ಇದುವರೆಗೂ ಸ್ಥಳಕ್ಕೆ ಆಗಮಿಸಿ, ಜನತೆಗೆ ಧೈರ್ಯ ಹೇಳಿಲ್ಲ. ರುದ್ರಪ್ಪ ಲಮಾಣಿ ಅವರು ಎಲ್ಲೇ ಇದ್ದರೂ ಒಮ್ಮೆ ಹಾವೇರಿಗೆ ಬನ್ನಿ ಎಂದು ಹಾವೇರಿಯ ಜನತೆ ಟ್ರೈನ್ ಟಿಕೆಟ್ ಬುಕ್ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರೆ, ಡಿಸಿಎಂ ಡಿಕೆಶಿ ಅವರೇ, ದಯವಿಟ್ಟು ಟ್ರೈನ್ ಟಿಕೆಟ್ ಅನ್ನು ರುದ್ರಪ್ಪ ಲಮಾಣಿ ಅವರಿಗೆ ನೀಡಿ, ಹಾವೇರಿ ಜನತೆಗೆ ಸಹಾಯ ಮಾಡಿ ಎಂದಿದ್ದಾರೆ.
Post a comment
Log in to write reviews